15
July, 2025

A News 365Times Venture

15
Tuesday
July, 2025

A News 365Times Venture

ಫೇಸ್‌ಬುಕ್‌ ನಲ್ಲಿ ಫೇಕ್ ಅಕೌಂಟ್ ಸೃಷ್ಟಿಸಿ ವಂಚಿಸಿದ್ದ 7 ಆರೋಪಿಗಳು ಅಂದರ್

Date:

ಬೆಂಗಳೂರು, ಜನವರಿ,31,2025 (www.justkannada.in): ಫೇಸ್‌ಬುಕ್‌ ನಲ್ಲಿ ನಕಲಿ ಅಕೌಂಟ್ ಸೃಷ್ಟಿಸಿ ವಂಚಿಸುತ್ತಿದ್ದ 7 ಆರೋಪಿಗಳನ್ನ ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಮುದಾಸೀರ್, ಸೈಯ್ಯದ್ ಡ್ಯಾನಿಶ್, ಶಶಿಕುಮಾರ್, ಕಾಸೀಫ್, ಅಜರುದ್ದೀನ್, ಇಮ್ತಿಯಾಜ್ ಹಾಗೂ ಶಫಿವುಲ್ಲಾ ಷರೀಫ್  ಬಂಧಿತ ಆರೋಪಿಗಳು. ಆರೋಪಿಗಳನ್ನ ಮೈಸೂರಿನ ವಿವಿಧೆಡೆಗಳಲ್ಲಿ ಬಂಧಿಸಲಾಗಿದೆ.

ಬಂಧಿತ 7 ಆರೋಪಿಗಳು  ಮೊಹಮ್ಮದ್ ಕಾಶಿಫ್ ಎಂಬುವವರ ಸ್ನೇಹಿತನ ಹೆಸರಿನಲ್ಲಿ ಫೇಸ್‌ಬುಕ್‌  ನಕಲಿ ಖಾತೆ ಸೃಷ್ಟಿಸಿದ್ದ ಆರೋಪಿಗಳು 1.50 ಲಕ್ಷ ರೂ ಲಪಟಾಯಿಸಿದ್ದರು. ಈ ಕುರಿತು ಮೊಹಮ್ಮದ್ ಕಾಶಿಫ್ ದೂರು ನೀಡಿದ್ದರು.  ಇದೀಗ 7 ಆರೋಪಿಗಳನ್ನ ಬಂಧಿಸಲಾಗಿದೆ.

ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು, ಪ್ರಕರಣದ ತನಿಖೆ  ನಡೆಸಿದ ಪೊಲೀಸರು, ಹಣ ವರ್ಗಾವಣೆಯಾದ ಬ್ಯಾಂಕ್‌ ನ ಮಾಹಿತಿ ಕಲೆ ಹಾಕಿದಾಗ ಮೈಸೂರಿನಲ್ಲಿರುವ ಬ್ಯಾಂಕ್‌ ವೊಂದರ ಖಾತೆಗೆ ಹಣ ವರ್ಗಾವಣೆಯಾಗಿರುವುದು ತಿಳಿದು ಬಂದಿತ್ತು. ಆರೋಪಿಯನ್ನ ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಆತ ನೀಡಿದ ಮಾಹಿತಿ ಅನ್ವಯ ಉಳಿದ 6 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು 9 ಮೊಬೈಲ್ ಫೋನ್‌ಗಳು, 11 ಬ್ಯಾಂಕ್ ಪಾಸ್‌ಬುಕ್, 6 ಚೆಕ್ ಬುಕ್, 31 ಎಟಿಎಂ ಕಾರ್ಡ್, 9 ಆಧಾರ್ ಕಾರ್ಡ್‌ಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

Key words: 7 accused,creating, fake accounts, Facebook, arrest

The post ಫೇಸ್‌ಬುಕ್‌ ನಲ್ಲಿ ಫೇಕ್ ಅಕೌಂಟ್ ಸೃಷ್ಟಿಸಿ ವಂಚಿಸಿದ್ದ 7 ಆರೋಪಿಗಳು ಅಂದರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

‘ವೈದ್ಯರನ್ನ ಬದಲಾಯಿಸಿ, ಇಲ್ಲಾಂದ್ರೆ ಆಸ್ಪತ್ರೆ ಮುಚ್ಚಿ’: ರೋಗಿಗಳ ಪ್ರತಿಭಟನೆ, ಆಕ್ರೋಶ

ಮೈಸೂರು,ಜುಲೈ,15,2025 (www.justkannada.in): ಮೈಸೂರಿನಲ್ಲಿ ವೈದ್ಯರೊಬ್ಬರ ವರ್ತನೆಯಿಂದ ಬೇಸತ್ತ ರೋಗಿಗಳು ವೈದ್ಯರ  ವಿರುದ್ಧವೇ...

ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ..? ಸರ್ಕಾರದ ವಿರುದ್ದ ಗುಡುಗಿದ ಬಿಜೆಪಿ ವಕ್ತಾರ

ಮೈಸೂರು,ಜುಲೈ,15,2025 (www.justkannada.in): ಜುಲೈ 19ಕ್ಕೆ ಮೈಸೂರಿನಲ್ಲಿ ಸಾಧನಾ ಸಮಾವೇಶಕ್ಕೆ ಮುಂದಾಗಿರುವ ರಾಜ್ಯ...

ರೈತರ ಜಮೀನು ಭೂ ಸ್ವಾಧೀನ ಕೈ ಬಿಟ್ಟ ಸರಕಾರ: ಸಿಎಂ ಘೋಷಣೆ.

ಬೆಂಗಳೂರು,ಜುಲೈ,15,2025 (www.justkannada.in): ರೈತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರವು  ದೇವನಹಳ್ಳಿ ತಾಲೂಕು...

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿಯಾಗಿ ಚರ್ಚಿಸಿದ ಸಂಸದ ಯದುವೀರ್‌

ಮೈಸೂರು, ಜುಲೈ, 14,2025 (www.justkannada.in):  ಕೇಂದ್ರ ಗೃಹ ಸಚಿವ ಅಮಿತ್‌ ಶಾ...