31
May, 2026

A News 365Times Venture

31
Sunday
May, 2026

A News 365Times Venture

ಮೈಸೂರು ವಿಭಾಗ ಬಿಜೆಪಿ ಸಹ ಪ್ರಭಾರಿಯಾಗಿ ಡಾ.ಈ.ಸಿ.ನಿಂಗರಾಜ್ ಗೌಡ ನೇಮಕ.

Date:

ಮೈಸೂರು,ಮಾರ್ಚ್,4,2026 (www.justkannada.in): ಭಾರತೀಯ ಜನತಾ ಪಾರ್ಟಿಯ ಮೈಸೂರು ವಿಭಾಗದ ಸಹ ಪ್ರಭಾರಿಯಾಗಿ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ  ಡಾ.ಈ.ಸಿ.ನಿಂಗರಾಜ್ ಗೌಡರನ್ನ ನೇಮಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನೇಮಿಸಿದ್ದಾರೆ.

ಡಾ.ಈ.ಸಿ.ನಿಂಗರಾಜ್ ಗೌಡ ಅವರು ಬಿ.ಎಸ್ಸಿ., ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ದಲ್ಲಿ ಸ್ನಾತಕೋತ್ತರ ಪದವಿ.,  ಎಂ.ಎ ರಾಜ್ಯಶಾಸ್ತ್ರ,  ಎಂ.ಎ ಪತ್ರಿಕೋದ್ಯಮ., ಗ್ರಾಮೀಣ ಅಭಿವೃದ್ದಿ, ಮಾನವ ಸಂಪನ್ಮೂಲ., ಎಂ. ಫಿಲ್., ಪತ್ರಿಕೋದ್ಯಮ ವಿಷಯದಲ್ಲಿ ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ತಲೆಬರಹದ ಮೇಲೆ ಪಿ.ಹೆಚ್.ಡಿ ಸೇರಿದಂತೆ 9 ವಿಷಯಗಳಲ್ಲಿ ಅಧ್ಯಯನ ಮಾಡಿ ಪದವಿ ಪಡೆದಿದ್ದಾರೆ.

ಕಳೆದ 37 ವರ್ಷಗಳಿಂದ ಸಂಘ – ಪರಿವಾರದ ಸಕ್ರೀಯ ಕಾರ್ಯಕರ್ತರಾಗಿರುವ ಇವರು ಪ್ರೌಢಶಾಲೆಯ ವಿದ್ಯಾರ್ಥಿ ಆಗಿದ್ದಾಗಲೇ ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿ (RSS), ಮಂಡ್ಯದ ಪಿ.ಇ.ಎಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತೀದಾಗಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ (ABVP) ಕಾರ್ಯಕರ್ತರಾಗಿ ಮಂಡ್ಯ ನಗರ ಕಾರ್ಯದರ್ಶಿ, ಮಂಡ್ಯ ಜಿಲ್ಲಾ ಪ್ರಮುಖ್, ಮೈಸೂರು ಜಿಲ್ಲಾ ಪ್ರಮುಖ್, ರಾಜ್ಯ ಸಹ ಕಾರ್ಯದರ್ಶಿ, ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಒಳಗೊಂಡಂತಹ ಮೈಸೂರು ವಿಭಾಗ ಪ್ರಮುಖ್ ಆಗಿ, ಹೀಗೆ ಎಬಿವಿಪಿಯಲ್ಲಿ ಹಲವಾರು ಜವಬ್ದಾರಿಗಳನ್ನೂ ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿ ಸದಸ್ಯರಾಗಿ, ಹಣಕಾಸು ಸಮಿತಿ ಸದಸ್ಯರಾಗಿ, ಕ್ರೀಡಾ ಸಮಿತಿ ಸದಸ್ಯರಾಗಿ, ಸಿಂಡಿಕೇಟ್ ಸದಸ್ಯರಾಗಿ ಯಶಸ್ವಿಯಾಗಿ, ಕ್ರೀಯಾಶೀಲರಾಗಿ ಕಾರ್ಯ ನಿರ್ವಹಿಸಿದ್ದಾರೆ.

Key words: Dr. E.C. Ningaraj Gowda, appointed, co-in-charge, Mysore division, BJP.

 

The post ಮೈಸೂರು ವಿಭಾಗ ಬಿಜೆಪಿ ಸಹ ಪ್ರಭಾರಿಯಾಗಿ ಡಾ.ಈ.ಸಿ.ನಿಂಗರಾಜ್ ಗೌಡ ನೇಮಕ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆಶಿ ಪದಗ್ರಹಣಕ್ಕೆ ಹೋಗಲು ತಯಾರಿ- ಶಾಸಕ ಸಿ.ಪಿಯೋಗೇಶ್ವರ್

ರಾಮನಗರ,ಮೇ,30,2026 (www.justkannada.in):  ರಾಜ್ಯದ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್  ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ...

ಜೂ.3 ರಂದು ರಾಜ್ಯದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ

ಬೆಂಗಳೂರು,ಮೇ,30,2026 (www.justkannada.in):  ಜೂನ್ 3 ರಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ...

ರಾಜ್ಯದಲ್ಲಿ ಮುಂದಿನ 2 ವರ್ಷ ‘ಸೂಪರ್ ಭ್ರಷ್ಟ ಸರ್ಕಾರ’- ಛಲವಾದಿ ನಾರಾಯಣಸ್ವಾಮಿ

ಯಾದಗಿರಿ,ಮೇ,30,2026 (www.justkannada.in): ರಾಜ್ಯದಲ್ಲಿ ಮುಂದಿನ ಎರಡು ವರ್ಷಗಳ ಕಾಲ ಸೂಪರ್ ಭ್ರಷ್ಟ...

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ: ಹೈಕಮಾಂಡ್ ನಾಯಕರು, ಶಾಸಕರು ಆಗಮನ

ಬೆಂಗಳೂರು,ಮೇ,30,2026 (www.justkannada.in):  ರಾಜ್ಯದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯಾಗಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ...