28
September, 2026

A News 365Times Venture

28
Monday
September, 2026

A News 365Times Venture

ದಸರಾ ಕಂಬಳ ಕ್ರೀಡಾಕೂಟದ ಆನ್ಲೈನ್ ನೋಂದಣಿ ಆರಂಭ

Date:

ಮೈಸೂರು, ಸೆಪ್ಟಂಬರ್,28,2026 (www.justkannada.in): ಮೈಸೂರು ದಸರಾ 2026ರ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಭ್ರಮದ ಅಂಗವಾಗಿ ಇದೇ ಮೊದಲ ಬಾರಿಗೆ ಕರಾವಳಿಯ ಜಾನಪದ ಕ್ರೀಡೆಯಾದ ದಸರಾ ಕಂಬಳವನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತಿದೆ. ಈ ಐತಿಹಾಸಿಕ ಕ್ರೀಡಾಕೂಟದ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆನ್ಲೈನ್ ಪೋರ್ಟಲ್ ಅನ್ನು ಅಧಿಕೃತವಾಗಿ ತೆರೆಯಲಾಗಿದೆ.

ಈ ಬಾರಿಯ ದಸರಾದ ಮುಖ್ಯ ಆಕರ್ಷಣೆಯಾಗಿ ಕಂಬಳವು ಮೈಸೂರಿನ ಸಾತಗಳ್ಳಿ ಹೊರವರ್ತುಲ ರಸ್ತೆಯಲ್ಲಿ (VTU) ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವ ಕಂಬಳದ ಕೋಣಗಳ ಮಾಲೀಕರು ಮತ್ತು ಓಡಿಸುವ ಜಾನಪದ ವೀರರು ವಿವಿಧ ಸ್ಪರ್ಧಾ ವಿಭಾಗಗಳ ಅಡಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.

ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಮತ್ತು ತಕ್ಷಣದ ನೋಂದಣಿಗಾಗಿ https://kambala.milieumedia.in ಜಾಲತಾಣಕ್ಕೆ ಭೇಟಿ ನೀಡಬಹುದು. ಅರ್ಜಿ ಹಾಗೂ ಪ್ರವೇಶಾತಿಗಳನ್ನು ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದೆ. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸುವವರು ಭೌತಿಕ ಪ್ರತಿಯನ್ನು ಜಿಲ್ಲಾ ಪಂಚಾಯತ್ ಕಚೇರಿಯಿಂದ ಪಡೆದುಕೊಳ್ಳಬಹುದು ಎಂದು ಕಂಬಳ ಉಪ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಅಭಿವೃದ್ಧಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಿಶ್ವ ಪ್ರವಾಸೋದ್ಯಮ ದಿನ: ಅವತಿ ಬೆಟ್ಟಕ್ಕೆ ಚಾರಣ, ಸ್ವಚ್ಚತಾ ಕಾರ್ಯ ಅಭಿಯಾನ

ಬೆಂಗಳೂರು ಗ್ರಾಮಾಂತರ, ಸೆಪ್ಟಂಬರ್,28,2026 (www.justkannada.in): ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸೋದ್ಯಮ...

ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನ

ಬೆಂಗಳೂರು,ಸೆಪ್ಟಂಬರ್,28,2026 (www.justkannada.in): ಅಕ್ಟೋಬರ್ 11 ರಂದು ನಡೆಯುವ ನಾಡಹಬ್ಬ ಮೈಸೂರು ದಸರಾ...

ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ಕೊಡುಗೆಯೇನು? ಸಚಿವ ಯುಟಿ ಖಾದರ್ ವಾಗ್ದಾಳಿ

ಮಂಗಳೂರು, ಸೆಪ್ಟೆಂಬರ್,​​ 28,2026 (www.justkannada.in):  ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ...

ಕೊಲೆ ಮತ್ತು ಸಂಚು ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

  ಬೆಂಗಳೂರು, ಸೆ.28, 2026: ಬೆಂಗಳೂರಿನಲ್ಲಿ ನಡೆದ ಸಂಚಲನ ಮೂಡಿಸಿದ್ದ ಕೊಲೆ ಹಾಗೂ...