1
October, 2026

A News 365Times Venture

1
Thursday
October, 2026

A News 365Times Venture

ಫಾರ್ಮ್‌ 7 ದುರ್ಬಳಕೆ ಆರೋಪ: ಚು.ಆಯೋಗದ ಮುಂದೆಯೇ ಧರಣಿ ಕುಳಿತ ಸಿಎಂ ಮತ್ತು ಸಚಿವರು

Date:

ಬೆಂಗಳೂರು,ಅಕ್ಟೋಬರ್‌,1,2026 (www.justkannada.in) ಎಸ್‌ ಐಆರ್‌ ನೆಪದಲ್ಲಿ ಮತಗಳವು, ಫಾರ್ಮ್7‌ ದುರ್ಬಳಕೆ ಮಾಡಿಕೊಳ್ಳಲಾಗಿದ್ದು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಿಎಂ ಡಿಕೆ ಶಿವಕುಮಾರ್‌ ಮತ್ತು ಸಂಪುಟದ ಎಲ್ಲಾ ಸಚಿವರು ರಾಜ್ಯ ಚುನಾವಣಾ ಆಯೋಗದ ಮುಂದೆ ಕುಳಿತು ಧರಣಿ ನಡೆಸಿದ್ದಾರೆ.

ಚುನಾವಣಾ ಫಾರ್ಮ್7‌ ದುರ್ಬಳಕೆ ಈ ಮೂಲಕ ಮತಗಳವು ಆರೋಪಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸಿಎಂ ಡಿಕೆ ಶಿವಕುಮಾರ್‌ ದೂರು ಸಲ್ಲಿಸಿದರು. ಬಳಿಕ ಹೊರ ಬಂದು ಚುನಾವಣಾ ಆಯೋಗದ ಕಚೇರಿಯ ಮೆಟ್ಟಿಲಿನ ಮೇಲೆಯೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

ಸಚಿವ ಸಂಪುಟ ಸಭೆಯನ್ನ ರದ್ದು ಮಾಡಿದ್ದು ಸಿಎಂ ಡಿಕೆ ಶಿವಕುಮಾರ್‌ ಪ್ರತಿಭಟನೆಗೆ ಸಚಿವರು, ಶಾಸಕರು ಸಾಥ್‌ ನೀಡಿದ್ದಾರೆ.  ತಪ್ಪಿತಸ್ಥರ ವಿರದ್ದ ದೂರು ದಾಖಲು ಮಾಡಬೇಕೆಂದು ಪಟ್ಟು ಹಿಡಿದಿದ್ದು ದೂರು ದಾಖಲಿಸುವ ತನಕ ಇಲ್ಲೇ ಇರುವುದಾಗಿ ಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಚುನಾವಣಾ ಆಯೋಗದ ಫಾರ್ಮ್‌ 7 ಅನ್ನು ದುರ್ಬಳಕೆ  ಮಾಡಿಕೊಳ್ಳಲಾಗಿದೆ. ಹಲವು ಕ್ಷೇತ್ರಗಳಲ್ಲಿ ಅಕ್ರಮವಾಗಿ ಫಾರ್ಮ್‌ 7 ಸಲ್ಲಿಸಲಾಗಿದೆ. ತಪ್ಪು ಮಾಡಿದವರ ವಿರುದ್ದ ಕಾನೂನಾತ್ಮಕವಾಗಿ ಕ್ರಮ ಆಗಬೇಕು ಫಾರ್ಮ್‌ 7 ಸಲ್ಲಿಸಿ ಮತದಾರರ ಹೆಸರು ಡಿಲಿಟ್‌ ಮಾಡುವ ಕೆಲಸವಾಗಿದೆ ಎಂದು ಡಿಕೆ ಶಿವಕುಮಾರ್‌ ಆರೋಪಿಸಿದರು.

 

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೈಸೂರಿನಲ್ಲಿ ವಿಶ್ವದ ಮೊದಲ ಸ್ವತಂತ್ರ 8K LED ಡೋಮ್ ಪ್ಲಾನೆಟೇರಿಯಂ – COSMOS

  ಮೈಸೂರು, ಅ.01,2026: ಖಗೋಳ ವಿಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಯನ್ನು ಜನಸಾಮಾನ್ಯರು, ವಿದ್ಯಾರ್ಥಿಗಳು...

ಫಾರ್ಮ್‌ 7 ದುರ್ಬಳಕೆ: FIR ದಾಖಲಿಸಿ ತನಿಖೆ ನಡೆಸುವವರೆಗೂ ಧರಣಿ ಕೈಬಿಡಲ್ಲ-ಬಿ.ಕೆ ಹರಿಪ್ರಸಾದ್

ಬೆಂಗಳೂರು,ಅಕ್ಟೋಬರ್‌,1,2026 (www.justkannada.in): ಫಾರ್ಮ್‌ ೭ ಮೂಲಕ ಮತದಾರರ ಪಟ್ಟಿಯಿಂದ ಮತದಾರರ ಹೆಸರು...

ಸೆಟಲ್ಮೆಂಟ್ ಹೆಸರಿನಲ್ಲಿ ಕರೆಸಿ ಮಾರಣಾಂತಿಕ ಹಲ್ಲೆ?    

ಮೈಸೂರು,ಅಕ್ಟೋಬರ್‌,1,2026 (www.justkannada.in) ಸೆಟಲ್ಮೆಂಟ್ ಮಾಡುವುದಾಗಿ ಕರೆಸಿಕೊಂಡು ಗ್ರಾಹಕರ ಮೇಲೆ ಮಾರಣಾಂತಿಕ ಹಲ್ಲೆ...

ಹೊರ ವರ್ತುಲ ರಸ್ತೆಯಲ್ಲಿ ‘ಸ್ವಚ್ಛತೆಯೇ ಸೇವೆʼ  ಅಭಿಯಾನ

ಮೈಸೂರು,ಅಕ್ಟೋಬರ್‌,1,2026 (www.justkannada.in) ಕೇಂದ್ರ ಪುರಸ್ಕೃತ ‘ಸ್ವಚ್ಛತೆಯೇ ಸೇವೆ’ (Swachhata Hi Seva)...