16
May, 2026

A News 365Times Venture

16
Saturday
May, 2026

A News 365Times Venture

ನುಡಿದಂತೆ ನಡೆದಿರುವುದಕ್ಕೆ ಸಾಧನಾ ಸಮಾವೇಶ- ಸಚಿವ ಡಾ. ಶರಣಪ್ರಕಾಶ ಪಾಟೀಲ್‌

Date:

ಬೆಂಗಳೂರು, ಮೇ, 16,2026 (www.justkannada.in):  ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ನುಡಿದಂತೆ ನಡೆದಿದೆ. ಅದೇ ಕಾರಣಕ್ಕೆ ಸಾಧನ ಸಮಾವೇಶ ಮಾಡುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.

ಶನಿವಾರ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಶರಣ ಪ್ರಕಾಶ್ ಪಾಟೀಲ್, ಸಾಧನಾ ಸಮಾವೇಶ ಎನ್ನುವುದು ನಮ್ಮ ಸಾಧನೆಗಳನ್ನು ಜನರಿಗೆ ತಿಳಿಸುವುದಕ್ಕೆ ಎಂದರು.

ಪ್ರತಿಪಕ್ಷಗಳು ಈ ಬಗ್ಗೆ ಯಾವುದೇ ಟೀಕೆಗಳನ್ನು ಮಾಡುವ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ನಂತರವೂ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದರು.

ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಬಹುತೇಕ ಈಡೇರಿಸಲಾಗಿದೆ. ನಮ್ಮ ಸರ್ಕಾರ ಸಮರ್ಥ ಆಡಳಿತ ನೀಡಿದೆ. ಕಾಂಗ್ರೆಸ್‌ ಎಂದರೆ ನುಡಿದಂತೆ ನಡೆಯುವ ಪಕ್ಷ ಎಂಬುದು ಸಾಬೀತಾಗಿದೆ ಎಂದು ಡಾ. ಪಾಟೀಲ್‌ ತಿಳಿಸಿದರು.

ತುಮಕೂರು ಸಮಾವೇಶದ ಬಳಿಕ ಕೆಲವು ಬದಲಾವಣೆ ಆಗಲಿದೆ ಎಂಬ ಚರ್ಚೆ ನಡೆಯುತ್ತಿದೆ. ಇದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಮೂರು ವರ್ಷದ ನಂತರ ಸಚಿವ ಸಂಪುಟದಲ್ಲಿ ಬದಲಾವಣೆ ಆಗೋದು ಸಹಜ ಎಂದರು.

ನಮ್ಮ ಹೈಕಮಾಂಡ್‌ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತದೆ. ಗೊಂದಲಗಳು ಯಾವುದೂ ಇಲ್ಲ. ಒಂದು ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅದನ್ನು ವರಿಷ್ಠರು ಬಗೆಹರಿಸುತ್ತಾರೆ ಎಂದು ಡಾ. ಶರಣಪ್ರಕಾಶ ಪಾಟೀಲ್‌ ಸ್ಪಷ್ಟಪಡಿಸಿದರು.

Key words: Sadhana conference, Minister, Dr. Sharan Prakash Patil

The post ನುಡಿದಂತೆ ನಡೆದಿರುವುದಕ್ಕೆ ಸಾಧನಾ ಸಮಾವೇಶ- ಸಚಿವ ಡಾ. ಶರಣಪ್ರಕಾಶ ಪಾಟೀಲ್‌ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನೀಟ್ ಪರೀಕ್ಷೆ ರದ್ದತಿಗೆ ವಿಶೇಷ  ಅಧಿವೇಶನಕ್ಕೆ KPCC ವಕ್ತಾರ ಎಚ್ಎ ವೆಂಕಟೇಶ್ ಒತ್ತಾಯ

ಮೈಸೂರು,ಮೇ,16,2026 (www.justkannada.in): ವೃತ್ತಿಪರ ವೈದ್ಯಕೀಯ ಕೋರ್ಸ್ ಪ್ರವೇಶ ಪರೀಕ್ಷೆಯಾಗಿರುವ ನೀಟ್ ಈಗ...

ಜಮೀನು ಕಿತ್ತುಕೊಂಡು ದಂಧೆ: ಬಿಡದಿ ರೈತರ ಪರ ನನ್ನ ಹೋರಾಟ ಇಂದಿನಿಂದ ಆರಂಭ; ಹೆಚ್.ಡಿ. ದೇವೇಗೌಡರ ಘೋಷಣೆ

ಬೆಂಗಳೂರು 16 ಮೇ 2026 (www.justkannada.in): ಬಿಡದಿ ಟೌನ್ ಶಿಪ್ ಹೆಸರಿನಲ್ಲಿ...

ರಾಜ್ಯದಲ್ಲೇ ಮಧ್ಯಮ ಸ್ತರದ ಸುಧಾರಿತ ಯುದ್ಧ ವಿಮಾನ ಘಟಕ ಸ್ಥಾಪಿಸಿ: ರಾಜನಾಥ್ ಸಿಂಗ್ ಗೆ ಸಚಿವ ಎಂ.ಬಿ ಪಾಟೀಲ್ ಪತ್ರ

ಬೆಂಗಳೂರು,ಮೇ,16,2026 (www.justkannada.in):  ರಕ್ಷಣಾ ಇಲಾಖೆಯ ಅಡಿಯಲ್ಲಿರುವ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ)...

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಕೋರ್ಟ್ ನಿರ್ದೇಶನದಲ್ಲಿ ತನಿಖೆ ನಡೆಯಲಿ: ಸಚಿವ ಶರಣ ಪ್ರಕಾಶ್ ಪಾಟೀಲ್

ಬೆಂಗಳೂರು, ಮೇ,16,2026 (www.justkannada.in):  ಇತ್ತೀಚೆಗೆ ನೀಟ್‌ ಪ್ರಶ್ನೆ ಸೋರಿಕೆಯಾಗಿದ್ದು, ಇಡೀ ವಿದ್ಯಾರ್ಥಿ...