ಮೈಸೂರು,ಮೇ,17,2025 (www.justkannada.in): ಪಂಚನ್ ಲಾಮಾ ಹಾಗೂ ಎಲ್ಲ ರಾಜಕೀಯ ಕೈದಿಗಳ ಬಿಡುಗಡೆ ಆಗ್ರಹಿಸಿ ಚೀನಾ ಸರ್ಕಾರದ ವಿರುದ್ದ ಮೈಸೂರಿನಲ್ಲಿ ಟಿಬೆಟನ್ನರು ಪ್ರತಿಭಟನೆ ನಡೆಸಿದರು.
ಟಿಬೆಟನ್ ಯುವ ಕಾಂಗ್ರೆಸ್, ಮೈಸೂರು ಪ್ರಾಂತೀಯ ಟಿಬೆಟಿನ್ ಮಹಿಳಾ ಸಂಘಟಣೆ ಮತ್ತು ಬೈಲಕುಪ್ಪೆ, ಹುಣಸೂರು ಮತ್ತು ಕೊಳ್ಳೆಗಾಲ ಟಿಬೆಟನ್ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
17ನೇ ಮೇ 2025ಕ್ಕೆ ಟಿಬೆಟಿನ ಪಂಚೆನ್ ಲಾಮಾ, ಗಡು ಚೂಯಿ ನೀಮಾ ಅಪಹರಣ ಹಾಗೂ ಕಣ್ಮರೆಯಾಗಿ 30ನೇ ವರ್ಷವಾಗಿದೆ. 1995ರ ಈ ದಿನದಂದು ಪಂಚನ್ ಲಾಮಾ ತನ್ನ 6ನೇ ವಯಸ್ಸಿನಲ್ಲಿ ಚೀನಾ ಆಡಳಿತದಿಂದ ಅವಹರಣಕ್ಕೊಳಪಟ್ಟ ಪ್ರಪಂಚದ ಅತ್ಯಂತ ಕಿರಿಯ ರಾಜಕೀಯ ಕೈದಿ ಎನಿಸಿದ್ದಾರೆ. ಇವತ್ತಿನವರೆಗೂ ಅವರ ಬಗ್ಗೆ, ಯಾವುದೇ ರೀತಿಯ ಮಾಹಿತಿ ಇರುವುದಿಲ್ಲ.
ಟಿಬೆಟನ್ನರು ಪಂಚೆನ್ ಲಾಮಾರ ಆರೋಗ್ಯ ಹಾಗೂ ಧಾರ್ಮಿಕ ಶಿಕ್ಷಣದ ಬಗ್ಗೆ ತೀವು ಕಳವಳ. ಹೊಂದಿದ್ದಾರೆ. ಟಿಬೆಟಿನ ಮಾನವ ಹಕ್ಕು ಹಾಗೂ ಪ್ರಜಾಸತ್ತೆಯ ಕೇಂದ್ರದ ಮಾಹಿತಿಯ ಪ್ರಕಾರ 2500 ಕ್ಕೂ ಹೆಚ್ಚು ರಾಜಕೀಯ ಕೈದಿಗಳಿದ್ದಾರೆ. ಇವೆಲ್ಲದರ ಬಗ್ಗೆ, ಚೀನಾ ಆಡಳಿತ ಉತ್ತರ ನೀಡಬೇಕು 11ನೇ ಪಂಚನ್ ಲಾಮಾ ಹಾಗೂ ಇತರ ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಕೈ ಜಿಂಗ್ ಪಿಂಗ್ ನೇತೃತ್ಯದ ಚೀನಾ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಪ್ರತಿಭಟನಾನಿರತರು ತಿಳಿಸಿದರು.
ಟಿಬೆಟನ್ ಜನರ ಹಕ್ಕು ಹಾಗೂ ಭಾವನೆಗಳನ್ನು ಗೌರವಿಸಬೇಕು. ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಬೇಕು. ದಲಾಯಿ ಲಾಮಾರವರ ಮಧ್ಯಸ್ಥಿಕೆಯನ್ನು ಒಪ್ಪಿಕೊಳ್ಳಬೇಕು. ಹಾಗೆಯೇ ಟಿಬೆಟಿನ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ನೀತಿಯನ್ನು ನಿಲ್ಲಿಸಬೇಕು ಎಂದು ಕೈ-ಜಿಂಗ್-ಪಿಂಗ್ ನೇತೃತ್ವದ ಚೀನಾ ಸರ್ಕಾರವನ್ನು ಒತ್ತಾಯಿಸುತ್ತೇವೆ. ವಿಶ್ವ ಸಂಸ್ಥೆಯ ಮಾನವ ಹಕ್ಕು ಸಮಿತಿಯು. 11ನೇ ಪಂಚನ್ ಲಾಮಾ ಗೆಡುನ್ ಚೊಯೀ ನೀಮಾ ಅವರ ಇರುವಿಕೆ ಹಾಗೂ ಅವರ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕು ಎಂದು ಪ್ರತಿಭಟನಾನಿರತ ಟಿಬೆಟನ್ನರು ಆಗ್ರಹಿಸಿದರು.
Key words: Mysore, Tibetans, protest, against, China
The post ಪಂಚನ್ ಲಾಮಾ ಹಾಗೂ ಎಲ್ಲ ರಾಜಕೀಯ ಕೈದಿಗಳ ಬಿಡುಗಡೆ ಆಗ್ರಹ: ಚೀನಾ ವಿರುದ್ದ ಟಿಬೆಟನ್ನರ ಪ್ರತಿಭಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.