ಮೈಸೂರು,ಮೇ,13,2025 (www.justkannada.in): ಪ್ರಧಾನಿ ಮೋದಿಗೆ 75 ವರ್ಷ ಆಗುತ್ತಿರುವ ಹಿನ್ನಲೆ, ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೇಳಿಬರುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಶ್ರೀವತ್ಸ, ಬಿಜೆಪಿಯಲ್ಲಿ ನಾಯಕತ್ವಕ್ಕೇನು ಕೊರತೆ ಇಲ್ಲ. ನರೇಂದ್ರಮೋದಿ ಅವರಿಗೆ ಬದಲಾಗಿ ಪರ್ಯಾಯ ನಾಯಕರು ಬಿಜೆಪಿಯಲ್ಲಿ ಬಹಳಷ್ಟು ಮಂದಿ ಇದ್ದಾರೆ ಎಂದು ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶ್ರೀವತ್ಸ, ಉಮಾಭಾರತಿ ಪಾರ್ಟಿ ಬಿಟ್ಟಾಗಲೂ ಏನು ಆಗಲಿಲ್ಲ. ಗುಜರಾತ್ ನಲ್ಲಿ ಕೇಶುಭಾಯಿ ಪಟೇಲ್ ಪಕ್ಷ ತೊರೆದರು. ಆಗ ನರೇಂದ್ರ ಮೋದಿಯವರಿಗೆ ನಾಯಕತ್ವ ನೀಡಲಾಯಿತು. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೊಡ್ಡವರು ಯಾರು ಇಲ್ಲ. ಯಾರೇ ಪಕ್ಷ ತೊರೆದರೂ ಮತ್ಯಾರಾದರೂ ನಾಯಕರಾಗಿ ಉದಯಿಸುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ಥಾನಕ್ಕೆ ಮತ್ತೊಬ್ಬರನ್ನು ತರುವ ವಿಚಾರದ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ, ಪಕ್ಷದ ನಿರ್ಧಾರವೇ ಅಂತಿಮ. ಪಕ್ಷದ ನಿರ್ಧಾರಕ್ಕೆ ಎಲ್ಲ ನಾಯಕರೂ ಬದ್ದರಾಗಿರುತ್ತಾರೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಕ್ರೆಡಿಟ್ ಯಾರಿಗೆ ಸಲ್ಲಬೇಕು? ಕಾಂಗ್ರೆಸ್ ಗೆ ತಿರುಗೇಟು
ಭಾರತ-ಪಾಕಿಸ್ತಾನದ ನಡುವಿನ ಕದನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕ್ರೆಡಿಟ್ ವಾರ್ ಕುರಿತು ಪ್ರತಿಕ್ರಿಯಿಸಿದ ಶಾಸಕ ಶ್ರೀವತ್ಸ, ಯುದ್ಧದ ಕ್ರೆಡಿಟ್ ಭಾರತೀಯ ಸೇನೆಗೆ ಸಲ್ಲಬೇಕು ಎನ್ನುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಹಾಗಾದರೆ ಗ್ಯಾರಂಟಿ ಯೋಜನೆಗಳ ಕ್ರೆಡಿಟ್ ಯಾರಿಗೆ ಸಲ್ಲಬೇಕು? ಅದರಲ್ಲಿ ಸರ್ಕಾರದ ಪಾತ್ರವೇನಿದೆ? ಎಂದು ನಾವು ಸಿಎಂ ಅವರನ್ನು ಕೇಳಬೇಕಾಗುತ್ತದೆ. ಗ್ಯಾರಂಟಿ ಯೋಜನೆಯ ಶ್ರೇಯಸ್ಸು ಅಧಿಕಾರಿಗಳಿಗೆ ಸಲ್ಲಬೇಕು. ಭಾರತ-ಪಾಕಿಸ್ತಾನ ನಡುವಿನ ಕದನ ವಿಚಾರವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಬಾರದು. ನಾವು ಕೂಡ ಯುದ್ದದ ಯಶಸ್ಸು ಸೇನೆಗೆ ಸಲ್ಲಬೇಕು ಎಂದು ಹೇಳಿದ್ದೇವೆ. ಆದರೆ ಕಾಂಗ್ರೆಸ್ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Key words: many alternative leaders, Modi, party, BJP MLA , Srivatsa
The post ಮೋದಿಗೆ ಪರ್ಯಾಯ ನಾಯಕರು ಪಕ್ಷದಲ್ಲಿ ಬಹಳಷ್ಟಿದ್ದಾರೆ; ಬಿಜೆಪಿ ಶಾಸಕ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.