ಮೈಸೂರು,ಜೂನ್,10,2025 (www.justkannada.in): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೋಲಿಸ್ ಆಯುಕ್ತ ಬಿ.ದಯಾನಂದ್ ಅವರನ್ನ ಅಮಾನತು ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನ ರಾಜ್ಯ ನಾಯಕ ಹಿತರಕ್ಷಣಾ ಸಮಿತಿ ಮತ್ತು ಮಹರ್ಷಿ ವಾಲ್ಮೀಕಿ ಗುರುಕುಲ ಸೇವಾ ಟ್ರಸ್ಟ್ ಖಂಡಿಸಿದೆ.
ಮೈಸೂರಿನಲ್ಲಿ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮಹರ್ಷಿ ವಾಲ್ಮೀಕಿ ಗುರುಕುಲ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ದ್ಯಾವಪ್ಪನಾಯಕ, ಒಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿಯನ್ನ ಏಕಾಏಕಿ ಅಮಾನತು ಮಾಡಿರುವುದು ಖಂಡನೀಯ. ಈ ಮೂಲಕ ಸರ್ಕಾರ ನಾಯಕ ಸಮುದಾಯ ಅಧಿಕಾರಿಯನ್ನ ತುಳಿಯುವಂತಹ ಕೆಲಸ ಮಾಡಿದೆ. ಅಮಾನತು ಅದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಆರ್.ಸಿ.ಬಿ ವಿಜಯೋತ್ಸವಕ್ಕೆ ಅನುಮತಿ ನೀಡಿದೇ ಇದ್ದರೂ ಪೋಲಿಸರ ಅನುಮತಿ ನಿರಾಕರಿಸಿ ಸಂಭ್ರಮಾಚರಣೆ ಮಾಡಿದರು. ಈಗ ಪೊಲೀಸ್ ಕಮಿಷನರ್ ರನ್ನು ಹರಕೆಯ ಕುರಿ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ನಮ್ಮ ಸಮುದಾಯದವನ್ನು ರಾಜ್ಯ ಸರ್ಕಾರ ತುಳಿಯುವ ಕೆಲಸ ಮಾಡುತ್ತಿದೆ. ಬಿ. ದಯಾನಂದ ಅವರು ಎಲ್ಲಿ ಕರ್ತವ್ಯ ಮಾಡುತ್ತಿದ್ದರೂ ಅಲ್ಲಿಗೆ ಮತ್ತೆ ನಿಯೋಜನೆ ಮಾಡಬೇಕು. ಈ ವಿಚಾರವಾಗಿ ಸರ್ಕಾರಕ್ಕೆ ಒಂದು ವಾರ ಗಡುವು ನೀಡುತ್ತೇವೆ. ಒಂದು ವಾರ ಗಡುವು ನಂತರ ಅಮಾನತು ಅದೇಶವನ್ನ ವಾಪಸ್ಸು ತೆಗೆದುಕೊಳ್ಳಬೇಕು. ಒಂದು ವೇಳೆ ತೆಗೆದುಕೊಳ್ಳದೆ ಇದ್ದರೆ ರಾಜ್ಯಾದ್ಯಂತ ನಮ್ಮ ಸಮುದಾಯದವರು ಸರ್ಕಾರದ ವಿರುದ್ದ ಹೋರಾಟ ಮಾಡಬೇಕಾಗುತ್ತದೆ ಎಂದು ದ್ಯಾವಪ್ಪನಾಯಕ ಎಚ್ಚರಿಕೆ ನೀಡಿದ್ದಾರೆ.
Key words: B. Dayanand, suspension, condemned, Mysore, Warning, Protest
The post ಬಿ.ದಯಾನಂದ್ ಅಮಾನತಿಗೆ ಖಂಡನೆ: ಸಸ್ಪಂಡ್ ಆದೇಶ ವಾಪಸ್ ಪಡೆಯದಿದ್ದರೇ ಹೋರಾಟದ ಎಚ್ಚರಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.