22
August, 2026

A News 365Times Venture

22
Saturday
August, 2026

A News 365Times Venture

ದಸರಾ ಗಜಪಯಣಕ್ಕೆ ದಿನಾಂಕ ನಿಗದಿ: ಆ. 26ರಂದು ಚಾಲನೆ

Date:

ಮೈಸೂರು,ಆಗಸ್ಟ್,22,2026 (www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಪೂರ್ವಭಾವಿ ಕಾರ್ಯಕ್ರಮವಾದ ಗಜಪಯಣ 2026ಕ್ಕೆ ದಿನಾಂಕ ನಿಗದಿಯಾಗಿದೆ. ಆಗಸ್ಟ್ 26ರಂದು ಬುಧವಾರ ಗಜಪಯಣಕ್ಕೆ ಅಧಿಕೃತ ಚಾಲನೆ ನೀಡಲು ಸಿದ್ಧತೆ ನಡೆಸಲಾಗಿದೆ.

ಅಂದು ಬೆಳಿಗ್ಗೆ 10 ಗಂಟೆಯಿಂದ 10.28ರವರೆಗೆ ಶುಭ ಮುಹೂರ್ತದಲ್ಲಿ ನಾಗರಹೊಳೆ ಅರಣ್ಯ ಪ್ರದೇಶದ ವೀರನಹೊಸಹಳ್ಳಿ ಗ್ರಾಮದಲ್ಲಿ ಗಜಪಯಣದ ಸಾಂಪ್ರದಾಯಿಕ ಕಾರ್ಯಕ್ರಮ ನಡೆಯಲಿದೆ.

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮತ್ತು ಅಂಬಾರಿ ಹೊರುವ ಆನೆಗಳ ತಂಡ ಇದೇ ಗಜಪಯಣದ ಮೂಲಕ ಮೈಸೂರಿನತ್ತ ಪ್ರಯಾಣ ಆರಂಭಿಸಲಿದೆ. ದಸರಾ ಆನೆಗಳ ಆಯ್ಕೆ, ತರಬೇತಿ ಹಾಗೂ ಸಾಂಪ್ರದಾಯಿಕ ಸ್ವಾಗತ ಕಾರ್ಯಕ್ರಮಗಳಿಗೂ ಈ ಮೂಲಕ ಚಾಲನೆ ದೊರೆಯಲಿದೆ.

2026ರ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಅರಣ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗಳು ಸಿದ್ಧತೆ ಕೈಗೊಂಡಿದ್ದು, ಗಜಪಯಣದ ಬಳಿಕ ಆನೆಗಳಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಲಾಗುತ್ತದೆ.

ಆಗಸ್ಟ್ 26ರಂದು ವೀರನಹೊಸಹಳ್ಳಿಯಿಂದ ಆರಂಭವಾಗುವ ಗಜಪಯಣ, ಮೈಸೂರು ದಸರಾ ಸಂಭ್ರಮಕ್ಕೆ ಅಧಿಕೃತ ಮುನ್ನುಡಿ ಬರೆಯಲಿದೆ.

ENGLISH SUMMARY..

Mysuru Dasara Gajapayana on August 26

Mysuru: The traditional Gajapayana 2026, marking the beginning of preparations for the Mysuru Dasara festivities, will be held on August 26 at Veeranahosahalli village in the Nagarahole forest region.

The event will begin at 10:00 AM and the auspicious ceremony is scheduled between 10:00 AM and 10:28 AM.

The Dasara elephants will embark on their journey to Mysuru, marking the formal start of preparations for the grand Jumboo Savari.

#MysuruDasara #Gajapayana2026 #Dasara2026 #Mysuru #JumbooSavari

Key words: Mysuru Dasara, Gajapayana , August 26

The post ದಸರಾ ಗಜಪಯಣಕ್ಕೆ ದಿನಾಂಕ ನಿಗದಿ: ಆ. 26ರಂದು ಚಾಲನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

3.85 ಕೋಟಿ ರೂ, ವಂಚನೆ ಆರೋಪ: ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ದ ದೂರು

ಬೆಂಗಳೂರು,ಆಗಸ್ಟ್,22,2026 (www.justkannada.in):   ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಓಂ...

ಬಿಡದಿ ಟೌನ್ ಶಿಪ್  ಅನ್ನು HD ಕುಮಾರಸ್ವಾಮಿ ಮಾಡಿ ಈಗ ನಮ್ಮ ಮೇಲೆ ಹೇಳುತ್ತಿದ್ದಾರೆ-ಸಚಿವ ಹೆಚ್ ಸಿ ಬಾಲಕೃಷ್ಣ

ರಾಮನಗರ,ಆಗಸ್ಟ್,22,2026 (www.justkannada.in):   ಬಿಡದಿ ಟೌನ್ ಶಿಪ್  ಅನ್ನು ಹೆಚ್ ಡಿ ಕುಮಾರಸ್ವಾಮಿ...

ಭಾರತದ ಶಿಕ್ಷಣ ವ್ಯವಸ್ಥೆ ಈಗ RSS ಅಡ್ಡೆಯಾಗಿದೆ- ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ,ಆಗಸ್ಟ್,22,2026 (www.justkannada.in): ಭಾರತದ  ಶಿಕ್ಷಣ ವ್ಯವಸ್ಥೆ  ಈಗ ಆರ್ ಎಸ್ ಎಸ್...

ಬಿಜೆಪಿಗೆ ಪ್ರಜಾತಾಂತ್ರಿಕ ವ್ಯವಸ್ಥೆಯ ಮೇಲೆ ಗೌರವವಿಲ್ಲ: ಸಚಿವ ಮಧು ಬಂಗಾರಪ್ಪ ಕಿಡಿ

ಬೆಂಗಳೂರು, ಆಗಸ್ಟ್,21,2026 (www.justkannada.in): ರಾಜ್ಯದ ಅಭಿವೃದ್ಧಿ ವಿಚಾರಗಳ ಕುರಿತು ವಿಧಾನಮಂಡಲದಲ್ಲಿ ಚರ್ಚೆ...