ಮೈಸೂರು,ಮೇ,26,2025 (www.justkannada.in): ಮೈಸೂರು ಜಿಲ್ಲೆಯಲ್ಲಿ ಮೂರು ಕೋವಿಡ್ ಕೇಸ್ ಪತ್ತೆಯಾಗಿವೆ. ಎರಡು ಕೆ.ಆರ್.ನಗರ, ಒಂದು ಹೆಚ್.ಡಿ.ಕೋಟೆಯ ರೋಗಿಗಳಲ್ಲಿ ಕೊರೋನಾ ಪತ್ತೆಯಾಗಿದೆ ಎಂದು ಮೈಸೂರು ಡಿಎಚ್ ಓ ಡಾ.ಪಿ.ಸಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿ ಮಾಹಿತಿ ನೀಡಿದ ಡಿಎಚ್ ಓ ಡಾ.ಪಿ.ಸಿ.ಕುಮಾರಸ್ವಾಮಿ, ಕೋವಿಡ್ ಪತ್ತೆಯಾದ ಮೂವರು ಕೂಡ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಮೂರು ಕೇಸ್ ಗಳಿಗೆ ಯಾವುದೇ ಹೊರ ರಾಜ್ಯ, ದೇಶಕ್ಕೆ ತೆರಳಿದ ಹಿಸ್ಟರಿ ಇಲ್ಲ. ಈಗ ಪತ್ತೆಯಾದ ಮೂರು ಪ್ರಕರಣದ ಸಂಪರ್ಕಕ್ಕೆ ಸಿಕ್ಕವರ ಟೆಸ್ಟಿಂಗ್ ಮಾಡಿಸಲಾಗಿದೆ. ಎಲ್ಲರನ್ನೂ ಕೂಡ ನೆಗೆಟಿವ್ ಬಂದಿರುವ ಕಾರಣ ಆತಂಕ ಪಡುವಂತಿಲ್ಲ ಎಂದರು.
ಜಿಲ್ಲೆಯಲ್ಲಿ ಗರ್ಭಿಣಿಯರು, ಮಕ್ಕಳು, ವಯಸ್ಕರ ಮೇಲೆ ಹೆಚ್ಚಿನ ಗಮನ ಹರಿಸಿದ್ದೇವೆ. ಮೈಸೂರಿನ ಕೆ.ಆರ್.ಆಸ್ಪತ್ರೆ, ಜಿಲ್ಲಾಸ್ಪತ್ರೆ ಸೇರಿ ಎಲ್ಲರ ಜೊತೆ ಚರ್ಚಸಿದ್ದೇವೆ. ಸರ್ಕಾರದ ಅನುಸಾರ ಸ್ಯಾರಿ ಕೇಸ್ ಗಳನ್ನ ಮಾತ್ರ ಟೆಸ್ಟಿಂಗ್ ಮಾಡುತ್ತಿದ್ದೇವೆ. ಈ ಬಾರಿಯ ಕೋವಿಡ್ ಹೆಚ್ಚು ಅಪಾಯಕಾರಿಯಲ್ಲ. ನಾಗರೀಕರು ಯಾರೂ ಭಯ ಪಡುವ ಅಗತ್ಯವಿಲ್ಲ. ಈ ಬಾರಿಯ ಕೋವಿಡ್ ಜ್ವರ, ಕೆಮ್ಮು, ತಲೆನೋವು, ಸಾಮಾನ್ಯ ರೋಗ ಲಕ್ಷಣಗಳಂತೆ ಇವೆ. ಹಿಂದೆ ಇದ್ದ ಮಾದರಿಯಲ್ಲೇ ಕೋವಿಡ್ ಬಂದಿದೆ. ಜನರು ಎಚ್ಚರಿಕೆಯಿಂದ ಇರಬೇಕು. ಮೃದು ಆಹಾರವನ್ನ ಸೇವನೆ ಮಾಡಬೇಕು. ಗುಂಪುಗಳಲ್ಲಿ ಅವರು ಸೇರಬಾರದು. ಎಂಟತ್ತು ಜನ ಸೇರುವ ಸ್ಥಳದಲ್ಲಿ ಮಾಸ್ಕ್ ಬಳಸಿ. ಸ್ಯಾನಿಟೈಸರ್ ಬಳಸುವ ಮೂಲಕ ರೋಗ ತಡೆಗಟ್ಟಿ ಎಂದು ಸಲಹೆ ನೀಡಿದರು.
ಕೋವಿಡ್ ಒಂದು ಸಹಜ ಜ್ವರ. ಪ್ರತಿ ವರ್ಷ ಮೇ, ಜೂನ್, ಜುಲೈ ತಿಂಗಳಲ್ಲಿ ಬರುತ್ತದೆ. ವಾತಾವರಣ ಬದಲಾದಂತೆ ಈ ರೀತಿಯ ರೋಗಗಳು ಸಾಮಾನ್ಯ. ಜನರು ಆತಂಕಕ್ಕೆ ಒಳಗಾಗದೆ, ಎಚ್ಚರಿಕೆಯಿಂದ ಇರಿ ಎಂದು ಡಿಎಚ್ ಓ ಡಾ.ಪಿ.ಸಿ.ಕುಮಾರಸ್ವಾಮಿ ತಿಳಿಸಿದ್ದಾರೆ.
Key words: Three, Covid cases, detected ,Mysore district
The post ಮೈಸೂರು ಜಿಲ್ಲೆಯಲ್ಲಿ ಮೂರು ಕೋವಿಡ್ ಕೇಸ್ ಪತ್ತೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.