ಚಾಮರಾಜನಗರ,ಏಪ್ರಿಲ್,21,2025 (www.justkannada.in): ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಏಪ್ರಿಲ್ 24 ರಂದು ಕರ್ನಾಟಕ ಸಚಿವ ಸಂಪುಟ ಸಭೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಮಲೇ ಮಹದೇಶ್ವರ ಬೆಟ್ಟದಲ್ಲಿ 3 ದಿನ ಭಕ್ತರ ವಾಸ್ತವ್ಯಕ್ಕೆ ನಿರ್ಬಂಧ ವಿಧಿಸಲಾಗಿದೆ.
ಏಪ್ರಿಲ್ 22 ರಿಂದ ಏಪ್ರಿಲ್ 24 ರ ವರೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ವಾಸ್ತವ್ಯಕ್ಕೆ ನಿಷೇಧ ಹೇರಲಾಗಿದೆ. ಈ ಕುರಿತು ಮಲೆ ಮಹದೇಶ್ವರ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ. ಭಕ್ತರಲ್ಲಿ ಗೊಂದಲ ಮೂಡದೆ ಇರಲಿ ಎಂದು ಮುಂಚಿತವಾಗಿಯೇ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
ಸಚಿವ ಸಂಪುಟ ಸಭೆ ಹಿನ್ನಲೆ ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಮೂರು ದಿನಗಳ ಕಾಲ ಭಕ್ತರ ವಾಸ್ತವ್ಯಕ್ಕೆ ನಿರ್ಬಂಧ ವಿಧಿಸಲಾಗಿದೆ. ಭಕ್ತರು ಸಹಕಾರ ನೀಡಬೇಕು ಎಂದು ಕಾರ್ಯದರ್ಶಿ ರಘು ಮನವಿ ಮಾಡಿದ್ದಾರೆ.
ಹಿಂದೆ ಹಲವು ಬಾರಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಪ್ರತಿ ಬಾರಿಯೂ ಕೊನೆ ಕ್ಷಣದಲ್ಲಿ ಅಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ರದ್ದಾಗುತ್ತಿತ್ತು. ಇದೀಗ ಏ.24ಕ್ಕೆ ಸಚಿವ ಸಂಪುಟ ಸಭೆ ನಿಗದಿಯಾಗಿದೆ.
Key words: Restriction, devotees, stay, Male Mahadeshwara hill, 3 days
The post ಮಲೇ ಮಹದೇಶ್ವರ ಬೆಟ್ಟದಲ್ಲಿ 3 ದಿನ ಭಕ್ತರ ವಾಸ್ತವ್ಯಕ್ಕೆ ನಿರ್ಬಂಧ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.