ಬೆಂಗಳೂರು,ಫೆಬ್ರವರಿ,15,2025 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್ ಡಿಕುಮಾರಸ್ವಾಮಿ ನಡುವಿನ ವಾಕ್ಸಮರ ಮುಂದುವರೆಯುತ್ತಿಲೇ ಇದ್ದು ರಾಮನಗರ ಅಭಿವೃದ್ದಿ ವಿಚಾರವಾಗಿ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.
ರಾಮನಗರ ಜಿಲ್ಲೆ ಹೆಸರು ಬದಲಾಯಿಸಲು ಹೊರಟರೆ ತಕರಾರು ತೆಗೆಯುತ್ತೀರಿ ಎಂದು ಕಿಡಿಕಾರಿದ್ದ ಡಿಸಿಎಂ ಡಿಕೆ ಶಿವಕುಮಾರ್ ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ರಾಮನಗರದಲ್ಲಿ ಏನು ಅಭಿವೃದ್ದಿ ಮಾಡಿದ್ದಾರೆ ರಾಂನಗರ ಅಭಿವೃದ್ದಿ ಮಾಡಿದ್ದು ನಾನು. ರಾಮನಗರದಲ್ಲಿ ನಾನು ಕಷ್ಟಪಟ್ಟು 45 ಎಕರೆ ಜಮೀನು ಖರೀದಿ ಮಾಡಿದ್ದೇನೆ. ನಿನ್ನೆ ನೋಟಿಸ್ ಕೊಡದೆ ದಾಳಿ ಮಾಡಲು ಬಂದಿದ್ದರು . ನನ್ನ ಜಮೀನು ಸರ್ವೆ ಮಾಡುವುದಾದರೇ ನೋಟಸ್ ನೀಡಿ ನಂತರ ಬನ್ನಿ. ಬೇಕಾದರೇ ತನಿಖೆ ಮಡಲು ಎಸ್ ಐಟಿ ರಚಿಸಿ. ಅಕ್ರಮವಾಗಿ ಭೂಮಿ ಖರೀದಿಸಿದ್ರೆ ವಾಪಸ್ ತೆಗೆದುಕೊಳ್ಳಿ ಎಂದು ಸವಾಲು ಹಾಕಿದರು.
Key words: developed, Ramanagara, HDK, DK Shivakumar
The post ರಾಮನಗರ ಅಭಿವೃದ್ದಿ ಮಾಡಿದ್ದು ನಾನು – ಡಿಕೆ ಶಿವಕುಮಾರ್ ಗೆ ಹೆಚ್.ಡಿಕೆ ಟಾಂಗ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.