12
December, 2025

A News 365Times Venture

12
Friday
December, 2025

A News 365Times Venture

ಶ್ರೀನಗರದಲ್ಲಿ ಕೊಪ್ಪಳದ ನಾಲ್ಕು ಕುಟುಂಬಗಳು ಸೇಫ್‌ : ಸಚಿವ ಸಂತೋಷ್‌ ಲಾಡ್‌

Date:

ಮೈಸೂರು, ಏ.೨೩,೨೦೨೫: ಶ್ರೀನಗರ ಪ್ರವಾಸ ಕೈಗೊಂಡಿರುವ ಕೊಪ್ಪಳ ನಗರದ ನಾಲ್ಕು ಕುಟುಂಬಗಳ ಸದಸ್ಯರು ಜಮ್ಮು ಕಾಶ್ಮೀರದಲ್ಲಿ ಸುರಕ್ಷಿತವಾಗಿದ್ದಾರೆ. ಸಚಿವ ಸಂತೋಷ್‌ ಲಾಡ್‌ ಸ್ಥಳದಲ್ಲಿದ್ದು ಈ ಕುಟುಂಬದ ಸುರಕ್ಷತೆ ಬಗೆಗೆ ಭರವಸೆ ನೀಡಿದ್ದಾರೆ.

ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಬುಧವಾರ ಶ್ರೀನಗರದಲ್ಲಿರುವ ಕೊಪ್ಪಳ ನಗರದ ಕುಟುಂಬ ಸದಸ್ಯರನ್ನು ಭೇಟಿಯಾಗಿ,  ಹೋಟೆಲ್ ಬಿಟ್ಟು ಎಲ್ಲಿಯೂ ಹೋಗದಂತೆ ಸಲಹೆ ನೀಡಿದರು.

ಕೊಪ್ಪಳದ ಸಿದ್ದು ಗಣವಾರಿ, ಉದ್ಯಮಿ ಶರಣಪ್ಪ ಸಜ್ಜನ, ಕಾಂಗ್ರೆಸ್ ಮುಖಂಡ ಕಾಟನ್ ಪಾಷಾ ಮತ್ತು ಶಿವಕುಮಾರ ಪಾವಲಿ ಶೆಟ್ಟ‌ರ್ ಕುಟುಂಬ ಸದಸ್ಯರ ಜೊತೆ ಮಂಗಳವಾರ ಶ್ರೀನಗರಕ್ಕೆ ತೆರಳಿದ್ದು, ಅಲ್ಲಿಗೆ ಹೋದಾಗಿನಿಂದಲೂ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದಾರೆ.

ಪ್ರವಾಸ ರದ್ದುಗೊಳಿಸಿ ಬುಧವಾರ (ಇಂದು) ಸಂಜೆ ನವದೆಹಲಿಗೆ ವಾಪಸ್‌ ಹೋಗಲು ತೀರ್ಮಾನಿಸಿದ್ದಾರೆ. ಎಂದು ಕೊಪ್ಪಳ ನಗರದ ಎಂ.ಕಾಟನ್ ಪಾಷಾ  ಮಾಹಿತಿ ನೀಡಿದ್ದಾರೆ.

“ನಾವು ತಂಗಿದ್ದ ಹೋಟೆಲ್‌ಗೆ ಸಚಿವ ಸಂತೋಷ ಲಾಡ್ ಭೇಟಿ ನೀಡಿದ್ದರು. ಎಲ್ಲಿಯೂ ಹೋಗಬೇಡಿ ಹೊಟೇಲ್‌ನಲ್ಲಿಯೂ ಇರಿ. ಸಂಜೆ ವೇಳೆಗೆ ವಿಮಾನದ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ’ ಎಂದು ಕೊಪ್ಪಳದ ನಿವಾಸಿಗಳು  ತಿಳಿಸಿದ್ದಾರೆ.

key words: Four families, Koppala, Karnataka, Srinagar, Minister Santosh Lad

Four families from Koppal safe in Srinagar: Minister Santosh Lad

The post ಶ್ರೀನಗರದಲ್ಲಿ ಕೊಪ್ಪಳದ ನಾಲ್ಕು ಕುಟುಂಬಗಳು ಸೇಫ್‌ : ಸಚಿವ ಸಂತೋಷ್‌ ಲಾಡ್‌ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್ :ಗೃಹ ಸಚಿವರ ಭೇಟಿಯಾಗಿ ಚರ್ಚಿಸಿದ SIT ಮುಖ್ಯಸ್ಥರು: ತನಿಖಾ ಪ್ರಗತಿ ವರದಿ ಸಲ್ಲಿಕೆ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಕುರಿತು...

ಧರ್ಮಸ್ಥಳ ಕೇಸ್: ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ- MLC ಸಿ.ಟಿ ರವಿ

ಬೆಂಗಳೂರು,ಆಗಸ್ಟ್,18,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಯಾಗುತ್ತಿದ್ದು...

ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ: ಸದನದಲ್ಲಿ ಇಂದು ಪರಮೇಶ್ವರ್ ಮಾತು-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಆಗಸ್ಟ್,18,2025 (www.justkannada.in):  ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಸಾರಿಗೆ...

ಮೈಸೂರು: ಅತಿಹೆಚ್ಚು ಸಾಮರ್ಥ್ಯದ ಖಾಸಗಿ ಇವಿ ಚಾರ್ಜಿಂಗ್‌ ಸ್ಟೇಷನ್‌ ಉದ್ಘಾಟಿಸಿದ ಸೆಸ್ಕ್ ಎಂಡಿ

ಮೈಸೂರು, ಆಗಸ್ಟ್‌, 18, 2025 (www.justkannada.in): ಮೈಸೂರಿನಲ್ಲಿ ನೂತನವಾಗಿ ಆರಂಭಿಸಿರುವ ಅತ್ಯಧಿಕ...