ಬೆಂಗಳೂರು,ಜೂನ್,21,2025 (www.justkannada.in): ವಸತಿ ಯೋಜನೆಯಡಿ ಹಣ ಪಡೆದು ಮನೆ ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಆರೋಪ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ , ಈ ಬಗ್ಗೆ ತನಿಖೆ ನಡೆಸಲು ಸಿಎಂ ಸಿದ್ದರಾಮಯ್ಯಗೆ ಆಗ್ರಹಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಬಿಡುಗಡೆಯಾದ ಆಡಿಯೋ ಸತ್ಯ ಅಂತಾ ಬಿಆರ್ ಪಾಟೀಲ್ ಹೇಳಿದ್ದಾರೆ. ಲಂಚ ಕೊಡದೆ ಮನೆ ಕೊಡಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಈಗ ಬಂದಿರುವುದು ಬರೀ ಸ್ಯಾಂಪಲ್ ಅಷ್ಟೆ. ಕರ್ನಾಟಕದ ಮೂಲೆ ಮೂಲೆಯಲ್ಲಿ ಲಂಚ ಇಲ್ಲದೆ ಮನೆ ಇಲ್ಲ ಎಂಬಂತಾಗಿದೆ. ಸಿಎಂ ಸಿದ್ದರಾಮಯ್ಯಗೆ ಮರ್ಯಾದೆ ಇದ್ದರೆ ಕೂಡಲೇ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ವಿರೋಧ ಪಕ್ಷದವರು ಇಷ್ಟು ದಿನ ಆಪಾದನೆ ಮಾಡುತ್ತಿದ್ದರು. ಆದರೆ ಈಗ ಆಡಳಿತ ಪಕ್ಷದವರೇ ಆಪಾದನೆ ಮಾಡುತ್ತಿದ್ದಾರೆ. ಎಷ್ಟು ಲೂಟಿ ಹೊಡೆಯುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ದುಡ್ಡಿಲ್ಲದೆ ಈ ಸರ್ಕಾರದಲ್ಲಿ ಏನೂ ನಡೆಯಲ್ಲ. 60 % ಕಮಿಷನ್ ಇಲ್ಲದೆ ಯಾವುದೇ ಕಚೇರಿಯಲ್ಲಿ ಏನು ನಡೆಯಲ್ಲ ಸ್ಲೀಪಿಂಗ್ ಸಿದ್ದರಾಮಯ್ಯ ಯಾವುದರ ಕಡೆ ಗಮನ ಕೊಡಲ್ಲ ಎಂದು ಆರ್.ಅಶೋಕ್ ಕಿಡಿಕಾರಿದರು.
Key words: Housing Scheme, bribery, investigation, R. Ashok
The post ಲಂಚ ಇಲ್ಲದೆ ಮನೆ ಇಲ್ಲ ಎಂಬುದು ಜಗಜ್ಜಾಹೀರು: ಸಿಎಂ ಕೂಡಲೇ ತನಿಖೆಗೆ ವಹಿಸಲಿ- ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.