ನವದೆಹಲಿ,ಅಕ್ಟೋಬರ್,10,2026 (ww.justkannada.in): ಕೇಂದ್ರ ಎನ್ ಡಿಎ ಸರ್ಕಾರ ಮತಗಳ್ಳತನದಿಂದ ಪ್ರಜಾಪ್ರಭುತ್ವ ಹೈಜಾಕ್ ಮಾಡುಲು ಪ್ರಯತ್ನ ಮಾಡುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಒಕ್ಕೂಟ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು ಚುನಾವಣಾ ಆಯೋಗ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿತು. ಈ ವೇಳೆ ಪೊಲೀಸರು ತಡೆಯೊಡ್ಡಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದರು.
ಪ್ರತಿಭಟನೆ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಮತಗಳ್ಳತನದಿಂದ ಪ್ರಜಾಪ್ರಭುತ್ವ ಹೈಜಾಕ್ ಮಾಡುವ ಪ್ರಯತ್ನ ಮಾಡುತ್ತಿದೆ. ನಾನು ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡುವ ಪರ ನಿಂತಿದ್ದೇನೆ. ದೇಶದ ಪ್ರಜಾಪ್ರಭುತ್ವವನ್ನು ಬಿಜೆಪಿ ನಾಶಪಡಿಸಿದೆ. 100ಕ್ಕೂ ಹೆಚ್ಚು ಸಂಸದರು ಜ್ಞಾನೇಶ್ ಕುಮಾರ್ ಭೇಟಿ ಮಾಡುತ್ತೇವೆ ಆದರೆ ಪೊಲೀಸರು ನಮ್ಮನ್ನ ತಡೆಯುತ್ತಿದ್ದಾರೆ ಎಂದರು. 
ಚುನಾವಣಾ ಆಯುಕ್ತರನ್ನ ಭೇಟುಯಾಗಲು ಯಾಕೆ ಬಿಡುತ್ತಲ್ಲ ಪೊಲೀಸರು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ನಾವು ದೇಶದ ಧ್ವನಿ ಆಗಿದ್ದೇವೆ ನಮ್ಮನ್ನ ಇಲ್ಲಿ ತಡೆದಿದ್ದಾರೆ. ಜನಪ್ರತಿನಿಧಿಗಳನ್ನೇ ಒಳಗೆ ಬಿಡಲ್ಲ ಅಂದರೇ ಏನರ್ಥ ಎಂದು ಪ್ರಶ್ನಿಸಿದರು.




