26
June, 2026

A News 365Times Venture

26
Friday
June, 2026

A News 365Times Venture

ಮುಡಾ ಕೇಸ್: ಬಿ ರಿಪೋರ್ಟ್ ಬಗ್ಗೆ ಆದೇಶ ಸದ್ಯಕ್ಕಿಲ್ಲ: ತನಿಖೆ ಮುಂದುವರೆಸುವಂತೆ ಕೋರ್ಟ್ ಸೂಚನೆ

Date:

 

ಬೆಂಗಳೂರು,ಏಪ್ರಿಲ್,15,2025 (www.justkannada.in): ಸಿಎಂ ಸಿದ್ದರಾಮಯ್ಯ ವಿರುದ್ದದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಅಂತಿಮ ತನಿಖಾ ವರದಿ ಸಲ್ಲಿಸುವವರೆಗೆ  ಬಿ ರಿಪೋರ್ಟ್ ಬಗ್ಗೆ ಆದೇಶವಿಲ್ಲ ಎಂದು ಹೇಳಿರುವ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಯನ್ನ ಮುಂದುವರೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದೆ.

ಲೋಕಾಯುಕ್ತ ನೀಡಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಇಡಿ   ಮೇಲ್ಮನವಿಯನ್ನ ಸಲ್ಲಿಸಿದ್ದರು. ಈ ಮಧ್ಯೆ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.

ಹಾಗೆಯೇ  ದೂರುದಾರ ಸ್ನೇಹಮಯಿ ಬಿ ರಿಪೋರ್ಟ್ ಪ್ರಶ್ನಿಸಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ  ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್, ಇದೀಗ ಲೋಕಾಯುಕ್ತ ಪೊಲೀಸರಿಗೆ ತನಿಖೆ ಮುಂದುವರೆಸಿ ಅಂತಿಮ ವರದಿ ಸಲ್ಲಿಸಲು ಸೂಚಿಸಿದ್ದು, ವಿಚಾರಣೆಯನ್ನು ಮೇ 7ಕ್ಕೆ ಮುಂದೂಡಿಕೆ ಮಾಡಿದ್ದಾರೆ.

ಅಲ್ಲದೆ ಅಂತಿಮ ವರದಿ ಬರುವವರೆಗೂ ಬಿ ರಿಪೋರ್ಟ್ ಬಗ್ಗೆ ನಿರ್ಧರಿಸಲ್ಲ. ಇಡಿ ಕೂಡ ತಕರಾರು ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ತನಿಖೆ ಮುಂದುವರೆಸಲು ಲೋಕಾಯುಕ್ತ ಪೊಲೀಸರು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಇದೀಗ ತನಿಖೆ ಮುಂದುವರೆಸಲು ಕೋರ್ಟ್ ಅನುಮತಿ ನೀಡಿದೆ.

Key words: Muda case, CM Siddaramaiah, B report, Court

The post ಮುಡಾ ಕೇಸ್: ಬಿ ರಿಪೋರ್ಟ್ ಬಗ್ಗೆ ಆದೇಶ ಸದ್ಯಕ್ಕಿಲ್ಲ: ತನಿಖೆ ಮುಂದುವರೆಸುವಂತೆ ಕೋರ್ಟ್ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಿಡದಿ ಟೌನ್ ಶಿಪ್ ಬಗ್ಗೆ ವರಿಷ್ಠರು ಪರಿಹಾರ ನೀಡ್ತಾರೆ- ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಜೂನ್,26,2026 (www.justkannada.in): ಬಿಡದಿ ಟೌನ್ ಶಿಪ್ ಬಗ್ಗೆ ಗೊಂದಲ ಇರುವುದು ನಿಜ....

ಡಿಸಿಎಂ ಪರಮೇಶ್ವರ್ ತವರಲ್ಲಿ ಮಲ ಹೊರುವ ಪದ್ದತಿ ಜೀವಂತ

ತುಮಕೂರು,ಜೂನ್,26,2026 (www.justkannada.in):  ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನಲ್ಲಿ ಮಲಹೊರುವ...

ಅಯೋಧ್ಯೆ ರಾಮಮಂದಿರ ಕಾಣಿಕೆ ದುರುಪಯೋಗ: ಇಬ್ಬರು ಅರೆಸ್ಟ್

ನವದೆಹಲಿ,ಜೂನ್,26,2026 (www.justkannada.in): ಅಯೋಧ್ಯೆಯ ರಾಮಮಂದಿರದ ಕಾಣಿಕೆ ದುರುಪಯೋಗ ಪ್ರಕರಣದ ತನಿಖೆ ಚುರುಕುಗೊಂಡಿದ್ದು,...

ತೆರಿಗೆ ವಂಚನೆ ಮತ್ತು ತೆರಿಗೆ ಸೋರಿಕೆ ಸಂಪೂರ್ಣ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ- ಸಿಎಂ ಡಿಕೆಶಿ ಸೂಚನೆ

ಬೆಂಗಳೂರು,ಜೂನ್,26,2026 (www.justkannada.in): ತೆರಿಗೆ ವಂಚನೆಗೆ ಯಾವುದೇ ಅವಕಾಶ ನೀಡಬಾರದು. ತೆರಿಗೆ ಸೋರಿಕೆಯನ್ನು...