ಬೆಂಗಳೂರು,ಮೇ,5,2026 (www.justkannada.in): ಶೃಂಗೇರಿಯಲ್ಲಿ ವೋಟ್ ಟ್ಯಾಂಪರಿಂಗ್ ಆಗಿದೆ. ಮರು ಮತ ಎಣಿಕೆಯಲ್ಲಿ ವ್ಯವಸ್ಥಿತವಾಗಿ ಅಂಚೆ ಮತಗಳನ್ನ ತಿದ್ದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ 52 ಮತಗಳಿಂದ ಗೆಲುವ ವಿಚಾರ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ , ಕಾಂಗ್ರೆಸ್ ನ ಟಿಡಿ ರಾಜೇಗೌಡರಿಗೆ 589 ಅಂಚೆ ಮತಗಳು ಬಂದಿದ್ದವು. ಜೀವರಾಜ್ ಗೆ 692 ಮತಗಳು ಇದ್ದವು. ಎಲ್ಲಾ ಸೇರಿ 201 ಮತಗಳಿಂದ ರಾಜೇಗೌಡ ಗೆದ್ದಿದ್ದರು. ಕೋರ್ಟ್ ಆದೇಶದ ಮೇಲೆ ಮರು ಮತ ಎಣಿಕೆ ಆಯಿತು. ಆದರೆ ರಾಜೇಗೌಡರಿಗೆ ಬಂದಿದ್ದ 170 ಮತ ಅಸಿಂದು ಅಂದಿದ್ದಾರೆ ವೋಟ್ ಚೋರಿಯಿಂದ ಬಿಜೆಪಯವರು ಗೆದ್ದಿದ್ದಾರೆ. ಬ್ಯಾಲೆಟ್ ಪೇಪರ್ ಗಳನ್ನ ತಿದ್ದಿದ್ದಾರೆ.. ಮರು ಮತ ಎಣಿಕೆಯಲ್ಲಿ 255 ಮತಗಳು ಅಸಿಂಧು ಆಗಿವೆ ಎಂದು ಕಿಡಿಕಾರಿದರು.
ಮರು ಮತ ಎಣಿಕೆಯಲ್ಲಿ ವೋಟ್ ಚೋರಿ ಆಗಿದೆ ವೋಟ್ ಚೋರಿ ಅಲ್ಲ ವೋಟ್ ಡಕಾಯಿತಿ ಆಗಿದೆ. ನಾನು ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಬಿಜೆಪಿಯವರು ಸಿಬ್ಬಂದಿ ಮೂಲಕ ಮತಗಳನ್ನ ತಿದ್ದಿದ್ದು ಸ್ಪಷ್ಟವಾಗಿದೆ. ಶೃಂಗೇರಿಯಲ್ಲಿ ವೋಟ್ ಟ್ಯಾಂಪರಿಂಗ್ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: Vote tampering, Sringeri, Postal votes, CM, Siddaramaiah
The post ಶೃಂಗೇರಿಯಲ್ಲಿ ವೋಟ್ ಟ್ಯಾಂಪರಿಂಗ್: ಅಂಚೆ ಮತಗಳನ್ನ ತಿದ್ದಲಾಗಿದೆ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




