ಮೈಸೂರು,ಮೇ,6,2025 (www.justkannada.in): ಮೈಸೂರಿನಲ್ಲಿ ರೌಡಿಶೀಟರ್ ಕಾರ್ತಿಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನ ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಪ್ರವೀಣ್, ಆನಂದ್ ಗೌಡ, ಅವಿನಾಶ್, ಚಂದು ರವಿ, ಶೆಟ್ಟಿ ಸೇರಿದಂತೆ 6 ಆರೋಪಿಗಳು ಬಂಧಿತರು, ಮಳವಳ್ಳಿಯಲ್ಲಿ ಕೊಲೆ ಆರೋಪಿಗಳು ಪೊಲೀಸರ ಕೈಗೆ ಲಾಕ್ ಆಗಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ಎಸ್ಪಿ ವಿಷ್ಣುವರ್ಧನ್ ವರುಣ ವ್ಯಾಪ್ತಿಯಲ್ಲಿ ಕಾರ್ತಿಕ್ ಕೊಲೆ ಆಗಿದೆ. ಕಾರ್ತಿಕ್ ಮೂಲತಃ ಮೈಸೂರು ಮೂಲದ ವ್ಯಕ್ತಿ. ಈತನ ವಿರುದ್ಧ ರೌಡಿ ಶೀಟರ್ ಕೂಡ ಇದೆ. ಕೊಲೆಯಾದ ಬಳಿಕ 3 ತಂಡ ರಚನೆ ಮಾಡಿ ಆರೋಪಿಗಳ ವಶಕ್ಕೆ ಬಲೆ ಬೀಸಿದ್ದೆವು. ಆರೋಪಿಗಳು ಸಿಕ್ಕಿ ಅಪರಾಧ ಕೃತ್ಯ ಒಪ್ಪಿಕೊಂಡಿದ್ದಾರೆ. ಒಬ್ಬರು ಮಹಿಳೆ ಸೇರಿ 7 ಜನ ವಶಕ್ಕೆ ಪಡೆದಿದ್ದೇವೆ ಎಂದು ಮಾಹಿತಿ ನೀಡಿದರು.
ಮೊದಲು ದುಡ್ಡಿನ ವಿಚಾರಕ್ಕೆ ಕೊಲೆ ಆಗಿದೆ ಅಂತ ತನಿಖೆ ಮಾಡಿದ್ದವು. ಆದರೆ ಒಂದು ಮಹಿಳೆ ವಿಚಾರಕ್ಕೆ ಕೊಲೆ ಆಗಿದೆ ಅಂತ ತನಿಖೆ ಬಳಿಕ ಗೊತ್ತಾಗಿದೆ. ಕಾರ್ತಿಕ್ ಈ ಹಿಂದೆ ಪ್ರವೀಣ್ ಗೆ ಕೊಲೆ ಬೆದರಿಕೆ ಹಾಕಿದ್ದ. ಈ ಹಿನ್ನಲೆ ಪ್ರವೀಣ್ ಗುಂಪು ಕಟ್ಟಿಕೊಂಡು ಕಾರ್ತಿಕ್ ಹತ್ಯೆ ಮಾಡಿದ್ದಾರೆ. ಪ್ರವೀಣ್ ಈ ಹಿಂದೆ ಕಾರ್ತಿಕ್ ಕಾರ್ ಡ್ರೈವರ್ ಆಗಿದ್ದನು. ಕೊಲೆಯಲ್ಲಿ ಮಹಿಳೆಯ ಕೈವಾಡವೂ ಇದೆ. ಕಾರ್ತಿಕ್ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದ. ಕೊಲೆಯಲ್ಲಿ ಭಾಗಿಯಾಗಿರುವ ಎಲ್ಲರೂ ಕಾರ್ತಿಕ್ ಗೆ ಪರಿಚಯ ಇತ್ತು. ಹೇಗೆ ಆತನನ್ನು ಟ್ರ್ಯಾಪ್ ಮಾಡಿದರು. ಪ್ಲಾನ್ ಹೇಗೆ ಮಾಡಿದರು ಅಂತ ಸಂಪೂರ್ಣ ಮಾಹಿತಿ ತನಿಖೆ ಬಳಿಕ ತಿಳಿಸುತ್ತೇವೆ. ಕಾರ್ತಿಕ್ ಜೊತೆ ಇವರೆಲ್ಲರಿಗೂ ಪರ್ಸನಲ್ ಎನಿಮಿಟಿ ಇತ್ತು ಎಂದು ತಿಳಿಸಿದರು.
ಪ್ರವೀಣ್ ಗೆ ಕಾರ್ತಿಕ್ ನಿಂದ ಜೀವ ಭಯ ಇತ್ತು. ಹೀಗಾಗಿ ಇವನನ್ನು ಬಿಟ್ರೆ ನನ್ನ ಮುಗಿಸುತ್ತಾನೆ ಅಂತ ಪ್ಲಾನ್ ಮಾಡಿ ಪ್ರವೀಣ್ ಗ್ಯಾಂಗ್ ಆತನನ್ನು ಮುಗಿಸಿದೆ. ತನಿಖೆ ಹಂತದಲ್ಲಿರುವ ಕಾರಣ ಎಲ್ಲವನ್ನೂ ಈಗ ಹೇಳಲು ಸಾದ್ಯವಿಲ್ಲ ಎಂದು ಎಸ್ಪಿ ವಿಷ್ಣುವರ್ಧನ್ ಹೇಳಿದರು.
Key words: Mysore, Rowdy sheeter, Karthik, murder case, accused, arrest,
The post ರೌಡಿ ಶೀಟರ್ ಕಾರ್ತಿಕ್ ಹತ್ಯೆ ಕೇಸ್: ಆರು ಆರೋಪಿಗಳು ಅಂದರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.