ಮೈಸೂರು,ಜೂನ್,20,2025 (www.justkannada.in): ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ಪದಸಾರ – ಕಥೆ ಕವನ ವಾಚನ ಕಾರ್ಯಕ್ರಮದಲ್ಲಿ ಈ ಬಾರಿ ಕುಸುಮ ಆಯರಹಳ್ಳಿ ಅವರು ತಮ್ಮ “ಯೋಳೀನ್ ಕೇಳಿ” (ಅವಿಭಜಿತ ಮೈಸೂರು ಚಾಮರಾಜನಗರದ ಆತ್ಮಕತೆ) ಯ ಆಯ್ದ ಭಾಗವನ್ನು ವಾಚಿಸಲಿದ್ದಾರೆ.
ನಾಳೆ ಸಂಜೆ ಮೈಸೂರಿನ, ಜೆ. ಎಲ್. ಬಿ ರಸ್ತೆಯಲ್ಲಿರುವ ಹಾರ್ಡ್ವಕ್ ಶಾಲೆ ಆವರಣದ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಪದಸಾರ – ಕಥೆ ಕವನ ವಾಚನ ಕಾರ್ಯಕ್ರಮದಲ್ಲಿ ಕುಸುಮ ಆಯರಹಳ್ಳಿ ಅವರು ತಮ್ಮ “ಯೋಳೀನ್ ಕೇಳಿ” (ಅವಿಭಜಿತ ಮೈಸೂರು ಚಾಮರಾಜನಗರದ ಆತ್ಮಕತೆ) ಯ ಆಯ್ದ ಭಾಗವನ್ನು ವಾಚಿಸಲಿದ್ದಾರೆ.
ಪುಸ್ತಕದ ಕುರಿತು:
ʻಯೋಳ್ತೀನ್ ಕೇಳಿʼ ಪುಸ್ತಕ ಮೈಸೂರಿಗೆ ಅವಿಭಜಿತ ಮೈಸೂರು ಚಾಮರಾಜನಗರದ ಒಂದು ಅವ್ಯಕ್ತ ಆತ್ಮ ಅಡಕವಾಗಿದೆ . ಈ ಭಾಗದ ಭಾಷೆ ಬದುಕು ಒಂದೊಂದೂ ವಿಭಿನ್ನ ಕಥೆಗಳೇ. ಗುರುಬಸವಿ, ತಾಳಿ, ಮರಿ, ಮಾದವಮ್ಮ, ಮುದ್ದಯ್ಯ ಮುಂತಾದವರು ಪಾತ್ರಗಳಾಗಿ ಕಾಡಿದರೆ, ತಾಳಿ, ಅನ್ನ, ಚಕ್ರವ್ಯೂಹ, ಸುನಾಮಿ ಮುಂತಾದವೆಲ್ಲ ಹೃದಯದಲ್ಲಿ ಮೆಲ್ಲಗೆ ಸೂಜಿಯಲ್ಲಿ ಚುಚ್ಚಿದಂತೆ ಅನ್ನಿಸುತ್ತದೆ. ಎಲ್ಲಾ ಕಥೆಯೊಳಗೆ ಕುಸುಮಾ ಹೊಕ್ಕು ಹೊರಬರುವ ಪರಿ ಸೊಗಸಾಗಿದೆ.
Key words: Mysore, Kusuma Ayarahalli, book, ‘yolin keli’
The post ನಾಳೆ ಕುಸುಮ ಆಯರಹಳ್ಳಿ ಅವರ “ಯೋಳೀನ್ ಕೇಳಿ” ಪುಸ್ತಕದ ಆಯ್ದ ಭಾಗಗಳ ವಾಚನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.