ಬೆಂಗಳೂರು ಗ್ರಾಮಾಂತರ,ಮೇ,20,2025 (www.justkannada.in): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲಾನ ಅಜಾದ್ ಮಾದರಿ ಶಾಲೆ ನಡೆಸಲು ಹೊಸಕೋಟೆ ತಾಲ್ಲೂಕಿನಲ್ಲಿ ಸುಸಜ್ಜಿತ ಬಾಡಿಗೆ ಕಟ್ಟಡ ಬೇಕಾಗಿದ್ದು, ಅದಕ್ಕಾಗಿ ಕಟ್ಟಡ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
6ನೇ ತರಗತಿಯಿಂದ 10ನೇ ತರಗತಿಯವರೆಗೆ ಸುಮಾರು 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಹಿತದೃಷ್ಟಿಯಿಂದ ಸುಸಜ್ಜಿತವಾದ 05 ತರಗತಿ ಕೊಠಡಿಗಳು, 05 ಶೌಚಗೃಹ, ಡೈನಿಂಗ್ ಹಾಲ್, ಅಡುಗೆ ಕೋಣೆ ಹಾಗೂ ಕನಿಷ್ಠ 01 ರಿಂದ 02 ಸಿಬ್ಬಂದಿಗಳಿಗೆ ಆಫೀಸ್ ಕೊಠಡಿಗಳು, ಯು.ಪಿ.ಎಸ್, ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳುಳ್ಳ ಕಟ್ಟಡ ಬೇಕಾಗಿದೆ.
ಸರ್ಕಾರಿ ಶಾಲೆ ನಡೆಸಲು ಕಟ್ಟಡವನ್ನು ಬಾಡಿಗೆಗೆ ನೀಡಲಿಚ್ಚಿಸುವ ಮಾಲೀಕರು ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಮುಖ್ಯೋಪಾಧ್ಯಾಯರು ಮೌಲಾನ ಅಜಾದ್ ಮಾದರಿ ಶಾಲೆ, ಹೊಸಕೋಟೆ ಟೌನ್ ದೂರವಾಣಿ ಸಂಖ್ಯೆ: 9632249214, 080-29787455 ಗೆ ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: school, equipped, rental building, Invite, application, owner
The post ಶಾಲೆಗೆ ಸುಸಜ್ಜಿತ ಬಾಡಿಗೆ ಕಟ್ಟಡ: ಮಾಲೀಕರಿಂದ ಅರ್ಜಿ ಆಹ್ವಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.