ಬೆಂಗಳೂರು,ಏಪ್ರಿಲ್,18,2025 (www.justkannada.in): ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಹಾಕಿದ್ದ ಜನಿವಾರ ತೆಗೆಸಿದ ಘಟನೆಯನ್ನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಖಂಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಯಾವ ಇಲಾಖೆಯೂ ಇಂತಹ ನಿರ್ದೇಶನ ಕೊಟ್ಟಿಲ್ಲ. ಘಟನೆಗೆ ಕಾರಣರಾದವರ ವಿರುದ್ದ ಕ್ರಮ ಆಗಬೇಕು. ಪರೀಕ್ಷೆಯಿಂದ ವಂಚಿತರಾದವರಿಗೆ ಮರುಪರೀಕ್ಷೆ ಕೊಡುವ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದರು.
ಪ್ರಕರಣದ ನಿಖರ ಮಾಹಿತಿ ಪಡೆಯುತ್ತೇನೆ. ಜನಿವಾರ ತೆಗೆಯುವ ನಿಯಮ ಇಲ್ಲ ಜಾತಿ ಧರ್ಮಗಳಿಗೆ ಗೌರವ ಕೊಡಬೇಕಾಗುತ್ತೆ. ಘಟನೆಗೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
Key words: Minister, Madhu Bangarappa, condemns, Janivara, CET Exam
The post ಜನಿವಾರ ತೆಗೆಸಿದ ಘಟನೆಗೆ ಖಂಡನೆ: ಕ್ರಮ ಕೈಗೊಳ್ಳುವ ಭರವಸೆ ನೀಡಿದ ಸಚಿವ ಮಧು ಬಂಗಾರಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.