ಬೆಂಗಳೂರು,ಮೇ,28,2025 (www.justkannada.in): ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಎಂದು ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್ ವಿರುದ್ದ ಪಕ್ಷಾತೀತವಾಗಿ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು ಈ ಕುರಿತು ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ನಟ ಕಮಲ್ ಹಾಸನ್ ರಾಜ್ಯದ ಜನತೆ ಕ್ಷಮೆ ಕೇಳಬೇಕು. ಇಲ್ಲದಿದ್ದರೇ ಅವರನ್ನ ನಿಷೇಧಿಸಲಿ ಎಂದು ಆಗ್ರಹಿಸಿದರು.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ನಟ ಕಮಲ್ ಹಾಸನ್ ಆ ರೀತಿ ಹೇಳಿದ್ದು ಬಹಳ ತಪ್ಪು. ನೆಲ,ಜಲ, ಭಾಷೆ ಬಗ್ಗೆ ಮಾತನಾಡೋದು ತಪ್ಪು. ಕಮಲ್ ಹಾಸನ ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದರೆ ನಿಷೇಧಿಸಬೇಕು. ಫಿಲಂ ಚೇಂಬರ್ ಗೆ ಪತ್ರ ಬರೆಯುತ್ತೇನೆ ಎಂದರು.
ಕನ್ನಡ ನೆಲ, ಜಲದ ವಿಷಯ ಯಾರೇ ಮಾತನಾಡಿದರೂ ಸಹಿಸೋಕೆ ಆಗಲ್ಲ. ಕನ್ನಡದ ಬಗ್ಗೆ ಹಗುರವಾಗಿ ಮಾತಾಡೋದು ಬಿಟ್ಟು ಕ್ಷಮೆ ಕೇಳಬೇಕು. ಹೀಗೆ ಮಾತಾಡಿ ಗಾಯಕ ಸೋನು ನಿಗಮ್ ಕ್ಷಮೆ ಕೇಳಿದ್ದಾರೆ. ಅದರಂತೆ ಕಮಲ್ ಹಾಸನ್ ಕ್ಷಮೆ ಕೇಳಬೇಕು. ಅವರು ಕ್ಷಮೆ ಕೇಳದೇ ಹೋದರೇ ಅವರನ್ನ ಬ್ಯಾನ್ ಮಾಡಬೇಕು. ಕಮಲ್ ಹಾಸನ್ ಮಾತನಾಡುವಾಗ ನಟ ಶಿವರಾಜ್ ಕುಮಾರ್ ಅಲ್ಲೇ ಇದ್ದರೂ ಅದನ್ನ ವಿರೋಧ ಮಾಡಲಿಲ್ಲ. ಶಿವರಾಜ್ ಕುಮಾರ್ ಈಗಲಾದರೂ ಖಂಡಿಸಲಿ ಎಂದು ಸಚಿವ ಶಿವರಾಜ್ ತಂಗಡಗಿ ಆಗ್ರಹಿಸಿದರು.
Key words: actor, Kamal Haasan, apologize, Minister, Shivraj Thangadgi
The post ನಟ ಕಮಲ್ ಹಾಸನ್ ಕ್ಷಮೆ ಕೇಳದಿದ್ದರೇ ಅವರನ್ನ ನಿಷೇಧಿಸಬೇಕು-ಸಚಿವ ಶಿವರಾಜ್ ತಂಗಡಗಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.