21
September, 2026

A News 365Times Venture

21
Monday
September, 2026

A News 365Times Venture

ನಾಳೆ ಮಧ್ಯಾಹ್ನ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ

Date:

ಬೆಂಗಳೂರು,ಏಪ್ರಿಲ್,8,2026 (www.justkannada.in): ನಾಳೆ  ಮಧ್ಯಾಹ್ನ 3 ಗಂಟೆಗೆ  ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ.

ನಾಳೆ ಉಪಚುನಾವಣೆ ಮತದಾನ ಹಿನ್ನೆಲೆಯಲ್ಲಿ ಸಂಜೆ 6.15ಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗರಾಪ್ಪ ಸುದ್ದಿಗೋಷ್ಠಿ ನಡೆಸಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಿದ್ದಾರೆ ಎನ್ನಲಾಗಿತ್ತು.

ಆದರೆ ಇದೀಗ ಈ ಕುರಿತು ಪ್ರಕಟಣೆ ಹೊರಡಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ದಿನಾಂಕ 09-04-2026ರಂದು ಮಧ್ಯಾಹ್ನ 3.00 ಗಂಟೆಗೆ ಅಧಿಕೃತವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಅಧಿಕೃತ ವೆಬ್‌ಸೈಟ್:https://karresults.nic.in ಲಿಂಕ್ ಮೂಲಕ ಫಲಿತಾಂಶ ವೀಕ್ಷಿಸಬಹುದು. ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ಮಂಡಲಿಯಿಂದಲೇ ವಾಟ್ಸಾಪ್ ಅಥವಾ ಎಸ್‌ಎಂಎಸ್ (SMS) ಮೂಲಕ ಫಲಿತಾಂಶದ ವಿವರಗಳನ್ನು ರವಾನಿಸಲಾಗುವುದು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಂಡಲಿಯು ಈ ವರ್ಷ ಒಂದು ವಿಶೇಷ ಕ್ರಮವನ್ನು ಕೈಗೊಂಡಿದೆ. ಇದೇ ಮೊದಲ ಬಾರಿಗೆ ಫಲಿತಾಂಶದ ಅಂಕಪಟ್ಟಿಯನ್ನು ಡಿಜಿಲಾಕರ್ ಮೂಲಕವೂ ಲಭ್ಯಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.

Key words: Second PUC exam, results ,e announced, tomorrow, afternoon

The post ನಾಳೆ ಮಧ್ಯಾಹ್ನ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಹಸಿ ಮತ್ತು ಒಣ ಕಸವನ್ನು ‌ಮೂಲದಲ್ಲೇ ಬೇರ್ಪಡಿಸುವ ಬಗ್ಗೆ ಜಾಗೃತಿ ಮೂಡಿಸಿ- ಸಿ. ಶಂಕರ ಅಂಕನಶೆಟ್ಟಿಪುರ

ಮೈಸೂರು, ಸೆಪ್ಟಂಬರ್‌, 21,2026 (www.justkannada.in): ಸಾರ್ವಜನಿಕರು ಕಸವನ್ನು ಪೌರಕಾರ್ಮಿಕರಿಗೆ ನೀಡುವ ಮೊದಲೇ...

ಒಬ್ಬ ನಿರಪರಾಧಿಯ ರಾಜೀನಾಮೆ ಪಡೆದಿದ್ದೇನೆ- ಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು,ಸೆಪ್ಟಂಬರ್‌,21,2026 (www.justkannada.in) ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ...

ಚಾಮುಂಡಿ ಬೆಟ್ಟದಲ್ಲಿ ಮದ್ಯ ಸೇವಿಸಿ ಹುಚ್ಚಾಟ: ಯುವಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಮೈಸೂರು, ಸೆಪ್ಟಂಬರ್‌,21,2026 (www.justkannada.in) ಮೈಸೂರಿನ :ಚಾಮುಂಡಿ ಬೆಟ್ಟದ ವ್ಯೂ ಪಾಯಿಂಟ್ ಬಳಿ...

ಇಂದಿನಿಂದ ಮೂರು ದಿನಗಳ ಕಾಲ ವಿಧಾನ ಮಂಡಲ ವಿಶೇಷ ಅಧಿವೇಶನ

ಬೆಂಗಳೂರು,ಸೆಪ್ಟಂಬರ್‌,21,2026 (www.justkannada.in) ಇಂದಿನಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲ ವಿಶೇಷ...