ನವದೆಹಲಿ,ಮೇ,10,2025 (www.justkannada.in): ಭಾರತ-ಪಾಕಿಸ್ತಾನದ ನಡುವೆ ಯುದ್ದದ ವಾತಾವರಣ ನಿರ್ಮಾಣವಾಗಿದ್ದು ಪಾಕಿಸ್ತಾನ ಮಾಡುತ್ತಿರುವ ದಾಳಿಗೆ ಭಾರತ ತಕ್ಕ ತಿರುಗೇಟು ನೀಡುತ್ತಿದೆ . ಈ ಮಧ್ಯೆ ಎರಡು ದೇಶಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಅಮೇರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಅಮೇರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ದೂರವಾಣಿ ಕರೆ ಮಾಡಿದ್ದು ಮಾತುಕತೆ ಮೂಲಕ ಸಮಸ್ಯ ಬಗೆಹರಿಸಿಕೊಳ್ಳಲು ರೂಬಿಯೋ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತನಾಡಿದ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಭಾರತ ಮತ್ತು ಪಾಕಿಸ್ತಾನ ಎರಡೂ “ಉದ್ವಿಗ್ನತೆಯನ್ನು ಕಡಿಮೆ ಮಾಡುವ ವಿಧಾನಗಳನ್ನು ಗುರುತಿಸಬೇಕಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಜೈಶಂಕರ್, “ಇಂದು ಬೆಳಿಗ್ಗೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಸಂಭಾಷಣೆ ನಡೆಸಿದ್ದೇನೆ. ಭಾರತದ ವಿಧಾನವನ್ನು ಯಾವಾಗಲೂ ಅಳೆಯಲಾಗುತ್ತದೆ ಮತ್ತು ಜವಾಬ್ದಾರಿಯುತವಾಗಿದೆ ಎಂದಿದ್ದಾರೆ.
Key words: India-Pakistan, war, US Secretary, suggests
The post ಭಾರತ- ಪಾಕ್ ಉದ್ವಿಗ್ನ: ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಯುಎಸ್ ವಿದೇಶಾಂಗ ಕಾರ್ಯದರ್ಶಿ ಸಲಹೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.