ಮೈಸೂರು, ಏಪ್ರಿಲ್, 29,2026 (www.justkannada.in): ಅಬಕಾರಿ ಇಲಾಖೆಯ ವತಿಯಿಂದ ಮೈಸೂರು ನಗರ ಜಿಲ್ಲೆಯ ವಿವಿಧ ಅನುಮಾನಾಸ್ಪದ ಸ್ಥಳಗಳಲ್ಲಿ ಇಂದು ವ್ಯಾಪಕ ದಾಳಿ ನಡೆಸಲಾಗಿದೆ.
ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ), ಮೈಸೂರು ವಿಭಾಗದ ನಿರ್ದೇಶನದ ಮೇರೆಗೆ, ಅಬಕಾರಿ ಉಪ ಅಧೀಕ್ಷಕ ಹೆಚ್.ಕೆ. ರಮೇಶ್ ಅವರ ನೇತೃತ್ವದಲ್ಲಿ ದಾಳಿ ಕಾರ್ಯಾಚರಣೆ ನಡೆದಿದೆ. ಈ ವೇಳೆ ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಮೈಸೂರು ನಗರದ ಬನ್ನಿಮಂಟಪ ಬಡಾವಣೆ, ರಾಡಿಕೋ ಡಿಸ್ಟಿಲರಿ ಸುತ್ತಮುತ್ತ, ಎನ್.ಆರ್. ಮೊಹಲ್ಲಾ ಮತ್ತು ಸಿ.ವಿ. ಮೊಹಲ್ಲಾ ಪ್ರದೇಶಗಳಲ್ಲಿನ ಗೋಡೌನ್ ಗಳು, ಗುಜರಿ ಅಂಗಡಿಗಳು ಸೇರಿದಂತೆ ಹಲವು ಅನುಮಾನಾಸ್ಪದ ಸ್ಥಳಗಳನ್ನು ತಪಾಸಣೆ ಮಾಡಲಾಯಿತು.
ಆದರೆ ದಾಳಿಯ ಸಂದರ್ಭದಲ್ಲಿ ಯಾವುದೇ ಅಬಕಾರಿ ವಸ್ತುಗಳು ಅಥವಾ ಮಾದಕ ಪದಾರ್ಥಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆಯ ಛಾಯಾಚಿತ್ರ ಹಾಗೂ ವಿಡಿಯೋಗಳನ್ನು ದಾಖಲಿಸಿ ಸಂಬಂಧಿತ ಇಲಾಖೆಗಳಿಗೆ ಸಲ್ಲಿಸಲಾಗಿದೆ.
Key words: Mysore, Excise, raids, suspicious places.
The post ಮೈಸೂರು: ಅನುಮಾನಾಸ್ಪದ ಸ್ಥಳಗಳ ಮೇಲೆ ಅಬಕಾರಿ ದಾಳಿ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




