ಬೆಂಗಳೂರು ಗ್ರಾಮಾಂತರ, ಮೇ,9,2025 (www.justkannada.in): ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ) ವತಿಯಿಂದ 2025-26ನೇ ಸಾಲಿನಲ್ಲಿ ಡಿಪ್ಲೋಮಾ ಹಾಗೂ ಇಂಟಿಗ್ರೇಟೆಡ್ ಬಿ.ಇ ಪ್ರೋಗ್ರಾಂ ಕೋರ್ಸ್ ಗಳ ಪ್ರವೇಶಾತಿಗಾಗಿ 10ನೇ ತರಗತಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಲಭ್ಯವಿರುವ ಕೋರ್ಸ್ ಗಳು
ಬಿ.ಇ ಪ್ರೋಗ್ರಾಂ ಕೋರ್ಸ್
ಇಂಟಿಗ್ರೆಟೆಡ್ ಬಿ.ಇ ಇನ್ ಅಡ್ವಾನ್ಸ್ಡ್ ಮ್ಯಾನಿಫಾಕ್ಚರಿಂಗ್, ಇಂಟಿಗ್ರೆಟೆಡ್ ಬಿ.ಇ ಇನ್ ಅಡ್ವಾನ್ಸ್ಡ್ ಮೆಕಟ್ರಾನಿಕ್ಸ್, ಇಂಟಿಗ್ರೆಟೆಡ್ ಬಿ.ಇ ಇನ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಂಡ್ ಮಷಿನ್ ಲರ್ನಿಂಗ್.
ಡಿಪ್ಲೋಮಾ ಕೋರ್ಸ್ ಗಳು
ಡಿಪ್ಲೋಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್‌ನಲ್ಲಿ (ಡಿ.ಟಿ.ಡಿ.ಎಂ), ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ (ಡಿ.ಎಂ.ಸಿ.ಎಚ್), ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ (ಡಿ.ಇ.ಇ.ಇ), ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಲ್ಲಿ ಡಿಪ್ಲೊಮಾ (ಡಿ.ಎ.ಐ ಮತ್ತು ಎಂ.ಎಲ್) ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ಜಿಟಿಟಿಸಿ ಕೇಂದ್ರದ ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ) ದಲ್ಲಿ ಮೇ 15 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಹಾಗೇಯೇ ವಿಶೇಷವಾಗಿ ದ್ವಿತೀಯ ಪಿಯುಸಿ (ವಿಜ್ಞಾನ) ಹಾಗೂ ಐ.ಟಿ.ಐ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೇರವಾಗಿ ದ್ವಿತೀಯ ವರ್ಷದ ಜಿ.ಟಿ.ಟಿ.ಸಿ ಡಿಪ್ಲೋಮಾಗೆ ದಾಖಲಾತಿ ಪಡೆಯಬಹುದು. ಪಠ್ಯಕ್ರಮವು ಶೇಕಡಾ 70 ರಷ್ಟು ಪ್ರಾಯೋಗಿಕ ಹಾಗೂ 30 ರಷ್ಟು ಸಿದ್ಧಾಂತವನ್ನು ಒಳಗೊಂಡಿರುತ್ತದೆ.
ಜಿ.ಟಿ.ಟಿ.ಸಿ ಯು ಶಿಕ್ಷಣ ಕ್ಷೇತ್ರದಲ್ಲಿ ಕೈಗಾರಿಕ ಆಧಾರಿತ ಪಠ್ಯಕ್ರಮ, ನವೀನ ಯಂತ್ರೋಪಕರಣಗಳ ತರಬೇತಿ, ಕೈಗಾರಿಕ ತರಬೇತಿ (ಇಂಟರ್ನ್ ಶಿಪ್), ಜಾಗತಿಕ ಪ್ರಮಾಣೀಕರಣ ಹಾಗೂ ಶೇಕಡಾ 100ರಷ್ಟು ಉದ್ಯೋಗ ಸಹಾಯವನ್ನು ಒದಗಿಸಲಾಗುತ್ತದೆ. ವಿದೇಶದಲ್ಲಿ ಹೆಚ್ಚಿನ ಬೇಡಿಕೆಯಿರುವುದರಿಂದ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಜರ್ಮನ್ ಮತ್ತು ಜಪಾನೀಸ್ ಭಾಷೆಯನ್ನು ಕೂಡ ಕಲಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 080-26607666/80507582240/8123866007/96862668737/9980956422 ಸಂಪರ್ಕಿಸಿ ಹಾಗೂ ಜಿ.ಟಿ.ಟಿ.ಸಿ ಯ ಅಧಿಕೃತ ಜಾಲತಾಣ gttc.karnataka.gov.in ಮತ್ತು ಇಮೇಲ್ ವಿಳಾಸ gttcdevanahalli@gmail.com ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಟಿಟಿಸಿ ದೇವನಹಳ್ಳಿಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: invitation, apply, various courses, GTTC Center
The post ಜಿ.ಟಿ.ಟಿ.ಸಿ ಕೇಂದ್ರದಲ್ಲಿ ವಿವಿಧ ಕೋರ್ಸ್ ಗಳಿಗೆ ಮೇ 15ರೊಳಗೆ ಅರ್ಜಿ ಸಲ್ಲಿಸಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.