ಬೆಂಗಳೂರು,ಮೇ,16,2025 (www.justkannada.in): ಪ್ರಧಾನಿ ಮೋದಿ ಲೋಪಗಳನ್ನ ಮುಚ್ಚಿ ಹಾಕಲು ಬಿಜೆಪಿಯವರು ತಿರಂಗಾ ಯಾತ್ರೆ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಹಲವು ರಾಷ್ಟ್ರಗಳ ಪ್ರಧಾನಿಗಳನ್ನ ನಮ್ಮ ಮೋದಿ ಅಪ್ಪಿಕೊಳ್ತಾರೆ ಹೌಡಿ ಮೋದಿ, ನಮಸ್ತೆ ಟ್ರಂಪ್, ಅಬ್ ಕೀ ಬಾರ್ ಟ್ರಂಪ್ ಇದೆಲ್ಲ ಮಾಡಿ ಮೋದಿಯವರು ಟ್ರಂಪ್ ನನ್ನ ಒಳ್ಳೆಯ ಫ್ರೆಂಡ್ ಅಂತಾರೆ. ಸ್ನೇಹಿತರು ಯಾರಾದರೂ ಹೀಗೆ ಬೆನ್ನಿಗೆ ಚೂರಿ ಹಾಕ್ತಾರೆನ್ರಿ? ನಿಮ್ಮ ಮನೆಗ ಬಂದು ನಿಮಗೆ ದ್ರೋಹ ಮಾಡಿದ್ದಾರೆ ಟ್ರಂಪ್ ಎಂದು ಕಿಡಿಕಾರಿದರು.
ಮೋದಿ ಲೋಪಗಳನ್ನ ಮುಚ್ಚಿ ಹಾಕಲು ತಿರಂಗ ಯಾತ್ರೆ ಮಾಡಿದ್ದಾರೆ. ತಿರಂಗಾ ಯಾತ್ರೆ ಮಾಡುವ ಬಿಜೆಪಿಗೆ ಯಾವ ನೈತಿಕತೆ ಇದೆ. ಇಷ್ಟಾನಾ ನಿಮ್ಮ ಸಾಮರ್ಥ್ಯ? ಇಷ್ಟೇನಾ ನಿಮ್ಮ ಧೈರ್ಯಾ? ಸೋಫಿಯಾ ಖುರೇಷಿ ಬಗ್ಗೆ ಬಿಜೆಪಿ ಸಚಿವ ಅವಮಾನ ಮಾಡಿದ್ದಾರೆ. ಆರ್ ಎಸ್ ಎಸ್ ನವರು 52 ವರ್ಷದಿಂದ ತಿರಂಗ ಧ್ವಜ ಹಾರಿಸಿಲ್ಲ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.
Key words: BJP, Tiranga Yatra, PM Modi, Minister, Priyank Kharge
The post ಪ್ರಧಾನಿ ಮೋದಿ ಲೋಪಗಳನ್ನ ಮುಚ್ಚಿ ಹಾಕಲು ಬಿಜೆಪಿ ತಿರಂಗಾ ಯಾತ್ರೆ- ಸಚಿವ ಪ್ರಿಯಾಂಕ್ ಖರ್ಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.