ಮೈಸೂರು,ಜೂನ್,2,2025 (www.justkannada.in): 60 ಗ್ರಾಂ ಚಿನ್ನಕ್ಕಾಗಿ ನಿಶ್ಚಿತಾರ್ಥವಾಗಿದ್ದ ಯುವಕನನ್ನ ಕಾರಿನಲ್ಲೆ ಹೊಡೆದು ಕೊಂದು ಹಾಡಹಗಲೇ ಶವ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಬ್ಯಾಡರಪುರದ ಮೋಹನ್ ಕುಮಾರ್ (31) ಕೊಲೆಯಾದ ವ್ಯಕ್ತಿ. ಕೊಲೆ ಕೇಸ್ ನಲ್ಲಿ ಪ್ರಜ್ವಲ್ , ಚಂದು, ಕಬೀರ್ ಕಾಳಯ್ಯ,ದರ್ಶನ್ ಬಂಧಿತ ಆರೋಪಿಗಳು. ಪ್ರಮುಖ ಕೊಲೆ ಆರೋಪಿಯಾಗಿರುವ ಮೈಸೂರು ಮೂಲದ ಶ್ರೀನಿವಾಸ್ ನಾಪತ್ತೆಯಾಗಿದ್ದಾನೆ.
ಏ. 18 ರಂದು ಈ ಘಟನೆ ನಡೆದಿತ್ತು. ಮೃತ ಮೋಹನ್ ಕುಮಾರ್ ಬೋಗಾದಿ ಲಾಡ್ಚ್ ಒಂದರಲ್ಲಿ ಮ್ಯಾನೇಜರ್ ಆಗಿದ್ದ. ಕೊಲೆ ಆರೋಪಿ ಶ್ರೀನಿವಾಸ್ ಲಾಡ್ಜ್ ನಲ್ಲಿ ಇಸ್ಪೀಟ್ ಆಟವಾಡಲು ಬರುತ್ತಿದ್ದ. ಈ ಮಧ್ಯೆ ಜೂಜಿಗಾಗಿ ಪತ್ನಿಯ 60 ಗ್ರಾಂ ಚಿನ್ನದ ಸರವನ್ನು ಕೊಲೆ ಆರೋಪಿ ಶ್ರೀನಿವಾಸ್ ತಂದಿದ್ದನು. ಆದರೆ ಹುಣ್ಣಿಮೆ ಕಾರಣ ಮಾರವಾಡಿ ಗಿರಿವಿ ಇಟ್ಟುಕೊಳ್ಳಲ್ಲ ಎಂದಿದ್ದರು. ಹೀಗಾಗಿ ಶ್ರೀನಿವಾಸ್ ಲಾಡ್ಜ್ ನ ರೂಂನ ಹಾಸಿಗೆ ದಿಂಬಿನ ಕೆಳಗೆ ಚಿನ್ನದ ಸರ ಇಟ್ಟಿದ್ದನು.
ಇದೇ ವೇಳೆ ಚಿನ್ನಸ ಸರ ಕಳವು ಮಾಡಿದ್ದ ಮೃತ ಮೋಹನ್ ಕುಮಾರ್ ಬಳಿಕ ಸ್ವಗ್ರಾಮ ಬ್ಯಾಡರಪುರಕ್ಕೆ ಹೋಗಿದ್ದ ಚಿನ್ನ ಗಿರವಿ ಇಟ್ಟು ನಿಶ್ಚಿತಾರ್ಥ ಮಾಡಿಕೊಂಡಿದ್ದನು. ಇದಾದ ಬಳಿಕ ಆರೋಪಿ ಶ್ರೀನಿವಾಸ್ ಸರಸ್ವತಿಪುರಂ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು ಚಿನ್ನ ಪತ್ತೆಯಾಗಿರಲಿಲ್ಲ. ಬಳಿಕ ಶ್ರೀನಿವಾಸ್ ಮತ್ತು ಆರೋಪಿಗಳು ಮನೆಯಿಂದ ಮೋಹನ್ ಕುಮಾರ್ ಕರೆಸಿ ಕಾರಿನಲ್ಲಿ ಕರೆದೊಯ್ದು ಹತ್ಯೆ ಮಾಡಿದ್ದಾರೆ. ನಂತರ ಯಾರಿಗೂ ತಿಳಿಯದಂತೆ ಮೈಸೂರು ತಾಲೂಕಿನ ಗುಮಚನಹಳ್ಳಿ ಬಳಿ ಹಾಡಹಗಲೇ ಶವ ಸುಟ್ಟುಹಾಕಿ ಆರೋಪಿಗಳು ಎಸ್ಕೇಪ್ ಆಗಿದ್ದರು.
ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ್ದ ಜಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಶಿವನಂಜ ಶೆಟ್ಟಿ, ಜಯಪುರ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ಅತ್ತಿಮನಿ ನೇತೃತ್ವದಲ್ಲಿ ನಾಲ್ವರು ಆರೋಪಿಗಳನ್ನ ಬಂಧಿಸಿದ್ದು, ಪ್ರಮುಖ ಆರೋಪಿ ಶ್ರೀನಿವಾಸ್ ಗಾಗಿ ಕಾರ್ಯಾಚರಣೆ ಮಂದುವರೆದಿದೆ.
Key words: Young man, Murder, steal, gold ,Four, accused, arrested
The post ಚಿನ್ನ ಕದ್ದು ಜೀವ ಬಿಟ್ಟ ನಿಶ್ಚಿತಾರ್ಥವಾಗಿದ್ದ ಯುವಕ: ಹತ್ಯೆಗೈದಿದ್ದ ನಾಲ್ವರು ಆರೋಪಿಗಳ ಬಂಧನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.