ಮೈಸೂರು,ಜೂನ್,24,2025 (www.justkannada.in): ನಾಳೆ ಮೈಸೂರಿನಲ್ಲಿ ಸದ್ಭಾವ ಒಂದು ರಾಷ್ಟ್ರೀಯ ಅಭಿಯಾನವನ್ನು ಆಯೋಜಿಸಲಾಗಿದೆ.
ನಾಳೆ ಸಂಜೆ 6.30ಕ್ಕೆ ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಗಾಂಧಿವಾದಿ ಸರೋಜ ತುಳಸೀದಾಸ್ ಉದ್ಘಾಟನೆ ನೆರವೇರಿಸಲಿದ್ದಾರೆ. ಕನ್ನಡ ಭಿತ್ತಿಚಿತ್ರವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷ ಪಿ.ಜಿ.ಆರ್ ಸಿಂಧ್ಯಾ ಅವರು, ಹಿಂದಿ ಭಿತ್ತಿಚಿತ್ರವನ್ನು ಬಾಪೂ-ಕೆ-ಲೋಗ್ ರಾಷ್ಟ್ರೀಯ ಸಂಚಾಲಕ ವಿಜಯ ಪ್ರತಾಪ್ ಅವರು, ಇಂಗ್ಲೀಷ್ ಭಿತ್ತಿಚಿತ್ರವನ್ನ ಇಪ್ಟಾ ರಾಷ್ಟ್ರೀಯ ಕಾರ್ಯಾಧ್ಯಕ್ಷ ರಾಕೇಶ್ ವೇದ ಅವರು ಬಿಡುಗಡೆ ಮಾಡುವರು.
ಮುಖ್ಯ ಅತಿಥಿಯಾಗಿ ನಟ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ರಂಗನಿರ್ದೇಶಕ ಹಾಗೂ ಲೇಖಕ ಪ್ರಸನ್ನ ಸದ್ಭಾವ ಗೀತಿಯನ್ನ ಮಂಡನೆ ಮಾಡಲಿದ್ದಾರೆ. ಇದೇ ವೇಳೆ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ತಂಡದಿಂದ ಪಿಪ್ಪಿಗೊಂದು ಪಪ್ಪಿ ಎಂಬ ನಾಟಕವನ್ನ ಪ್ರದರ್ಶಿಸಲಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಲೇಖಕರು ಸಬೀಹಾ ಭೂಮಿಗೌಡ ಉಪಸ್ಥಿತರಿರಲಿದ್ದಾರೆ.
Key words: ‘Sadbhav, national campaign, Mysore, tomorrow
The post ನಾಳೆ ಮೈಸೂರಿನಲ್ಲಿ ‘ಸದ್ಭಾವ ಒಂದು ರಾಷ್ಟ್ರೀಯ ಅಭಿಯಾನ’ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.