26
June, 2026

A News 365Times Venture

26
Friday
June, 2026

A News 365Times Venture

ತುಂಗಭದ್ರಾ ಡ್ಯಾಂನ ನೂತನ ಕ್ರಸ್ಟ್ ಗೇಟ್‌ ಗಳು ಲೋಕಾರ್ಪಣೆ

Date:

ಕೊಪ್ಪಳ, ಜೂನ್,25,2026 (www.justkannada.in): ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶಕ್ಕೆ ನೀರಾವರಿಗೆ ಆಧಾರವಾಗಿರುವ ತುಂಗಭದ್ರಾ ಜಲಾಶಯಕ್ಕೆ ಹೊಸದಾಗಿ ಅಳವಡಿಸಲಾಗಿರುವ 33 ಕ್ರಸ್ಟ್ ಗೇಟ್ ಗಳನ್ನು ಇಂದು ಲೋಕಾರ್ಪಣೆ ಮಾಡಲಾಯಿತು.

ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ನಲ್ಲಿ ಇಂದು ಕರ್ನಾಟಕ ಸಿಎಂ ಡಿಕೆ ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಆಂಧ್ರ ಸಿಎಂ ಎನ್. ಚಂದ್ರಬಾಬು ನಾಯ್ಡು, ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್  ಅವರು ಬಟನ್ ಒತ್ತುವ  ಮೂಲಕ ತುಂಗಭದ್ರಾ ಡ್ಯಾಂನ ನೂತನ ಕ್ರಸ್ಟ್ ಗೇಟ್‌ ಗಳನ್ನು ಉದ್ಘಾಟಿಸಿದರು.


51 ಕೋಟಿ ರೂ. ವೆಚ್ಚದಲ್ಲಿ 33 ಕ್ರಸ್ಟ್ ಗೇಟ್ ಗಳನ್ನ ಅಳವಡಿಸಲಾಗಿದ್ದು, ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರು, ಶಾಸಕರು ಹಾಗೂ ವಿವಿಧ ಜನಪ್ರತಿನಿಧಿಗಳು ಸಹ ಉಪಸ್ಥಿತರಿದ್ದರು.

2024ರ ಆಗಸ್ಟ್‌ 10ರಂದು ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರೆಸ್ಟ್‌ಗೇಟ್ ಕೊಚ್ಚಿಕೊಂಡು ಹೋಗಿತ್ತು. ಪರಿಣಾಮವಾಗಿ ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗಿತ್ತು. ನಂತರ ತಜ್ಞರ ಸಲಹೆ ಮೇರೆಗೆ ಸ್ಟಾಪ್‌ ಲಾಗ್​​ ಗೇಟ್​​ ಅಳವಡಿಸಿ ನೀರಿನ ಹರಿವನ್ನು ನಿಯಂತ್ರಿಸಲಾಗಿತ್ತು. ನಂತರ ಸರ್ಕಾರ ಎಲ್ಲ 33 ಕ್ರೆಸ್ಟ್‌ಗೇಟ್‌ಗಳನ್ನು ಬದಲಿಸುವ ಮಹತ್ವದ ನಿರ್ಧಾರ ಕೈಗೊಂಡಿತ್ತು.

Key words: Tungabhadra Dam,  new crest gates, inaugurated

The post ತುಂಗಭದ್ರಾ ಡ್ಯಾಂನ ನೂತನ ಕ್ರಸ್ಟ್ ಗೇಟ್‌ ಗಳು ಲೋಕಾರ್ಪಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತೆರಿಗೆ ವಂಚನೆ ಮತ್ತು ತೆರಿಗೆ ಸೋರಿಕೆ ಸಂಪೂರ್ಣ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ- ಸಿಎಂ ಡಿಕೆಶಿ ಸೂಚನೆ

ಬೆಂಗಳೂರು,ಜೂನ್,26,2026 (www.justkannada.in): ತೆರಿಗೆ ವಂಚನೆಗೆ ಯಾವುದೇ ಅವಕಾಶ ನೀಡಬಾರದು. ತೆರಿಗೆ ಸೋರಿಕೆಯನ್ನು...

ಟೌನ್ ಶಿಪ್ ಹೆಸರಿನಲ್ಲಿ ರೈತರಿಂದ ಭೂಮಿ ಕಸಿದುಕೊಳ್ಳುವುದು ತಪ್ಪು- ಪ್ರತಾಪ್ ಸಿಂಹ

ಹಾಸನ,ಜೂನ್,26,2026 (www.justkannada.in):  ಬಿಡದಿಯ ಟೌನ್ ಶಿಪ್ ನಿರ್ಮಾಣ ವಿಚಾರ ಜಟಾಪಟಿ ತಾರಕಕ್ಕೇರಿದ್ದು,...

ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ. ಇಲ್ಲದಿದ್ರೆ ಕಠಿಣ ಕ್ರಮ ಅನಿವಾರ್ಯ-ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಜೂನ್,26,2026 (www.justkannada.in): ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ. ಇಲ್ಲದಿದ್ದರೆ ಕಠಿಣ...

ಮುತ್ತತ್ತಿ ಕಾವೇರಿ ನದಿಯಲ್ಲಿ ಮತ್ತೊಂದು ದುರಂತ: ವೈದ್ಯರೊಬ್ಬರ ಶವ ಪತ್ತೆ

ಮಂಡ್ಯ, ಜೂನ್,26,2026 (www.justkannada.in):  ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಕಾವೇರಿ...