25
June, 2026

A News 365Times Venture

25
Thursday
June, 2026

A News 365Times Venture

ರಾಜ್ಯದ ಹೋಟೆಲ್, ಉಪಹಾರ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ-ಸಚಿವ ದಿನೇಶ್ ಗುಂಡೂರಾವ್

Date:

ಬೆಂಗಳೂರು, ಫೆಬ್ರವರಿ 27,2025 (www.justkannada.in):  ಬೆಂಗಳೂರಿನ ಕೆಲವು ಹೋಟೆಲ್ ಹಾಗೂ ಉಪಾಹಾರ ಕೇಂದ್ರಗಳಲ್ಲಿ ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸಲಾಗುತ್ತಿದ್ದು, ವಿವಿಧೆಡೆಯಿಂದ ಸಂಗ್ರಹಿಸಲಾದ ಇಡ್ಲಿ ಮಾದರಿಗಳಲ್ಲಿ ಅಸುರಕ್ಷಿತ ಎಂಬುದು ತಿಳಿದು ಬಂದ ಬೆನ್ನಲ್ಲೆ ಇದೀಗ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ದಿನೇಶ್  ಗುಂಡೂರಾವ್, ರಾಜ್ಯದ ಹೋಟೆಲ್​, ಉಪಾಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ​ ನಿಷೇಧಿಸಲಾಗುತ್ತಿದೆ. ಹೋಟೆಲ್​, ರಸ್ತೆಬದಿ ತಿಂಡಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಬಳಸುವಂತಿಲ್ಲ. ಇನ್ಮುಂದೆ ಆಹಾರ ತಯಾರಿಕೆ, ವಿತರಣೆ ವೇಳೆ ಪ್ಲಾಸ್ಟಿಕ್ ಬಳಸಬಾರದು. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಅಧಿಕೃತ  ಸುತ್ತೋಲೆ ಹೊರಡಿಸಲಾಗುತ್ತದೆ ಎಂದಿದ್ದಾರೆ.

ಬೆಂಗಳೂರಿನ ವಿವಿಧೆಡೆಗಳಿಂದ ಇಡ್ಲಿ ಮಾದರಿಗಳನ್ನು ಪಡೆದಿದ್ದ ಆಹಾರ ಇಲಾಖೆ ಅವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ್ದು,  ಇದೀಗ ಪ್ರಯೋಗಾಲಯ ವರದಿಯಲ್ಲಿ  35 ಕ್ಕೂ ಹೆಚ್ಚು ಇಡ್ಲಿ ಮಾದರಿಗಳು ಅಸುರಕ್ಷಿತ ಎಂಬ ಶಾಕಿಂಗ್ ವಿಚಾರ  ಬಹಿರಂಗವಾಗಿತ್ತು.  ಬೆಂಗಳೂರಿನ ವಿವಿಧ ಕಡೆಗಳಲ್ಲಿ  ಹಲವು ಕಡೆ ಇಡ್ಲಿ ತಯಾರಿಕೆಯಲ್ಲಿ ಹತ್ತಿ ಬಟ್ಟೆಯ ಬದಲು ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದಾರೆ. ಇಡ್ಲಿ ಮಾಡುವಾಗ ಮಾತ್ರವಲ್ಲದೇ , ಆಹಾರ ಬಡಿಸುವಾಗ ಮತ್ತು ಪ್ಯಾಕ್ ಮಾಡಿ ಕೊಡಲು ಕೂಡ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಹೆಚ್ಚಾಗಿ ಬಳಸುವುದರಿಂ ಅವುಗಳು ಬಿಸಿಲಿನ ಶಾಖಕ್ಕೆ ಒಡ್ಡಿಕೊಂಡಾಗ ಕ್ಯಾನ್ಸರ್ ಕಾರಕ ಅಂಶಗಳನ್ನು ಹೊರಸೂಸುತ್ತದೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಹೀಗಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಕ್ರಮಕ್ಕೆ ಮುಂದಾಗಿದ್ದಾರೆ.

Key words: Ban,  use, plastic, hotels, Minister, Dinesh Gundu Rao

The post ರಾಜ್ಯದ ಹೋಟೆಲ್, ಉಪಹಾರ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ-ಸಚಿವ ದಿನೇಶ್ ಗುಂಡೂರಾವ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ತುಂಗಭದ್ರಾ ಡ್ಯಾಂನ ನೂತನ ಕ್ರಸ್ಟ್ ಗೇಟ್‌ ಗಳು ಲೋಕಾರ್ಪಣೆ

ಕೊಪ್ಪಳ, ಜೂನ್,25,2026 (www.justkannada.in): ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶಕ್ಕೆ ನೀರಾವರಿಗೆ ಆಧಾರವಾಗಿರುವ...

NCERT 6ನೇ ಕ್ಲಾಸ್‌ ಕನ್ನಡ ಪುಸ್ತಕಕ್ಕೆ ಕೃಷ್ಣ ಹೆಸರು: ಕೇಂದ್ರದ ವಿರುದ್ದ ಮಧು ಬಂಗಾರಪ್ಪ ಆಕ್ರೋಶ

ಬೆಂಗಳೂರು,ಜೂನ್,25,2026 (www.justkannada.in): ಎನ್ ಸಿಇಆರ್ ಟಿಯ ಆರನೇ ತರಗತಿ ಕನ್ನಡ ಪುಸ್ತಕಕ್ಕೆ...

ಬಿಜೆಪಿ ಆಂತರಿಕ ಕಲಹದಿಂದ ಅಡ್ಡ ಮತದಾನ: ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಅವರೇ ಕಾರಣ- ಗುಡುಗಿದ ಎಸ್.ಟಿ ಸೋಮಶೇಖರ್

ಬೆಂಗಳೂರು,ಜೂನ್,25,2026 (www.justkannada.in):  ಬಿಜೆಪಿ ಆಂತರಿಕ ಕಲಹದಿಂದ ಅಡ್ಡ ಮತದಾನವಾಗಿದೆ. ಇಷ್ಟೆಲ್ಲಾ ಅಲ್ಲೋಲ...

ಇಡಿ ದಾಳಿ ರಾಜಕೀಯ ಪ್ರೇರಿತ: ಮುಂದೆ ನಮ್ಮ ಮೇಲೂ ಆಗಬಹುದು-ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜೂನ್,24,2026 (www.justkannada.in):  ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ಹಾಗೂ ಬೆಳಗಾವಿ...