ನವದೆಹಲಿ,ಮೇ,15,2026 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಗೆ ಸುಪ್ರೀಂಕೋರ್ಟ್ ಶಾಕ್ ನೀಡಿದೆ. 1 ವರ್ಷಗಳ ಕಾಲ ಸಾಕ್ಷ್ಯ ವಿಚಾರಣೆ ನಡೆಸಿ ಎಂದು ಸುಪ್ರೀಂಕೋರ್ಟ್ ಸೂಚಿಸಿದ್ದು ಈ ಮೂಲಕ ನಟ ದರ್ಶನ್ ಗೆ ಒಂದು ವರ್ಷ ಜೈಲುವಾಸ ಖಾಯಂ ಆಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ನಟ ದರ್ಶನ್ ಜಾಮೀನು ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಒಂದು ವರ್ಷದವರೆಗೆ ಸಾಕ್ಷಿಗಳ ವಿಚಾರಣೆಗೆ ಕಾಲಾವಕಾಶ ನೀಡಿದೆ. 1 ವರ್ಷದಲ್ಲಿ 60 ಸಾಕ್ಷಿಗಳ ವಿಚಾರಣೆ ನಡೆಸಿ ಎಂದು ಹೇಳಿದೆ.
ಹಾಗೆಯೇ 1 ವರ್ಷದೊಳಗೆ ವಿಚಾರಣೆ ಮುಗಿಯದಿದ್ದರೇ ಜಾಮೀನು ಅರ್ಜಿ ಪರಿಶೀಲಿಸಲಾಗುವುದು ಎಂದು ಹಾಗಾಗಿ ನಟ ದರ್ಶನ್ ಗೆ ಇನ್ನೂ ಒಂದು ವರ್ಷ ಜೈಲುವಾಸವೇ ಖಾಯಂ ಆಗಿದೆ.
ಜೈಲಿನಲ್ಲಿ ಕನಿಷ್ಠ ಮೂಲಸವಲತ್ತು ನೀಡಿಲ್ಲವೆಂದು ಆರೋಪಿಸಲಾಗಿದೆ. ದರ್ಶನ್ ಗೆ ಎಲ್ಲಾ ಕನಿಷ್ಠ ಮೂಲ ಸವಲತ್ತು ನೀಡಬೇಕು. ಜೈಲು ಕೈಪಿಡಿಯಲ್ಲಿ ನಿಗದಿಪಡಿಸಿರುವ ಸವಲತ್ತು ನೀಡಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
Key words: Actor, Darshan, sentenced ,one year, jail, Supreme Court
The post ನಟ ದರ್ಶನ್ ಗೆ ಒಂದು ವರ್ಷ ಜೈಲೇ ಗತಿ: ಸಾಕ್ಷ್ಯ ವಿಚಾರಣೆಗೆ ಕಾಲಾವಕಾಶ ನೀಡಿದ ಸುಪ್ರೀಂ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




