ಬೆಂಗಳೂರು,ಜೂನ್,5,2025 (www.justkannada.in): ಆರ್ ಸಿಬಿ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಘಟನೆಯನ್ನ ನೆನೆದು ಡಿಸಿಎಂ ಡಿಕೆ ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ರಾಜ್ಯದಲ್ಲಿ ಈ ರೀತಿ ಘಟನೆ ಆಗುತ್ತೆ ಅಂತಾ ನಿರೀಕ್ಷಿಸಿರಲಿಲ್ಲ. ಮೃತಪಟ್ಟಿರುವ ಎಲ್ಲರೂ ಸಣ್ಣ ವಯಸ್ಸಿನವರು. ತುಂಬಾ ನೋವಾಗಿದೆ. ಅವರ ಕುಟಂಬದವರ ಕಣ್ಣೀರು ನೋವನ್ನು ನೋಡಲು ಆಗುತ್ತಿಲ್ಲ. ಕೆಲವು ಮಾಧ್ಯಮದವರೇ ಘಟನೆ ಬಗ್ಗೆ ಮಾಹಿತಿ ನೀಡಿದರು. ಬಳಿಕ ಕಮಿಷನರ್ ದುರಂತದ ಬಗ್ಗೆ ಮಾಹಿತಿ ನೀಡಿದರು. ಆದರೆ ಚಿಕ್ಕ ಮಕ್ಕಳನ್ನು ನೋಡುವುದು ನೋವುಂಟು ಮಾಡುತ್ತದೆ. ಅವರ ನೋವನ್ನು ನಾನು ನೋಡಿದ್ದೇನೆ ಎಂದು ಭಾವುಕರಾದರು.
ವಿರೋಧ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ ಮಾಡಲಿ. ಅವರು ಎಷ್ಟು ಮೃತ ದೇಹಗಳ ಮೇಲೆ ರಾಜಕೀಯ ಮಾಡಿದ್ದಾರೆಂದು ನಾನು ಪಟ್ಟಿ ಮಾಡುತ್ತೇನೆ. ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
Key words: Rcb, Stampede, DCM, DK Shivakumar, tears
The post ಮೃತರೆಲ್ಲರೂ ಸಣ್ಣವಯಸ್ಸಿನವರು: ತುಂಬಾ ನೋವಾಗಿದೆ- ದುರಂತ ನೆನೆದು ಡಿಸಿಎಂ ಡಿಕೆಶಿ ಕಣ್ಣೀರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.