ಮೈಸೂರು,ಜೂನ್,23,2025 (www.justkannada.in): ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಜೆಸಿಬಿ ಘರ್ಜಿಸಿದ್ದು ಎಂಡಿಎ( ಮೈಸೂರು ಅಭಿವೃದ್ದಿ ಪ್ರಾಧಿಕಾರ) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ.
ಮೈಸೂರಿನ ವಿಜಯನಗರ 4ನೇ ಹಂತದಲ್ಲಿ ಮನೆಗಳನ್ನ ತೆರವು ಮಾಡಲಾಗಿದ್ದು ಮುಡಾ ಅಧಿಕಾರಿಗಳು ಸುಮಾರು 8 ಎಕರೆ 28 ಗುಂಟೆ ಜಾಗವನ್ನ ವಶಕ್ಕೆ ಪಡೆದಿದ್ದಾರೆ. ಈ ಮೂಲಕ 150 ಕೋಟಿ ರೂ. ಗಳಿಗೂ ಅಧಿಕ ಆಸ್ತಿ ರಕ್ಷಣೆ ಮಾಡಿದ್ದಾರೆ.
ಮೈಸೂರು ತಾಲ್ಲೂಕು ಬಸವನಹಳ್ಳಿ ಬಳಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿದ ಆರೋಪದ ಮೇಲೆ ಜೆಸಿಬಿ ಮೂಲಕ ಕಟ್ಟಡ ನೆಲಸಮ ಮಾಡಲಾಗಿದ್ದು, ಸುಮಾರು 8 ಎಕರೆ ಜಾಗವನ್ನ ಎಂಡಿಎ ವಶಕ್ಕೆ ಪಡೆದಿದೆ.
ಈ ಸ್ಥಳದಲ್ಲಿ ಹಲವಾರು ವರ್ಷಗಳಿಂದ ಜನರು ವಾಸವಿದ್ದರು ಎನ್ನಲಾಗಿದೆ. ಈ ನಡುವೆ ಹೈ ಕೋರ್ಟ್ ನಲ್ಲಿ ಪ್ರಕರಣವಿದ್ದು, ಸ್ವಲ್ಪ ಕಾಲಾವಕಾಶ ನೀಡಿ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಹಾಗೆಯೇ ಮನೆಗಳ ತೆರವಿಗೆ ಮುಂದಾದ ಮುಡಾ ಅಧಿಕಾರಿಗಳ ಜೊತೆ ನಿವಾಸಿಗಳು ಮಾತಿನ ಚಕಮಕಿ ನಡೆಸಿದ್ದು, ಪೋಲೀಸರ ಸರ್ಪಗಾವಲಿನಲ್ಲಿ ಮನೆಗಳನ್ನ ತೆರವು ಮಾಡಲಾಗಿದೆ. ಸ್ಥಳದಲ್ಲಿ ವಿಜಯ ನಗರ ಪೋಲೀಸರ ಭದ್ರತೆಯಿಂದ ಮನೆಗಳನ್ನು ತೆರವು ಮಾಡಲಾಗಿದೆ.
ಸರ್ವೇ ನಂಬರ್ 108, 109ರ 8 ಎಕರೆ ಜಾಗಕ್ಕೆ ಮುಡಾದಿಂದ 4 ಲಕ್ಷ ಪರಿಹಾರ ನೀಡಲಾಗಿತ್ತು. ಆದರೆ ಮುಡಾ ನೀಡಿದ್ದ ಪರಿಹಾರವನ್ನ ನಿವಾಸಿಗಳು ತೆಗೆದುಕೊಳ್ಳಲು ನಿರಾಕರಿಸಿ ಮುಡಾ ಅಧಿಕಾರಿಗಳ ಬಳಿ ಕಾಲವಕಾಶ ಕೇಳಿಕೊಂಡರು. ಸದ್ಯ ಹೈ ಕೋರ್ಟ್ ನ ಡಬಲ್ ಬೆಂಚ್ ನಲ್ಲಿ ಪ್ರಕರಣವಿದೆ.
Key words: JCB, Mysore, Government land, worth, Crore, seized, MDA
The post ಮೈಸೂರಿನಲ್ಲಿ ಜೆಸಿಬಿ ಘರ್ಜನೆ: ಕೋಟ್ಯಾಂತರ ರೂ.ಬೆಲೆ ಬಾಳುವ ಸರ್ಕಾರಿ ಭೂಮಿ ವಶಕ್ಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.