ಮೈಸೂರು,ಏಪ್ರಿಲ್,29,2025 (www.justkannada.in): ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನ ಖಂಡಿಸಿ ಮೈಸೂರಿನಲ್ಲಿ ಅಕ್ಬರ್ ಎಂಬುವವರು ಏಕಾಂಗಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಮುಂಭಾದ ಗಾಂಧಿ ಪುತ್ಥಳಿ ಬಳಿ ನಿಂತು ಅಕ್ಬರ್ ಮೌನ ಪ್ರತಿಭಟನೆ ನಡೆಸಿದರು. ದೇಶದ ಶಾಂತಿ ಮತ್ತು ಐಕ್ಯತೆಯ ವಿರೋಧಿಗಳಿಗೆ ಧಿಕ್ಕಾರ ಎಂಬ ಭಿತ್ತಿ ಪತ್ರವನ್ನ ಹಿಡಿದು ಅಕ್ಬರ್ ಉರಿ ಬಿಸಿಲನ್ನ ಲೆಕ್ಕಿಸದೇ ಬೆಳಗ್ಗೆಯಿಂದ ಪ್ರತಿಭಟನೆಗೆ ನಿಂತಿದ್ದಾರೆ.
ದೇಶ, ಭಾಷೆ, ಕನ್ನಡ, ನಾಡು, ನುಡಿ ಜಲಗಾಗಿ ಮಿಡಿಯುವ ಅಕ್ಬರ್ , ಕಾಶ್ಮೀರದ ಉಗ್ರರ ದಾಳಿಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಇರುವ ಭಯೋತ್ಪಾದನೆಯನ್ನ ಬೇರು ಸಹಿತ ಕಿತ್ತು ಹಾಕಬೇಕು. ಕಿಡಿಗೇಡಿಗಳಿಗೆ ತಕ್ಕ ಉತ್ತರ ನಮ್ಮ ಪ್ರಧಾನಿ ಮೋದಿ ಕೊಡಬೇಕು. 28 ಅಮಾಯಕರ ಸಾವಿಗೆ ಕಾರಣರಾದ ಉಗ್ರರ ನಾಶ ಮಾಡಬೇಕು. ಅಗತ್ಯ ಬಿದ್ದರೆ ಪಾಕಿಸ್ತಾನದ ಜೊತೆ ಯುದ್ದ ಸಾರಬೇಕು. ನಮ್ಮ ದೇಶ ಶಾಂತಿಗೆ ಹೆಸರುವಾಸಿಯಾದ ದೇಶ. ಪದೇ ಪದೇ ಕೆಣಕುವ ಪಾಪಿ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಬೇಕು ಎಂದು ಅಕ್ಬರ್ ಆಗ್ರಹಿಸಿದ್ದಾರೆ.
Key words: Mysore, Muslim man, protest, against, Pahalgam terror attack
The post ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಮುಸಲ್ಮಾನ್ ವ್ಯಕ್ತಿಯಿಂದ ಏಕಾಂಗಿ ಪ್ರತಿಭಟನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.