ಬೆಂಗಳೂರು,ಏಪ್ರಿಲ್,29,2025 (www.justkannada.in): ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳಿಗೆ ಬೆಂಬಲವಿದೆ. ಪ್ರಧಾನಿ ಮೋದಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ನನ್ನ ಪಕ್ಷ ಬದ್ಧ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತಿಳಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಹೆಚ್.ಡಿ ದೇವೇಗೌಡರು, ಪ್ರವಾಸಿಗರ ಮೇಲೆ ಭಯೋತ್ಪಾದಕರು ದೌರ್ಜನ್ಯ ಮಾಡಿದ್ದಾರೆ. ಪಾಕ್ ಬೆಂಬಲದಿಂದ ಕೃತ್ಯವೆಸಗಿದ್ದಾರೆ ಎಂಬ ಮಾಹಿತಿ ಕೇಂದ್ರದ ಬಳಿ ಇದೆ. ಮೋದಿ ತೆಗೆದುಕೊಳ್ಳುವ ನಿರ್ಧಾರಕ್ಕೆ ದೇಶದ ಜನತೆ ಬೆಂಬಲ ಕೊಡುತ್ತೇವೆ. ಎನ್ ಡಿ ಮೈತ್ರಿಕೂಟದಲ್ಲಿ ಹೆಚ್ ಡಿಕೆ ಮಂತ್ರಿಗಳಾಗಿದ್ದಾರೆ. ಅದ್ದರಿಂದ ನಾವು ಸಂಪೂರ್ಣ ಬೆಂಬಲ ನೀಡಿದ್ದೇವೆ ಎಂದರು.
ಇನ್ನು ಪತ್ರದ ಮೂಲಕ ನನ್ನ ಅಭಿಪ್ರಾಯ ತಿಳಿಸುತ್ತೇನೆ. ನನ್ನ ರಾಜಕೀಯ ಕೊನೇ ಘಟ್ಟದಲ್ಲಿ ನಾನು ತೀರ್ಮಾನ ಮಾಡಿದ್ದೇನೆ ಮೋದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವವಿದೆ ವಿಶ್ವದ ಅನೇಕ ರಾಷ್ಟ್ರಗಳ ನಾಯಕರು ಘಟನೆ ಖಂಡಿಸಿದ್ದಾರೆ ಮುಂದೆ ಏನು ಆಗಬಹುದು ಎಂದು ನಾನು ಈಗಲೇ ಹೇಳಲು ಆಗಲ್ಲ ಮೋದಿ ತೆಗೆದುಕೊಳ್ಳುವ ನಿರ್ಧಾರವನ್ನ ಎಲ್ಲರೂ ಬೆಂಬಲಿಸಬೇಕು. ಇದರಲ್ಲಿ ರಾಜಕೀಯ ಮಾಡಬಾರದು ಎಂದರು.
ಪಿಎಂ ಮೋದಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಒಗಟ್ಟು ಪ್ರದರ್ಶಿಸಿ ಬೆಂಬಲಿಸಬೇಕು. ಖರ್ಗೆ ಅವರು ಮೋದಿ ನಿರ್ಧಾರ ಬೆಂಬಲಿಸಬಹುದು. ನಾನು ನಮ್ಮ ಪಕ್ಷ ಪ್ರಧಾನಿ ಮೋದಿ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧ ಖರ್ಗೆ ಮಾತಿಗೆ ಹೆಚ್ಚು ಬೆಲೆ ಇದೆ. ಆದ್ದರಿಂದ ನಾನು ಹೆಚ್ಚು ಮಾತನಾಡಲ್ಲ ಎಂದರು.
Key words: Pahalgam, terror attack, PM Modi, decision, HD Deve Gowda
The post ಪಹಲ್ಗಾಮ್ ಉಗ್ರರ ದಾಳಿ: ಪ್ರಧಾನಿ ಮೋದಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ- ಹೆಚ್ ಡಿ ದೇವೇಗೌಡರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.