18
July, 2025

A News 365Times Venture

18
Friday
July, 2025

A News 365Times Venture

ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಏಕಲವ್ಯ ಮಾದರಿ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ ಘೋಷಿಸಿದ ಸಿಎಂ

Date:

ಬೆಂಗಳೂರು,ಏಪ್ರಿಲ್, 5,2025 (www.justkannada.in): ಕರ್ನಾಟಕದ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಅಭ್ಯಸಿಸಿ ರಾಷ್ಟ್ರ ಮಟ್ಟದಲ್ಲಿ  ಪ್ರಥಮ ಸ್ಥಾನ ಪಡೆದ ಮೂವರು ವಿದ್ಯಾರ್ಥಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಸನ್ಮಾನಿಸಿ ಬಹುಮಾನ ಘೋಷಿಸಿದರು.

ಎಸ್ ಎಸ್ ಎಲ್ ಸಿ ಯಲ್ಲಿ  ಪ್ರಥಮ ಸ್ಥಾನ ಪಡೆದ ಚಿತ್ರದುರ್ಗ ಜಿಲ್ಲೆಯ ಸಂಜೀವ್ ಮುತ್ತಯ್ಯ (ಶೇ 96.8%) ಇವರಿಗೆ 2 ಲಕ್ಷ ರೂ ಬಹುಮಾನ, ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ  ಪಡೆದ ರಾಯಚೂರು ಜಿಲ್ಲೆಯ ವೀರೇಶ್ ( ಶೇ. 95.16%.)ಗೆ  2 ಲಕ್ಷ ರೂ ಬಹುಮಾನ ಘೋಷಿಸಿದರು

ಲೋಹಿತ್ ನೀಲಪ್ಪ ಶಿನೋಬಿ ಬೆಳಗಾವಿ ಜಿಲ್ಲೆ ವಿಜ್ಞಾನ ವಿಭಾಗದಲ್ಲಿ ಶೇ 95% (ತೃತೀಯ ಸ್ಥಾನ) ಪಡೆದಿದ್ದಾರೆ. ಇವರಿಗೆ ಸಿಎಂ ಸಿದ್ದರಾಮಯ್ಯ ಒಂದು ಲಕ್ಷ ರೂ ಬಹುಮಾನ ಘೋಷಿಸಿದರು.

ರಾಜ್ಯದಲ್ಲಿ ಒಟ್ಟು 12 ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿದ್ದು, 2024-25ರಸಾಲಿನಲ್ಲಿ ಒಟ್ಟು 4534 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ  ಮಂತ್ರಾಲಯದ ಅಧೀನದಲ್ಲಿ  ಸ್ಥಾಪಿಸಿರುವ  National education society for Tribal students (KESTS) ಮೂಲಕ ಕಾರ್ಯ ನಿರ್ವಹಿಸುತ್ತಿವೆ.

ದೇಶವ್ಯಾಪಿ ಒಟ್ಟು 722 ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿದ್ದು, 2024ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳ ವಿವರವನ್ನು ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಪ್ರಕಟಿಸಿತು.

ಸಚಿವರಾದ ಸತೀಶ್ ಜಾರಕಿಹೊಳಿ,  ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಕಾರ್ಯಕ್ರಮದಲ್ಲಿ ಇಲಾಖೆ  ಪರಿಶಿಷ್ಟ ಪಂಗಡಗಳ ಇಲಾಖೆ ಕಾರ್ಯದರ್ಶಿ ರಂದೀಪ್, ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಉಪಸ್ಥಿತರಿದ್ದರು.

Key words: CM, rewards , Eklavya Model Residential School, students, first place

The post ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಏಕಲವ್ಯ ಮಾದರಿ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ ಘೋಷಿಸಿದ ಸಿಎಂ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಸತತ 8ನೇ ಬಾರಿಗೆ ದೇಶದ ‘ಸ್ವಚ್ಛ ನಗರಿ ಪಟ್ಟ ಅಲಂಕರಿಸಿದ ಇಂದೋರ್ : ಮೈಸೂರಿಗೆ ಎಷ್ಟನೇ ಸ್ಥಾನ?

ನವದೆಹಲಿ,ಜುಲೈ,17,2025 (www.justkannada.in): ಮಧ್ಯಪ್ರದೇಶದ ಇಂದೋರ್ ನಗರವು ಸತತ ಎಂಟನೇ ಬಾರಿಗೆ  ದೇಶದ...

ರಾಹುಲ್ ಗಾಂಧಿ ಯಾವ ನ್ಯಾಯ ಯೋಧ? ಸಿದ್ದು ಚಮಚಗಿರಿ ಮಾಡ್ತಿದ್ದಾರೆ- ಹೆಚ್.ವಿಶ್ವನಾಥ್ ವಾಗ್ದಾಳಿ

ಮೈಸೂರು,ಜುಲೈ,17,2025 (www.justkannada.in): ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಅವರನ್ನ ನ್ಯಾಯಯೋಧ ಎಂದು...

ತಾಕತ್ ಇದ್ರೆ ಕಾರಜೋಳ ಅವರನ್ನೇ ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಿಸಿಬಿಡಿ-ಬಿವೈವಿಗೆ ಸವಾಲೆಸೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,17,2025 (www.justkannada.in):  ತಾನು ಕೂತಿರುವ ಕುರ್ಚಿಯ ನಾಲ್ಕು ಕಾಲುಗಳನ್ನು ಭದ್ರವಾಗಿ ಇಟ್ಟುಕೊಳ್ಳಲಾಗದ...

ನಾಳೆ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ

ಮೈಸೂರು,ಜುಲೈ,17,2025 (www.justkannada.in):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 18 (ನಾಳೆ)ರಂದು ಮೈಸೂರು...