ಬೆಂಗಳೂರು, ಏಪ್ರಿಲ್, 19,2025 (www.justkannada.in): ಕಾಂಗ್ರೆಸ್ ಪ್ರತಿಭಟನೆ ವೇಳೆ ತನ್ನನ್ನು ಚಂಗ್ಲು ಎಂದ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಆರ್.ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಕೆಂಡಕಾರಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಮುನಿರತ್ನ, ನಮ್ಮ ರಾಜ್ಯದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ‘ಅವನು ಯಾವನೋ ಒಬ್ಬ ಚಂಗ್ಲು’ ಎಂಬ ಪದಬಳಕೆ ಮಾಡಿದ್ದಾರೆ. ವರ್ಡ್ ಬ್ಯಾಂಕ್ ಹೆಸರಿನಲ್ಲಿ ಸಾಲ ತಂದು ಇವರ ಲಾಭಕ್ಕಾಗಿ ರಾಜಕಾಲುವೆಗಾಗಿ ಭ್ರಷ್ಟಾಚಾರ ನಡೆದಿದೆ ಎಂದು ನಾನು ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇನೆ. ಅದಕ್ಕೆ ಅವನ್ಯಾವನೋ ಚಂಗಲು ಒಬ್ಬ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾನೆ ಎಂದು ನನ್ನು ವಿರುದ್ಧ ಡಿ.ಕೆ.ಶಿವಕುಮಾರ್ ಮಾತಾಡಿದ್ದಾರೆ. ನಮ್ಮ ದೇಶದಲ್ಲಿ ದೂರು ನೀಡಲು ಪ್ರತಿಯೊಬ್ಬರಿಗೂ ಹಕ್ಕಿದೆ. ನಾನು ಎರಡು ಸಾವಿರ ಕೋಟಿ ರೂ. ಹಗರಣದ ಬಗ್ಗೆ ದೂರು ಕೊಟ್ಟಿದ್ದೇನೆ .ಈ ದೂರಿಗೆ ಈಗಲೂ ನಾನು ಬದ್ಧ. ಈ ದೂರು ಸರಿಯಲ್ಲ ಎಂದು ಬೇಕಾದರೆ ಹೇಳಲಿ, ದಾಖಲೆಯೂ ಸರಿ ಇಲ್ಲ ಎಂದು ಹೇಳಲು ನನ್ನದೇನು ತಕರಾರು ಇಲ್ಲ. ಅದನ್ನು ಬಿಟ್ಟು ಚಂಗಲು ಎನ್ನುವ ಪದಬಳಕೆ ಸರಿ ಇಲ್ಲ ಎಂದು ಕಿಡಿಕಾರಿದರು.
ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ನಲ್ಲಿ ಇದ್ದು ಅಮಿತ್ ಶಾರನ್ನ ಭೇಟಿ ಮಾಡೋದು. ಪ್ರಯಾಗರಾಜ್ ಹೋಗೋದು ಗಂಗಾ ನದಿಯಲ್ಲಿ ಮುಳುಗುವುದು. ಪಿಎಂ ಬಂದಾಗ ಡಿಸಿಎಂ ಕೆಲಸ ಸ್ವಾಗತ ಮಾಡೋದು. ಇವರು ಕಾರ್ಯಕರ್ತರ ರೀತಿಯಲ್ಲಿ ಪಿಎಂ ಬಂದಾಗ ಲೈನ್ ನಲ್ಲಿ ನಿಂತಿರುತ್ತಾರೆ. ಹೀಗೆ ಥಟ್ ಅಂತ ಬದಲಾವಣೆ ಆಗುವವರಿಗೆ ಚಂಗ್ಲು ಅಂತ ಪದ ಪ್ರಯೋಗ ಮಾಡ್ತಾರೆ. ಹೀಗಾಗಿ ಆ ಚಂಗಲು ನೀವೇ ಎಂದು ಡಿಕೆ ಶಿವಕುಮಾರ್ ಗೆ ಶಾಸಕ ಮುನಿರತ್ನ ಟಾಂಗ್ ಕೊಟ್ಟರು.
ನನ್ನನ್ನು ತೇಜೋವಧೆ ಮಾಡಿ ಡಿಕೆಶಿ ಏನು ಸಾಧನೆ ಮಾಡುತ್ತಾರೆ? ನಲವತ್ತು ವರ್ಷದ ರಾಜಕಾರಣಿ ಡಿಕೆ ಶಿವಕುಮಾರ್, ಆದರೆ, ನಲವತ್ತು ಶಾಸಕರು ಜತೆಗೆ ಇಲ್ಲ. ಇದು ನಿಮ್ಮ ರಾಜಕೀಯ ಪರಂಪರೆ, ಸಣ್ಣ ಸಣ್ಣ ಆಲೋಚನೆ ಬಿಡಿ. ಏಕೆ ಈ ದ್ವೇಷ? ನನಗೂ ನಿಮಗೂ ಕಿಡ್ನಿಗಳು ಅರ್ಧ ಹೋಗಿವೆ. ನಾನೂ, ಅವರು ಮಾತ್ರೆ ತೆಗೆದುಕೊಳ್ಳಲಿಲ್ಲ ಅಂದರೆ ಬದುಕಲ್ಲ. ಮತ್ಯಾಕೆ ಈ ದ್ವೇಷ, ಇದು ಬೇಕಾ? ಎಂದು ಮುನಿರತ್ನ ಪ್ರಶ್ನಿಸಿದರು.
Key words: Statement, DCM, DK Shivakumar, MLA, Munirathna
The post ‘ಚಂಗ್ಲು’ ಹೇಳಿಕೆ: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಕೆಂಡಕಾರಿದ ಶಾಸಕ ಮುನಿರತ್ನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.