ಮೈಸೂರು,ಮಾರ್ಚ್,9,2025 (www.justkannada.in): ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯದಲ್ಲಿಂದು ಭಾರತ ಮತ್ತು ನ್ಯೂಜಿಲೆಂಡ್ ಸೆಣಸಾಟ ನಡೆಸಲಿವೆ.
ಟೀಮ್ ಇಂಡಿಯಾ ಮತ್ತು ಕಿವಿಸ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕೋಟ್ಯಾನೂ ಕೋಟಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ದುಬೈನ ಅಂತರ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂದು 2.30 ಕ್ಕೆ ಪಂದ್ಯ ಆರಂಭವಾಗಲಿದೆ.
ಟೀಮ್ ಇಂಡಿಯಾ ಗೆದ್ದು ಬರಲಿ ಎಂದು ಎಂದು ಶುಭ ಹಾರೈಕೆ
ಇಂದು ಇಂಡಿಯಾ vs ನ್ಯೂಜಿಲ್ಯಾಂಡ್ ಫೈನಲ್ ಕ್ರಿಕೇಟ್ ಪಂದ್ಯಾವಳಿ ಹಿನ್ನಲೆ, ಟೀಮ್ ಇಂಡಿಯಾ ಗೆದ್ದು ಬರಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ
ಮೈಸೂರಿನ 101 ಗಣಪತಿ ದೇವಸ್ಥಾನದಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ ಕರ್ನಾಟಕ ಸೇನಾಪಡೆ ವತಿಯಿಂದ 101 ತೆಂಗಿನಕಾಯಿ ಹೊಡೆದು ಪೂಜೆ ಸಲ್ಲಿಕೆ ಮಾಡಲಾಗಿದೆ.
ಭಾರತದ ಗೆಲುವಿಗಾಗಿ ಕ್ರಿಕೆಟ್ ಪ್ರೇಮಿಗಳು ವಿಘ್ನೇಶ್ವರನ ಮೊರೆ ಹೋಗಿದ್ದು ಟೀಮ್ ಇಂಡಿಯಾ ತಂಡದ ಕ್ರಿಕೆಟರ್ಸ್ ಫೋಟೋ ಹಿಡಿದು ಭಾರತ ಕ್ರಿಕೆಟ್ ತಂಡಕ್ಕೆ ಜಯವಾಗಲಿ ಎಂದು ಶುಭ ಕೋರಿದ್ದಾರೆ.
ಕಳೆದ ಲೀಗ್ ಹಂತದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸ್ಪಿನ್ ಬೌಲಿಂಗ್ ಈ ಬಾರಿಯೂ ನಿರ್ಣಯಕ ಪಾತ್ರ ವಹಿಸುತ್ತಾ ಕಾದು ನೋಡಬೇಕಿದೆ. 4 ಬಾರಿ ಇಂಡಿಯಾ ಫೈನಲ್ ಗೆ ಲಗ್ಗೆ ಇಟ್ಟಿದ್ದು. ಎರಡು ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ನ್ಯೂಜಿಲ್ಯಾಂಡ್ ಎರಡು ಬಾರಿ ಫೈನಲ್ ಪ್ರವೇಶಿಸಿ ಒಂದು ಬಾರಿ ಚಾಂಪಿಯನ್ಸ್ ಆಗಿದೆ. ಏಕದಿನ ಪಂದ್ಯವಳಿಗಳಲ್ಲಿ ಇದುವರೆಗು ಭಾರತ ನ್ಯೂಜಿಲೆಂಡ್ ಆಡಿರುವ ಪಂದ್ಯ ಒಟ್ಟು 119. 61 ರಲ್ಲಿ ಭಾರತಕ್ಕೆ ಗೆಲುವು, 50 ರಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದರೆ 1 ಡ್ರಾ, 7 ಪಂದ್ಯ ರದ್ದುಗೊಂಡಿವೆ.
ರೋಹಿತ್ ಶರ್ಮಾ (ನಾಯಕ) ಶುಬ್ಮನ್ ಗಿಲ್, ವಿರಾಟ್ ಕೋಹ್ಲಿ,ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವಿಂದ್ರ ಜಡೇಜಾ, ವಾಷಿಂಗ್ ಟನ್ ಸುಂದರ್, ಹರ್ಷಿತ್ ರಾಣ, ಮೊಹಮದ್ ಶಮಿ, ಆರ್ಷ್ ದೀಪ್ ಸಿಂಗ್, ಕುಲ್ದಿಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ತಂಡದಲ್ಲಿದ್ದು ಆಡುವ 11ರ ಬಳಗದಲ್ಲಿ ಯಾರು ಬರಲಿದ್ದಾರೆ ಕಾದು ನೋಡಬೇಕಿದೆ
ನ್ಯೂಜಿಲೆಂಡ್ ಪಡೆಯಲ್ಲಿ ನಾಯಕ ಮಿಚೆಲ್ ಸ್ಯಾಂಟ್ನರ್, ಬ್ರೆಸ್ ವೆಲ್ ,ಡೆವೋನ್ ಕಾನ್ವೆ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡೇರಲ್ ಮಿಚೆಲ್, ಟಾಮ್ ಲೇಥಮ್, ಗ್ಲೆನ್ ಫಿಲಿಫ್ಸ್ ಕೈಲ್ ಜೆಮಿಷನ್, ಮ್ಯಾಟ್ ಹೆನ್ರಿ ಮತ್ತು ವಿಲ್ ಒರೂರ್ಕ್ ಇದ್ದಾರೆ.
Key words: Champions Trophy, India vs New Zealand. Final. today
The post ಚಾಂಪಿಯನ್ಸ್ ಟ್ರೋಫಿ: ಇಂದು ಭಾರತ vs ಕಿವಿಸ್ ಫೈನಲ್ : ಟೀಮ್ ಇಂಡಿಯಾಗೆ ಶುಭ ಹಾರೈಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.