12
December, 2025

A News 365Times Venture

12
Friday
December, 2025

A News 365Times Venture

ರಾಜ್ಯಕ್ಕೆ ಮಾದರಿ ಹುಲಕೋಟಿ ಗ್ರಾ.ಪಂ: ಚುನಾವಣೆ ಆಯುಕ್ತ ಜಿ.ಎಸ್. ಸಂಗ್ರೆಶಿ ಮೆಚ್ಚುಗೆ

Date:

ಗದಗ ,ಮೇ,16,2025 (www.justkannada.in): ತಾಲ್ಲೂಕು ಮತ್ತು ಜಿಲ್ಲೆಯ ಹುಲಕೋಟಿಯ ಮಾದರಿ ಗ್ರಾಮ ಪಂಚಾಯತ್‌ ಗೆ ಚುನಾವಣೆ ಆಯುಕ್ತ ಜಿ.ಎಸ್. ಸಂಗ್ರೆಶಿ ಅವರು ಭೇಟಿ ನೀಡಿದರು.

ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರ ಮೂಲ ಊರಿನಲ್ಲಿರುವ ಈ ಗ್ರಾಮ ಪಂಚಾಯತ್, ರಾಜ್ಯದ ಗ್ರಾಮೀಣ ಆಡಳಿತ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಮಾನದಂಡವನ್ನು ಸ್ಥಾಪಿಸಿದೆ.

ಕರ್ನಾಟಕ ವಿಧಾನಸಭೆ ಹೋಲುವ ರೀತಿಯ ಅತ್ಯುತ್ತಮ ಸಭಾಂಗಣವಿರುವ ಉತ್ತಮ ಕಟ್ಟಡ. ಈ ಅದ್ಭುತ ಕಟ್ಟಡವು ಹುಲಕೋಟಿಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಚಿವ ಎಚ್.ಕೆ. ಪಾಟೀಲ್ ಅವರ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ.

ಹುಲಕೋಟಿಯ ಗ್ರಾಮ ಪಂಚಾಯತ್ ಕಟ್ಟಡವು ಕರ್ನಾಟಕ ರಾಜ್ಯದಲ್ಲಿ ಇತರ ಯಾವುದೇ ಪಂಚಾಯತ್ ಕಟ್ಟಡಕ್ಕೆ ಹೋಲಿಕೆ ಆಗದಂತಹದ್ದು, ಇತರರಿಗೆ ಮಾದರಿಯಾಗಿದೆ.  ಇದು ಪಂಚಾಯತ್ ಸದಸ್ಯರಷ್ಟೇ ಅಲ್ಲದೆ ಸಂಪೂರ್ಣ ಗ್ರಾಮದ ಜನತೆಗೆ ಅಗತ್ಯವಾದ ಮೂಲಸೌಕರ್ಯ ಒದಗಿಸುತ್ತಿದ್ದು, ಗ್ರಾಮದ ಒಟ್ಟು ಅಭಿವೃದ್ಧಿಗೆ ಮಹತ್ವಪೂರ್ಣವಾಗಿದೆ.

ಸಂಗ್ರೆಶಿ ಅವರ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ಪೂರ್ವ ಸಿದ್ದತಾ ಪ್ರವಾಸದ ಭಾಗವಾಗಿ ಗದಗ ತಾಲ್ಲೂಕು ಕಚೇರಿಗೆ  ಭೇಟಿ ನೀಡಿದ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರೊಂದಿಗೆ ಚುನಾವಣಾ ತಯಾರಿಗಳ ಕುರಿತು ನಡೆಸಿದ ಚರ್ಚೆಗಳು ಫಲಕಾರಿಯಾಗಿದ್ದು, ಇದೇ ಸಂದರ್ಭದಲ್ಲಿಯೇ ಸಹಾಯಕ ಆಯುಕ್ತರು ಹುಲಕೋಟಿಯ ಮಾದರಿ ಗ್ರಾಮ ಪಂಚಾಯತ್ ಕಟ್ಟಡದ ಬಗ್ಗೆ ಚುನಾವಣಾ ಆಯುಕ್ತ ಸಂಗ್ರೆಶಿ ಅವರ ಗಮನ ಸೆಳೆದರು.

ಗ್ರಾಮ ಪಂಚಾಯತ್ ಕಟ್ಟಡಕ್ಕೆ ಭೇಟಿ ನೀಡಿದ ನಂತರ, ಆಯುಕ್ತ  ಜಿ.ಎಸ್. ಸಂಗ್ರೆಶಿ ಮೆಚ್ಚುಗೆ ವ್ಯಕ್ತಪಡಿಸಿ, ಈ ಮಾದರಿಯು ರಾಜ್ಯದಾದ್ಯಂತ ಅನುಕರಿಸಲು ಯೋಗ್ಯವಾಗಿದೆ. ಇಂತಹ ಆದರ್ಶ ಮಾದರಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿ, ರಾಜ್ಯದ  ಇತರ ಭಾಗಗಳಲ್ಲಿಯೂ ಇಂತಹ ಅಭಿವೃದ್ಧಿಗೆ ಪ್ರೇರಣೆಯಾಗಲಿ ಎಂಬುದು ಉದ್ದೇಶ ಎಂದರು.

ಇದೇ ವೇಳೆ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರ ಶ್ಲಾಘನೀಯ ಕೆಲಸ ಹಾಗೂ ದೃಷ್ಟಿಕೋನವನ್ನು ಸಂಗ್ರೆಶಿ ಪ್ರಶಂಸಿಸಿದರು.

ಹುಲಕೋಟಿ ಗ್ರಾಮ ಮತ್ತು ಅದರ ಗ್ರಾಮ ಪಂಚಾಯತ್ ಕಟ್ಟಡದ ಅಭಿವೃದ್ಧಿ, ಗ್ರಾಮೀಣ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಮೇಲಿನ ಎಚ್.ಕೆ. ಪಾಟೀಲ್ ಅವರ ಬದ್ಧತೆಯ ನೇರ ಪ್ರತಿಬಿಂಬವಾಗಿದೆ ಇದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Key words: Hulakoti, model, gram panchayat, Election Commissioner G.S Sangreshi

The post ರಾಜ್ಯಕ್ಕೆ ಮಾದರಿ ಹುಲಕೋಟಿ ಗ್ರಾ.ಪಂ: ಚುನಾವಣೆ ಆಯುಕ್ತ ಜಿ.ಎಸ್. ಸಂಗ್ರೆಶಿ ಮೆಚ್ಚುಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್ :ಗೃಹ ಸಚಿವರ ಭೇಟಿಯಾಗಿ ಚರ್ಚಿಸಿದ SIT ಮುಖ್ಯಸ್ಥರು: ತನಿಖಾ ಪ್ರಗತಿ ವರದಿ ಸಲ್ಲಿಕೆ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಕುರಿತು...

ಧರ್ಮಸ್ಥಳ ಕೇಸ್: ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ- MLC ಸಿ.ಟಿ ರವಿ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಯಾಗುತ್ತಿದ್ದು...

ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ: ಸದನದಲ್ಲಿ ಇಂದು ಪರಮೇಶ್ವರ್ ಮಾತು-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಆಗಸ್ಟ್,18,2025 (www.justkannada.in):  ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಾರಿಗೆ...

ಮೈಸೂರು: ಅತಿಹೆಚ್ಚು ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಉದ್ಘಾಟಿಸಿದ ಸೆಸ್ಕ್ ಎಂಡಿ

ಮೈಸೂರು, ಆಗಸ್ಟ್‌, 18, 2025 (www.justkannada.in): ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ಅತ್ಯಧಿಕ...