ಬೆಂಗಳೂರು,ಮಾರ್ಚ್,25,2025 (www.justkannada.in): ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡರನ್ನ ಬಸವೇಶ್ವರ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದೀಗ ಇಂದು ರಜತ್ ಮತ್ತು ವಿನಯ್ ಗೌಡರನ್ನ ಇಬ್ಬರನ್ನು ರೀಲ್ಸ್ ಮಾಡಿದ ಸ್ಥಳ ನಾಗರಬಾವಿಯ ಅಕ್ಷಯ್ ಸ್ಟುಡಿಯೋಗೆ ಕರೆತಂದು ಪೊಲೀಸರು ಸ್ಥಳಮಹಜರು ಮಾಡಿದ್ದಾರೆ.
ರಜತ್ ಮತ್ತು ವಿನಯ್ ಗೌಡ ಇಬ್ಬರು ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಬಳಿಕ ಬಸವೇಶ್ವರ ನಗರ ಠಾಣಾ ಪೊಲೀಸರು ನೋಟಿಸ್ ನೀಡಿ ವಿಚಾರಣೆ ನಡೆಸಿ ನಿನ್ನೆ ವಶಕ್ಕೆ ಪಡೆದಿದ್ದರು. ಮಚ್ಚು ಫೈಬರ್ ಎಂಬ ಕಾರಣಕ್ಕೆ ನಿನ್ನೆ ಇಬ್ಬರನ್ನು ಬಿಟ್ಟು ಕಳುಹಿಸಲಾಗಿತ್ತು.
ಆದರೆ ರೀಲ್ಸ್ ಗೆ ಬಳಸಿದ್ದ ಮಚ್ಚುಅಸಲಿಯೋ ನಕಲಿಯೋ ಯಾವುದು ಎಂಬ ವಿಚಾರದಲ್ಲಿ ಗೊಂದಲವಿದ್ದು, ಇಂದು ಮತ್ತೆ ವಿಚಾರಣೆಗೆ ಹಾಜರಾಗಿದ್ದ ರಜತ್, ವಿನಯ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಇದೀಗ ಸ್ಥಳಮಹಜರು ನಡೆಸಿದ್ದಾರೆ. ನಂತರ ಇಬ್ಬರನ್ನು ಕೋರ್ಟ್ ಗೆ ಹಾಜರುಪಡಿಸುವ ಸಾಧ್ಯತೆ ಇದೆ.
Key words: Long, Reels Case, Rajat, Vinay, police, spot
The post ಲಾಂಗ್ ಹಿಡಿದು ರೀಲ್ಸ್ ಪ್ರಕರಣ: ರಜತ್, ವಿನಯ್ ಕರತಂದು ಪೊಲೀಸರಿಂದ ಸ್ಥಳ ಮಹಜರು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.