14
July, 2025

A News 365Times Venture

14
Monday
July, 2025

A News 365Times Venture

ಚೆನ್ನೈ ವಿಮಾನ ನಿಲ್ದಾಣದಲ್ಲಿ 10 ರೂ.ಗೆ ಚಹಾ, 20 ರೂ.ಗೆ ಸಮೋಸಾ..!

Date:

 

ಚೆನ್ನೈ, ಫೆ.೨೭, ೨೦೨೫ : ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕರು ಈಗ ಕೇವಲ 10 ರೂ.ಗೆ ಒಂದು ಕಪ್ ಚಹಾವನ್ನು ಆನಂದಿಸಬಹುದು,

ಹೊಸದಾಗಿ ಪ್ರಾರಂಭಿಸಲಾದ “ ಉಡಾನ್ ಯಾತ್ರಿ ಕೆಫೆ” ಗೆ ಧನ್ಯವಾದಗಳು. ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜಾರಪು ಅವರು ಪರಿಚಯಿಸಿದ ಪ್ರಾಯೋಗಿಕ ಯೋಜನೆಯು ವಿಮಾನ ನಿಲ್ದಾಣಗಳಲ್ಲಿ ಹೆಚ್ಚಾಗಿ ಕಂಡುಬರುವ ಹೆಚ್ಚಿನ ಬೆಲೆಯ ಆಹಾರ ಮತ್ತು ಪಾನೀಯಗಳ ಸಮಸ್ಯೆಯನ್ನು ನಿಭಾಯಿಸುವ ಗುರಿಯನ್ನು ಹೊಂದಿದೆ.

ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಸಹಯೋಗದೊಂದಿಗೆ ಪ್ರಾರಂಭಿಸಲಾದ ಈ ಕೆಫೆಯಲ್ಲಿ ಬಜೆಟ್ ಸ್ನೇಹಿ ನೀರಿನ ಬಾಟಲಿಗಳು ಮತ್ತು ಚಹಾವನ್ನು 10 ರೂ.ಗೆ ಮತ್ತು ಕಾಫಿಯನ್ನು 20 ರೂ.ಗೆ ನೀಡಲಾಗುತ್ತದೆ. ಜತೆಗೆ  ಸಮೋಸಾ, ವಡೆ  ಮತ್ತು ದೈನಂದಿನ ಸಿಹಿತಿಂಡಿಗಳಂತಹ ತಿಂಡಿಗಳ ಬೆಲೆಯೂ 20 ರೂ. ನಿಗಧಿ ಪಡಿಸಿರುವುದು ವಿಶೇಷ.

ಈಗಾಗಲೇ ಪಶ್ಚಿಮ ಬಂಗಳಾದಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು, ಇದೀಗ ಚೆನ್ನೈ ವಿಮಾನ ನಿಲ್ದಾಣದಲ್ಲೂ ಜಾರಿಗೆ ತರಲಾಗಿದೆ. ಬೆಲೆ ಹೆಚ್ಚಳ ಕಾರಣದಿಂದ ವಿಮಾನಯಾನ ಪ್ರಯಾಣಿಕರು ಆಹಾರ ಸೇವನೆಯಿಂದ ವಂಚಿತರಾಗದಿರಲಿ ಎಂಬ ಉದ್ದೇಶದಿಂದ ಈ ಕೆಫೆ ಪ್ರಾರಂಭಿಸಲಾಗಿದೆ ಎಂದು ಸಚಿವರು ತಿಳಿಸಿದರು.

ತ್ರಿಭಾಷ ನೀತಿ:

ಸದ್ಯ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ಭಾರಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ನೂತನವಾಗಿ ಕಾರ್ಯರಂಭಗೊಂಡಿರುವ “ ಉಡಾನ್‌ ಯಾತ್ರಿ ಕೆಫೆ “ ತ್ರಿಭಾಷ ಸೂತ್ರ ಅಳವಡಿಸಲಾಗಿದೆ, ಮೊದಲಿಗೆ ತಮಿಳಿನಲ್ಲಿ ಆನಂತರ ಹಿಂದಿ ಹಾಗೂ ಇಂಗ್ಲಿಷ್‌ ನಲ್ಲಿ ಸೂಚನ ಫಲಕಗಳನ್ನು ಅಳವಡಿಸಲಾಗಿದೆ.

KEY WORDS: Tea at Rs 10, samosas for Rs 20 at Chennai airport, Udaan Yatri Cafe

SUMMERY:

Thanks to the newly launched “Udaan Yatri Cafe”. The pilot project introduced by Civil Aviation Minister Ram Mohan Naidu Kinjarapu is aimed at tackling the problem of high-priced food and beverages, which are often found at airports.

 

The post ಚೆನ್ನೈ ವಿಮಾನ ನಿಲ್ದಾಣದಲ್ಲಿ 10 ರೂ.ಗೆ ಚಹಾ, 20 ರೂ.ಗೆ ಸಮೋಸಾ..! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜು.19 ರಂದು ಮೈಸೂರಿನಲ್ಲಿ ಬೃಹತ್ ಸಮಾರಂಭ: ಸಕಲ ಸಿದ್ದತೆಗೆ ಸಚಿವ ಹೆಚ್.ಸಿ.ಮಹದೇವಪ್ಪ ಸೂಚನೆ

ಮೈಸೂರು,ಜುಲೈ,12,2025 (www.justkannada.in):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜುಲೈ19 ರಂದು ಮಹಾರಾಜ...

ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂದು: ಸೈನ್ಯ ,ಅಂತರಿಕ್ಷದಲ್ಲೂ ಕೆಲಸ ಪ್ರಗತಿಯ ಪ್ರತೀಕ: ಸಿ.ಎಂ ಸಿದ್ದರಾಮಯ್ಯ

ಬೆಂಗಳೂರು ಜುಲೈ,13,2025 (www.justkannada.in):  ಶೇ100 ರಷ್ಟು ಅಂಕಗಳನ್ನು ಪಡೆಯುವುದರಲ್ಲಿ ಹೆಣ್ಣುಮಕ್ಕಳೇ ಮುಂದಿದ್ದು,...

ಸರ್ಕಾರದಲ್ಲಿ ಮೋಡ ಕವಿದ ವಾತಾವರಣ: ಯಾವಾಗ ಗುಡುಗು ಸಿಡಿಲು ಬರುತ್ತೋ ಗೊತ್ತಿಲ್ಲ-ಬಿವೈ ವಿಜಯೇಂದ್ರ

ಬೆಂಗಳೂರು,ಜುಲೈ,12,2025 (www.justkannada.in): ಸರ್ಕಾರದಲ್ಲಿ ಒಂದು ರೀತಿಯ ಮೋಡ ಕವಿದ ವಾತಾವರಣವಿದೆ ....

ಬೀದಿನಾಯಿಗಳಿಗೆ ಬಿರಿಯಾನಿ: ಲೂಟಿ ಮಾಡುವ ಉದ್ದೇಶ- ಆರ್‌.ಅಶೋಕ್

ಬೆಂಗಳೂರು, ಜುಲೈ 12,2025 (www.justkannada.in): ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆ...