ವಿಜಯಪುರ,ಮೇ,3,2025 (www.justkannada.in): ಮೋದಿ ಅವಕಾಶ ಕೊಟ್ರೆ ನಾನು ಪಾಕ್ ಮೇಲೆ ಯುದ್ದ ಮಾಡೋಕೆ ಸಿದ್ಧ ಪ್ರಧಾನಿ ಮೋದಿ ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಲಿ ಎಂಬ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ಬಗ್ಗೆ ಕೇಂದ್ರಸಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಮೀರ್ ರಂತಹ ದೊಡ್ಡ ತ್ಯಾಗಮಯಿ ಯಾರಿಲ್ಲ. ಜಮೀರ್ ಅಹ್ಮದ್ ಖಾನ್ ಶಾಂತವಾಗಿದ್ದರೇ ಸಾಕು. ನೀವೇನು ಮಾಡೋದು ಬೇಡ ಮಿಲಿಟರಿಯನ್ನ ನಂಬಿ ಸುಮ್ಮನಿರಿ ಸಾಕು ನಿಮ್ಮ ಭಾಷಣ ಬೇಡ. ನೀವು ಗಡಿಗೆ ಹೋಗೋದು ಬೇಡ ಎಂದರು.
ಜಮೀರ್ ರಂತಹ ದೊಡ್ಡ ತ್ಯಾಗಮಯಿ ಯಾರಿಲ್ಲ ಎಂದು ಲೇವಡಿ ಮಾಡಿದ ಪ್ರಹ್ಲಾದ್ ಜೋಶಿ, ಸೈನಿಕರು ಇಂಟೆಲಿಜೆನ್ಸ್ ಬಗ್ಗೆ ವಿಶ್ವಾಸವಿಡಿ. ಜಮೀರ್ ಶಾಂತವಾಗಿರುವುದೇ ದೇಶಕ್ಕೆ ದೊಡ್ಡ ಸೇವೆ. ಭಾರತೀಯ ಸೈನಿಕರನ್ನ ನಂಬಿ ಸುಮ್ಮನಿರಿ ಸಾಕು. ಜಮೀರ್, ಸಂತೋಷ್ ಲಾಡ್, ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಸುಮ್ಮನಿದ್ದರೇ ಸಾಕು ಎಂದರು.
Key words: Zameer Ahamad khan, Statement, Union Minister, Prahlad Joshi
The post ಜಮೀರ್ ರಂತಹ ದೊಡ್ಡ ತ್ಯಾಗಮಯಿ ಯಾರಿಲ್ಲ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.