ಬಿಕಾನೇರ್,ಮೇ,22,2025 (www.justkannada.in): ಪಾಕಿಸ್ತಾನದ ನ್ಯೂಕ್ಲಿಯರ್ ಬೆದರಿಕೆಗೆ ನಾವು ಹೆದರಲ್ಲ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಮಣ್ಣು ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.
ಇಂದು ರಾಜಸ್ತಾನದ ಬಿಕಾನೇರ್ ವಾಯುನೆಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಯೋಧರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಉಗ್ರರ ನೆಲೆಗಳನ್ನ ಧ್ವಂಸ ಮಾಡಿದ ಭಾರತೀಯ ಸೇನೆಯನ್ನ ಶ್ಲಾಘಿಸಿದರು.
ಈ ವೇಳೆ ಭಾಷಣ ಮಾಡಿದ ಪ್ರಧಾನಿ ಮೋದಿ, ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ಮಾಡಿ 26 ಮಂದಿ ಅಮಾಯಕರನ್ನ ಕೊಂದಿದ್ದರು. ಇದಾದ ಬೆನ್ನಲ್ಲೆ ಕೇವಲ 22 ನಿಮಿಷದಲ್ಲಿ ಉಗ್ರರನ್ನ ಮಣ್ಣಿನಲ್ಲಿ ಹೂತು ಹಾಕಿದ್ದೇವೆ. ಭಯೋತ್ಪಾದನೆಯನ್ನ ಮಣ್ಣು ಮಾಡುತ್ತೇವೆ. ಸೇನೆಗೆ ಪೂರ್ಣ ಸ್ವಾತಂತ್ರ ನೀಡಿದ್ದೇವೆ . ಪಾಕ್ ಗೆ ತಕ್ಕ ಉತ್ತರ ನೀಡಿದ್ದೇವೆ ಪ್ರತಿ ಹನಿಯ ರಕ್ತಕ್ಕೂ ಸೇನೆ ಪ್ರತಿಕಾರ ತೀರಿಸಿಕೊಂಡಿದೆ ಎಂದರು.
ದರ್ಮ ಕೇಳಿ ಉಗ್ರರು ಹೊಡೆದಿದ್ದಾರೆ 22ನಿಮಿಷದಲ್ಲಿ 9 ಉಗ್ರರ ನೆಲೆಗಳನ್ನ ನೆಲಸಮ ಮಾಡಿದ್ದಾರೆ. ಭಾರತೀಯ ಸೇನೆಯು ಪಾಕ್ ಮಂಡಿಯೂರಿವಂತೆ ಮಾಡಿದೆ. ಪಾಕ್ ನ್ಯೂಕ್ಲಿಯರ್ ಬೆದರಿಕೆಗೆ ಹೆದರಲ್ಲ ಭಾರತದ ವಿರುದ್ದ ಪಾಕ್ ಯುದ್ದ ಗೆದ್ದಿಲ್ಲ ಎಂದು ಮೋದಿ ನುಡಿದರು.
Key words: PM Modi, visit, Bikaner airbase, Rajasthan
The post ಪಾಕ್ ನ್ಯೂಕ್ಲಿಯರ್ ಬೆದರಿಕೆಗೆ ಹೆದರಲ್ಲ: ಭಯೋತ್ಪಾದನೆ ಮಣ್ಣು ಮಾಡುತ್ತೇವೆ- ಪ್ರಧಾನಿ ಮೋದಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.