2
May, 2026

A News 365Times Venture

2
Saturday
May, 2026

A News 365Times Venture

ವಾರಕ್ಕೆ 75 ಗಂಟೆ ಕೆಲಸ ಮಾಡಿ ಅಂದ್ರೆ ನಾವೇನ್ ಪ್ರಾಣಿಗಳಾ..? MLC ಬಿ.ಕೆ ಹರಿಪ್ರಸಾದ್ ಆಕ್ರೋಶ

Date:

ಬೆಂಗಳೂರು,ಮೇ,1,2026 (www.justkannada.in): ವಾರಕ್ಕೆ 75 ಗಂಟೆಗಗಳ ಕಾಲ ಕೆಲಸ ಮಾಡಬೇಕು ಎಂದಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ವಿರುದ್ದ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ಕೆಲಸದ ಅವಧಿ ಬಗ್ಗೆ ಪ್ರಸ್ತಾಪ ಮಾಡಿ ಇನ್ಫೋಸಿಸ್  ನಾರಾಯಣಮೂರ್ತಿ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು.

ಆ ಯಮ್ಮ ಯಾರೊ ಸಿಂಪಲ್ ಸುಧಾಮೂರ್ತಿ ಅಂತೆ. ನನಗೆ ಗೊತ್ತಿಲ್ಲ ಆಯಮ್ಮನ ಪತಿ ವಾರಕ್ಕೆ 75 ಗಂಟೆ ಕೆಲಸ ಮಾಡಬೇಕು ಅಂದ್ರು. ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು ಎಂದಿದ್ದಾರೆ. ವಾರಕ್ಕೆ  75 ಗಂಟೆ ಕೆಲಸ ಮಾಡಿ ಅಂದ್ರೆ ನಾವೇನ್  ಮನುಷ್ಯರಾ..? ಅಥವಾ ಪ್ರಾಣಿಗಳಾ? ಎಂದು ಬಿಕೆ ಹರಿಪ್ರಸಾದ್ ಕಿಡಿಕಾರಿದರು.

ಸ್ವಾಭಿಮಾನ, ಸಮಾನತೆ ಹಕ್ಕಿಗಾಗಿ ಹೋರಾಟ ಮಾಡಬೇಕು. ಡಾ.ಬಿ. ಆರ್ ಅಂಬೇಡ್ಕರ್  ದಿನಕ್ಕೆ 8 ಗಂಟೆ ಕೆಲಸ ಮಾಡಬೇಕು ಅಂದರು. ಮಾಲೀಕ ಕೆಲಸ ಕೊಡಬಹುದು. ನಾವು ಕೆಲಸ ಮಾಡಿದ್ರೇನೆ ಮಾಲೀಕ.  1 ರೂ ಲೆಕ್ಕದಲ್ಲಿ ಅವರಿಗೆ ಕಂಪನಿ ಮಾಡೋಕೆ ನೂರಾರು ಎಕರೆ ಕೊಟ್ಟರು ಎಂದು ಬಿಕೆ ಹರಿಪ್ರಸಾದ್ ಹರಿಹಾಯ್ದರು.

Key words: Labor Day, 75 hours, week, work, MLC, BK Hariprasad

The post ವಾರಕ್ಕೆ 75 ಗಂಟೆ ಕೆಲಸ ಮಾಡಿ ಅಂದ್ರೆ ನಾವೇನ್ ಪ್ರಾಣಿಗಳಾ..? MLC ಬಿ.ಕೆ ಹರಿಪ್ರಸಾದ್ ಆಕ್ರೋಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಚುನಾವಣೆ ಮುಗಿಯುತ್ತಿದ್ದಂತೆ ಸಿಲಿಂಡರ್ ಬೆಲೆ ಏರಿಕೆ: ಇದು ಕೇಂದ್ರದ ಗಿಮಿಕ್- ಸಚಿವ ಕೃಷ್ಣ ಭೈರೇಗೌಡ

ಶಿವಮೊಗ್ಗ,ಮೇ,1,2026 (www.justkannada.in):  ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 993 ರೂ. ಏರಿಕೆಯಾದ...

ಬೆಲೆ ಏರಿಕೆ ಮಾಡಿದ್ರೂ ಜನ ಮೋದಿಯನ್ನೇ ಬೆಂಬಲಿಸ್ತಾರೆ- ಮಲ್ಲಿಕಾರ್ಜುನ ಖರ್ಗೆ ಬೇಸರ

ಕಲಬುರುಗಿ,ಮೇ,1,2026 (www.justkannada.in):  ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 993 ರೂ. ಏರಿಕೆ...

ಕಾರ್ಮಿಕರು ದೇಶದ ಆರ್ಥಿಕ  ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮೇ,1,2026 (www.justkannada.in): ಕಾರ್ಮಿಕರು ದೇಶದ ಆರ್ಥಿಕ  ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು...

ನಾಳೆ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ: ನಿಷೇಧಾಜ್ಞೆ, ಮದ್ಯ ಮಾರಾಟಕ್ಕೆ ನಿರ್ಬಂಧ

ಚಿಕ್ಕಮಗಳೂರು,ಮೇ,1,2026 (www.justkannada.in):  ನಾಳೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು...