ಮೈಸೂರು,ಜೂನ್,12,2025 (www.justkannada.in): ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೈಸೂರಿನ ಸೈಂಟಿಫಿಕ್ ಪ್ರಾಣಯಾಮ ಫೌಂಡೇಶನ್ ಟ್ರಸ್ಟ್ ವತಿಯಿಂದ ಎರಡು ದಿನಗಳ ರಾಜ್ಯ ಮಟ್ಟದ ಯೋಗ ಪ್ರಾಣೋತ್ಸವ- 2025 ಆಯೋಜಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಸೈಂಟಿಫಿಕ್ ಪ್ರಾಣಯಾಮ ಫೌಂಡೇಶನ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಡಾ. ದೇವಕಿ ಮಾಧವ್, ಮೈಸೂರಿನ ಜಿಎಸ್ ಎಸ್ ಎಸ್ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಜೂನ್ 19 ಮತ್ತು 20 ರಂದು ರಾಜ್ಯ ಮಟ್ಟದ ಯೋಗ ಪ್ರಾಣೋತ್ಸವ- 2025 ನಡೆಯಲಿದೆ ಎಂದು ತಿಳಿಸಿದರು.
ಮೈಸೂರಿನ ಜಿಎಸ್‌ಎಸ್‌ಎಸ್ ಎಂಜಿನಿಯರಿಂಗ್ ಕಾಲೇಜ್ ನೇತೃತ್ವ ಹಾಗೂ ಎಟಿಎಂಇ ಎಂಜಿನಿಯರಿಂಗ್ ಕಾಲೇಜು ಮೈಸೂರು ಮತ್ತು ಆರ್‌ವಿ ಸಿಇ ಎಂಜಿನಿಯರಿಂಗ್ ಕಾಲೇಜ್ ಬೆಂಗಳೂರು ಇವರ ಸಹಯೋಗದಲ್ಲಿ ಕಾರ್ಯಾಗಾರ ನಡೆಯಲಿದೆ. ಸಂಪೂರ್ಣ ಆರೋಗ್ಯಕ್ಕಾಗಿ ವೈಜ್ಞಾನಿಕ ಪ್ರಾಣಾಯಾಮ ಎಂಬ ಘೋಷಣೆ ಅಡಿ ಪರಂಪರೆಯ ಯೋಗ ಜ್ಞಾನ ಮತ್ತು ವೈಜ್ಞಾನಿಕ ಪ್ರಾಯೋಗಿಕತೆ ನಡುವೆ ಸೇತುವೆ ನಿರ್ಮಿಸುವ ಉದ್ದೇಶದಿಂದ ವೈಜ್ಞಾನಿಕ ಪ್ರಾಣಾಯಾಮ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಪ್ರಖ್ಯಾತ ಕ್ಯಾನ್ಸರ್ ಕೇರ್ ಇಂಡಿಯಾದ ಖ್ಯಾತ ನರರೋಗ ತಜ್ಞ ಡಾ. ರಾಜಶೇಖರ್ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಇಂಡಿಯನ್ ಏರ್‌ಫೋರ್ಸ್ ನ ನಿವೃತ್ತ ಪೈಲೆಟ್ ಪರಿಧೀಯಿ ಸಿಂಗ್, ಇಂಡಿಯನ್ ಯೋಗ ಅಸೋಷಿಯೇಷನ್ ನ ಕಾರ್ಯದರ್ಶಿ ಯೋಗಮಿತ್ರ ಡಾ. ಎ. ಸುಬ್ರಹ್ಮಣಿಯನ್, ಜಿಎಸ್‌ಎಸ್‌ಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಶಿವಕುಮಾರ್ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಪ್ರಖ್ಯಾತ ಕ್ಯಾನ್ಸರ್ ಕೇರ್ ಇಂಡಿಯಾದ ಖ್ಯಾತ ನರರೋಗ ತಜ್ಞ ಡಾ. ರಾಜಶೇಖರ್ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದು, ಮೈಸೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ ಮಹಾಮೇಧಾನಂದಜಿ, ಮಂಡ್ಯ ಸರಕಾರಿ ಆಯುವೇದ ಕಾಲೇಜಿನ ಹಿರಿಯ ವೈದ್ಯಕೀಯ ಅಧಿಕಾರಿ ಡಾ. ಸೀತಾಲಕ್ಷ್ಮಿ, ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ ಡಾ. ಎಲ್. ಬಸವರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ . ಖ್ಯಾತ ಭರತ ನಾಟ್ಯ ಕಲಾವಿದೆ ಡಾ. ತುಳಸಿ ರಾಮಚಂದ್ರ ಅವರಿಂದ ನೃತ್ಯ ನಾಟಕ ನಡೆಯಲಿದೆ ಎಂದು ತಿಳಿಸಿದರು.
ವಿಶೇಷತೆಗಳು: ತರಬೇತಿದಾರರಿಂದ ವೈಜ್ಞಾನಿಕ ಪ್ರಾಣಾಯಾಮ ಕಾರ್ಯಗಾರ, ಆರೋಗ್ಯ ಕುರಿತ ಪತ್ರ ಪ್ರಸ್ತುತಿಕೆಗಳು, ಖ್ಯಾತ ಭರತ ನಾಟ್ಯ ಕಲಾವಿದೆ ಡಾ. ತುಳಸಿ ರಾಮಚಂದ್ರ ಅವರಿಂದ ನೃತ್ಯ ನಾಟಕ, ಯೋಗ ಚಿತ್ತಾರ, ಡೆಮೋ ಪ್ರದರ್ಶನಗಳು, ಯೋಗ ಮತ್ತು ಪ್ರಾಣಯಾಮದ ಪ್ರಭಾವ, ರಕ್ಷಣಾ,ಶಿಕ್ಷಣ, ಉದ್ಯೋಗ ಕ್ಷೇತ್ರಗಳ ಕುರಿತು ಚರ್ಚೆ ನಡೆಯಲಿದೆ. ರಾಜ್ಯದಾದ್ಯಂತ ಯೋಗ ಶಿಕ್ಷಕರು, ಸಂಶೋಧಕರು, ವೈದ್ಯರು, ವಿದ್ಯಾರ್ಥಿಗಳು 500ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾರ್ಯಗಾರದಿಂದ ಸಾರ್ವಜನಿಕರಿಗೆ ಉಚಿತವಾಗಿ ವೈಜ್ಞಾನಿಕ ಪ್ರಾಣಾಯಾಮ ಕಲಿಯಲು ಅವಕಾಶ ಇದೆ. ಮಾನಸಿಕ ಒತ್ತಡ ನಿವಾರಣೆ ನೋವಿನ ನಿರ್ವಹಣೆ ರೋಗ ಚಿಂತನೆಗಳ ಜಾಗೃತಿ ಜಾಗೃತಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಸೀತಾ ರಮೇಶ್, ಸದಸ್ಯರಾದ ಮಾಧವ್ ಸದಾಶಿವ ಹಾಜರಿದ್ದರು.
Key words: State Level Yoga Pranotsav, Mysore, June 19th and 20th
The post ಜೂ.19 ಮತ್ತು 20 ರಂದು ಮೈಸೂರಿನಲ್ಲಿ ರಾಜ್ಯ ಮಟ್ಟದ ಯೋಗ ಪ್ರಾಣೋತ್ಸವ- 2025 appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.