ಮುಂಬೈ,ಜೂನ್,27,2025 (www.justkannada.in): ದಿ. ನಟ ಪುನೀತ್ ರಾಜ್ ಕುಮಾರ್ ನಟನೆಯ ಹುಡುಗರು ಚಿತ್ರದಲ್ಲಿ ‘ತೊಂದ್ರೆ ಇಲ್ಲ ಪಂಕಜ’ ಸ್ಪೆಷಲ್ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದ ನಟಿ ಶೆಫಾಲಿ ಜರಿವಾಲಾ’ ಹೃದಯಾಘಾತದಿಂದ ನಿನ್ನೆರಾತ್ರಿ ನಿಧನರಾಗಿದ್ದಾರೆ.
42 ವರ್ಷದ ನಟಿ ಶೆಫಾಲಿ ಜರಿವಾಲಾ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶೆಫಾಲಿ ಅವರಿಗೆ ಹೃದಯಾಘಾತವಾದ ನಂತರ ಅವರ ಪತಿ ಪರಾಗ್ ತ್ಯಾಗಿ ಅವರು ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಅವರು ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದಾರೆಂದು ಘೋಷಿಸಿದರು ಎಂದು ವರದಿಯಾಗಿದೆ.
‘ಕಾಂತಾ ಲಗಾ’ ಮ್ಯೂಸಿಕ್ ವಿಡಿಯೋ ಮೂಲಕ ಶೆಫಾಲಿ ಜರಿವಾಲಾ ಸಾಕಷ್ಟು ಜನಪ್ರಿಯರಾಗಿದ್ದರು, ಹಿಂದಿ ಬಿಗ್ ಬಾಸ್ 13ರಿಂದ ಹೆಸರುವಾಸಿಯಾಗಿದ್ದ ನಟಿ ಶೆಫಾಲಿ ಜರಿವಾಲಾ 2011ರಲ್ಲಿ ತೆರೆಕಂಡಿದ್ದ ಅಪ್ಪು, ಲೂಸ್ ಮಾದ ಹಾಗೂ ಶ್ರೀನಗರ ಕಿಟ್ಟಿ ನಟಿಸಿದ್ದ ಹುಡುಗರು ಚಿತ್ರದಲ್ಲಿ ‘ತೊಂದ್ರೆ ಇಲ್ಲ ಪಂಕಜ’ ಹಾಡಿಗೆ ಶೆಫಾಲಿ ಜರಿವಾಲಾ ಸ್ಟೆಪ್ ಹಾಕಿದ್ದರು.
Key words: Actress, Shefali Jariwala, dies, heart attack
The post ಪಂಕಜ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ‘ಶೆಫಾಲಿ ಜರಿವಾಲಾ’ ಹೃದಯಾಘಾತದಿಂದ ನಿಧನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.