12
July, 2025

A News 365Times Venture

12
Saturday
July, 2025

A News 365Times Venture

ಸಚಿವ ಈಶ್ವರ್ ಖಂಡ್ರೆ ಸೂಚನೆ: 4000 ಕೋಟಿ ರೂ. ಮೌಲ್ಯದ 120 ಎಕರೆ ಅರಣ್ಯ ಭೂಮಿ ಮರು ವಶ

Date:

ಬೆಂಗಳೂರು, ಜೂನ್,23,2025 (www.justkannada.in): ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಅವರ ಸೂಚನೆ ಮೇರೆಗೆ ಬೆಂಗಳೂರು ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿ, ಕಾಡುಗೋಡಿ ಪ್ಲಾಂಟೇಷನ್ ನ  ಸರ್ವೆ ನಂ.1ರಲ್ಲಿ 120 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ.

ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಇಂದು ಬೆಳಗ್ಗೆಯೇ ಜೆಸಿಬಿಯೊಂದಿಗೆ ಕಾರ್ಯಾಚರಣೆಗೆ ಇಳಿದ ಬೆಂಗಳೂರು ನಗರ  ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ಕಾಡುಗೋಡಿಯ ಪ್ಲಾಂಟೇಷನ್ ನ ಅರಣ್ಯ ಭೂಮಿಯ ಒತ್ತುವರಿ ತೆರವು ಮಾಡಿ, ಮರು ವಶಕ್ಕೆ ಪಡೆದು, ಗಡಿ ಗುರುತಿಸಿ ಸ್ಥಳೀಯ ಪ್ರಭೇದದ ಸಸಿಗಳನ್ನು ನೆಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇಂದು ವಶಪಡಿಸಿಕೊಳ್ಳಲಾದ ಅರಣ್ಯ ಭೂಮಿಯ ಮಾರುಕಟ್ಟೆ ಮೌಲ್ಯ ಸುಮಾರು  4 ಸಾವಿರ ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಕಾಡುಗೋಡಿ ಅರಣ್ಯ ಪ್ರದೇಶ ಕುರಿತಂತೆ ಇತ್ತೀಚೆಗೆ ನಡೆದ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು,  ಬೆಂಗಳೂರು ವ್ಯಾಪಕವಾಗಿ ಬೆಳೆಯುತ್ತಿದ್ದು, ಹಸಿರು ಹೊದಿಕೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಹೀಗಾಗಿ ಶ್ವಾಸತಾಣಗಳ ಸಂರಕ್ಷಣೆ ಮಾಡಬೇಕು, ನಿಯಮಾನುಸಾರ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದರು.

2 ವರ್ಷದಲ್ಲಿ ಒಟ್ಟು 248 ಎಕರೆ ಅರಣ್ಯ ಒತ್ತುವರಿ ತೆರವು:

ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕಳೆದ 2 ವರ್ಷದಲ್ಲಿ ಬೆಂಗಳೂರಿನಲ್ಲಿ ಒಟ್ಟು 128 ಎಕರೆ ಅರಣ್ಯ ಭೂಮಿ ಒತ್ತವರಿ ತೆರವುಗೊಳಿಸಲಾಗಿದ್ದು,  ಈ 120 ಎಕರೆ ಸೇರಿದರೆ, ಒಟ್ಟು 248 ಎಕರೆ ಆಗಲಿದ್ದು, ಇದರ ಮಾರುಕಟ್ಟೆ ಮೌಲ್ಯ 8 ಸಾವಿರ ಕೋಟಿ ರೂ.ಗೂ ಅಧಿಕವಾಗಿದೆ.vtu

Key words: Minister, Ishwar Khandre, forest land, seize

The post ಸಚಿವ ಈಶ್ವರ್ ಖಂಡ್ರೆ ಸೂಚನೆ: 4000 ಕೋಟಿ ರೂ. ಮೌಲ್ಯದ 120 ಎಕರೆ ಅರಣ್ಯ ಭೂಮಿ ಮರು ವಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕೆಲವೇ ಶಾಸಕರ ಬೆಂಬಲ: ಸಿಎಂ ಹೇಳಿಕೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಏನು..?

ಬೆಂಗಳೂರು,ಜುಲೈ,11,2025 (www.justkannada.in): ಕೆಲವೇ ಶಾಸಕರ ಬೆಂಬಲ ಡಿಕೆ ಶಿವಕುಮಾರ್ ಗಿದೆ ಎಂಬ...

ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆ : ಸಿಎಂ ಸಿದ್ದರಾಮಯ್ಯ “ನಾಟಕ” ಮಾಡುತ್ತಿದ್ದಾರೆ – ಪ್ರಕಾಶ್ ರೈ.

ಮೈಸೂರು, ಜು.೧೧,೨೦೨೫ : ದೇವನಹಳ್ಳಿ ರೈತರು ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕೆಂಬ ಬೇಡಿಕೆಯ...

ಮೈಸೂರು: ಭೂಮಿ ಖರೀದಿಗೆ ಮುಂದಾದ KPTCL: ಭೂಮಾಲೀಕರಿಗೆ ಮನವಿ

ಮೈಸೂರು,ಜುಲೈ, 11, 2025 (www.justkannada.in): ಮೈಸೂರು ವ್ಯಾಪ್ತಿಯಲ್ಲಿ 220/66 ಕೆ.ವಿ ವಿದ್ಯುತ್‌...

ವೈದ್ಯೆಗೆ ವರದಕ್ಷಿಣೆ ಕಿರುಕುಳ, ಗರ್ಭಪಾತ: ಐವರ ವಿರುದ್ದ FIR

ಮೈಸೂರು,ಜುಲೈ,11,2025 (www.justkannada.in): ಮದುವೆಯಾದ ಎರಡೇ ತಿಂಗಳಿಗೆ ವೈದ್ಯೆಗೆ ಕಿರುಕುಳ ನೀಡಿ ಗರ್ಭಪಾತ...