ಶಿವಮೊಗ್ಗ,ಜೂನ್,30,2025 (www.justkannada.in): ಸಂವಿಧಾನದ ಬಗ್ಗೆ ದಿನ ಸಿದ್ದರಾಮಯ್ಯ ತಿರುಚಿದ ಹೇಳಿಕೆ ಕೊಡುತ್ತಿದ್ದಾರೆ. ಸಂವಿಧಾನದ ಮೂಲ ಪೀಠಿಕೆಯನ್ನು ಬಿಟ್ಟು ಹೋಗಬಾರದು ಇದು ನನ್ನ ವಾದ ಜಾತ್ಯಾತೀತ ಮತ್ತು ಸಮಾಜವಾದಿ ಪದವನ್ನು ಸೇರಿಸಿದ್ದು ತಪ್ಪು ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ನುಡಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ, ಜ್ಯಾತ್ಯಾತೀತ, ಸಮಾಜವಾದಿ ಪದಗಳು ಯಾವತ್ತು ಸೇರಿಸಿದರು ಅಂತ ನಾನು ಕೇಳುತ್ತೇನೆ. ಯಾವಾಗ ಸಂವಿಧಾದ ಒಳಗಡೆ ತುರುಕಿದರು ಅಂತ ಕೇಳುತ್ತೇನೆ. ಇಂದಿರಾಗಾಂಧಿಯವರು ತಮ್ಮ ಸರ್ವಾಧಿಕಾರಿ ನಡೆಯಿಂದ ಸಂವಿಧಾನದ ಮೂಲ ಪೀಠಿಕೆ ಬದಲಿಸಿದರು. ಸಂವಿಧಾನದಲ್ಲಿ ಜ್ಯಾತ್ಯಾತೀತ, ಸಮಾಜವಾದಿ ಪದಗಳನ್ನು ಸೇರಿಸಿದರು ಎಂದರು.
ಈ ಮೂರು ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು.
ಸಿದ್ದರಾಮಯ್ಯನವರಿಗೆ ನಾನು ಮೂರು ಪ್ರಶ್ನೆ ಮಾಡುತ್ತೇನೆ. ಜ್ಯಾತ್ಯಾತೀತ, ಸಮಾಜವಾದಿ ಪದ ಸೇರಿಸಿದ್ದು ಯಾರು ಯಾವಾಗ? ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಈ ಪದಗಳನ್ನು ತುರುಕಿದ್ದು ಹೌದೋ ಇಲ್ವೋ? ಅಂಬೇಡ್ಕರ್ ಅವರು ರಚಿಸಿದ ಮೂಲ ಸಂವಿಧಾನದಲ್ಲಿ ಈ ಪದ ಇತ್ತಾ? ಈ ಮೂರು ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು. ದತ್ತಾತ್ರೇಯ ಹೊಸಬಾಳೆ ಹೇಳಿಕೆ ನೀಡಿರುವ ವಿಷಯ ಚೆರ್ಚೆ ಆಗಬೇಕು. ನನ್ನ ಮೂರು ಪ್ರಶ್ನೆಗೆ ಸಿಎಂ ಸರಿಯಾಗಿ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಸಂವಿಧಾನ ಜೇಬಲ್ಲೇ ಇದೆ ಅಂತ ಕೂಗಿದರೇ ಸಂವಿಧಾನ ಬದಲಾಗಲ್ಲ. ಇಂದಿರಾಗಾಂಧಿ ಪ್ರಜಾಪ್ರಭುತ್ವದ ಕತ್ತು ಹಿಚುಕಿ ಕಗ್ಗೋಲೆ ಮಾಡಿದ್ದು ಹೌದೋ ಅಲ್ವೋ. ಎಲ್ಲಾ ನಾಯಕರು ಇದನ್ನು ಪ್ರಶ್ನಿಸಿ ಹೋರಾಟ ಮಾಡಿ ಜೈಲಿಗೆ ಹೋಗಿದ್ರು. ಭಾರತ್ ಮಾತಾ ಕೀ ಜೈ ಅಂತ ಘೋಷಣೆ ಕೂಗಿದ್ದು ತಪ್ಪಾ?. ಶಿವಮೊಗ್ಗದಲ್ಲೂ ಶಂಕರಮೂರ್ತಿಯವರು ಜೈಲಿಗೆ ಹೋಗಿದ್ದರು. ಸಿದ್ದರಾಮಯ್ಯ ಬಾಯಿಗೆ ಬಂದಂಗೆ ಮಾತಾಡುತ್ತಾರೆ ಪ್ರಧಾನಿಗಳಿಗೆ ಚೆರ್ಚೆಗೆ ಕರೆಯುತ್ತಾರೆ. 1973 ರಲ್ಲಿ ಕೇರಳ ಹೈಕೋರ್ಟ್ ಮತ್ತು ಸುಪ್ರೀಕೋರ್ಟ್ ಹೇಳುತ್ತೆ ಸಂವಿಧಾನದ ಮೂಲ ಪಿಠೀಕೆಯನ್ನು ಬದಲಿಸಬಾರದು ಅಂತ. ನಾನು ಕೂಡ ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿ ಬಂದವನು. ಅಂಬೇಡ್ಕರ್ ಗಿಂತ ಸಿದ್ದರಾಮಯ್ಯ ದೊಡ್ಡವರಾ? ಅವರಿಗಿಂತ ಇವರಿಗೆ ಹೆಚ್ಚು ಗೊತ್ತಾ. ಅಂಬೇಡ್ಕರ್ ಅವರನ್ನ ಸೊಲಿಸಿದ ಪಕ್ಷ ಕಾಂಗ್ರೆಸ್. ಅಂಬೇಡ್ಕರ್ ಶವ ಸಂಸ್ಕಾರ ಸಹ ಮಾಡಲು ಸಹ ಜಾಗ ಕೊಡದ ಪಕ್ಷ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಹೇಳುತ್ತಾರೆ ಆರ್ ಎಸ್ಎಸ್ ಮುಖವಾಡ ಮತ್ತೆ ಕಳಚಿದೆ ಅನ್ನುತ್ತಾರೆ. ದತ್ತಾತ್ರೇಯ ಹೊಸಬಾಳೆ ತುರ್ತು ಪರಿಸ್ಥಿತಿಯಲ್ಲಿ ಈ ಎರಡು ಪದ ಸೇರಿಸಿದ್ದಾರೆ ಅಂದಿದ್ದಾರೆ. ಜಯರಾಮ್ ರಮೇಶ್ ಬಾಳಂಗೊಚಿ ಸಹ ಮಾತಾಡಿದ್ದಾರೆ. ಆರ್ಎಸ್ಎಸ್ , ಬಿಜೆಪಿ ಮೇಲೆ ಹಾಕಿ ಸಿದ್ದರಾಮಯ್ಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ್ ಆಶಯದ ವಿರುದ್ದ ಹೋಗುವುದು ಸರಿಯಿಲ್ಲ. ಸಂವಿಧಾನದ ಮೂಲ ಪೀಠಿಕೆಯನ್ನು ಬಿಟ್ಟು ಹೋಗಬಾರದು ಇದು ನನ್ನ ವಾದ. ಜಾತ್ಯಾತೀತ ಮತ್ತು ಸಮಾಜವಾದಿ ಪದವನ್ನು ಸೇರಿಸಿದ್ದು ತಪ್ಪು. ಆರ್ ಎಸ್ಎಸ್ ಬೇರೆ ಬಿಜೆಪಿ ಬೇರೆ ಆರ್ಎಸ್ಎಸ್ ಹೇಳಿದ್ದನ್ನೆಲ್ಲ ಬಿಜೆಪಿ ಕೇಳಬೇಕು ಅಂತೆನಿಲ್ಲ ಎಂದರು.
ನಾನು ಬಿಜೆಪಿ ಬಿಟ್ಟು ಯಾವ ಪಕ್ಷಕ್ಕೂ ಹೋಗಲ್ಲ
ಹಿಂದೂತ್ವ ಯಶಸ್ವಿಯಾದ್ರೆ ಹಿಂದೂ ಸಮಾಜದ ಎಲ್ಲಾ ಜಾತಿಗಳು ಯಶಸ್ವಿಯಾಗುತ್ತೆ. ಎಲ್ಲಾ ಜಾತಿಯವರು ನನಗೆ ಪೋನ್ ಮಾಡುತ್ತಿದ್ದಾರೆ ಬಿಜೆಪಿ ಸೇರಿ ಅಂತ. ನಾನು ಬಿಜೆಪಿಯ ಅನೇಕರ ಬಳಿ ಮಾತಾಡಬೇಕು ಆ ನಂತರ ಬಿಜೆಪಿ ಸೇರುತ್ತೇನೆ. ನಾನು ಬಿಜೆಪಿ ಬಿಟ್ಟು ಯಾವ ಪಕ್ಷಕ್ಕೂ ಹೋಗಲ್ಲ. ಬೇರೆ ಪಕ್ಷದವರು ನನಗೆ ಆಫರ್ ನೀಡುತ್ತಿದ್ದಾರೆ ನಿಮ್ಮ ಮಗನಿಗೆ ಕರ್ಕೊಂಡು ಬನ್ನಿ. ನಿಮಗೇನು ಬೇಕು ನಿಮ್ಮ ಮಗನಿಗೆ ಏನ್ ಕೊಡಬೇಕು ಅಂತ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಇಳಿತಾರೋ ಹೋಗ್ತಾರೋ ಎನ್ನುವ ಚರ್ಚೆಗೆ ಕ್ರಾಂತಿ ಅಂತ ಹೆಸರು ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಬಾಗಿಲು ಒದ್ದು ಒಳಗಡೆ ಬರ್ತಾರೋ ಗೊತ್ತಿಲ್ಲ. ಸುರ್ಜೇವಾಲ ಕೇವಲ 40 ಜನರನ್ನ ಮಾತ್ರ ಕರೆದು ಮಾತಾಡುತ್ತಿದ್ದಾರೆ. ರಾಜಣ್ಣ ಸೆಪ್ಟೆಂಬರ್ ನಲ್ಲಿ ಕ್ರಾಂತಿ ಆಗುತ್ತೆ ಅಂದಿದ್ದಾರೆ. ಕಾದು ನೋಡೋಣ ಏನ್ ಏನ್ ಆಗುತ್ತೆ ಅಂತ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.
Key words: secular, socialist, word, KS Eshwarappa, CM Siddaramaiah
The post ಸಂವಿಧಾನದಲ್ಲಿ ಜಾತ್ಯಾತೀತ, ಸಮಾಜವಾದಿ ಪದ : ಸಿಎಂಗೆ ಮೂರು ಪ್ರಶ್ನೆಗಳನ್ನಾಕಿ ಕುಟುಕಿದ ಕೆ.ಎಸ್ ಈಶ್ವರಪ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.