16
July, 2025

A News 365Times Venture

16
Wednesday
July, 2025

A News 365Times Venture

ಸತತ ಪ್ರಯತ್ನ ಗುರಿ ಸಾಧನೆಗೆ ಸಹಕಾರಿ -ಖೋಖೋ ಕ್ರೀಡಾಪಟು ಬಿ. ಚೈತ್ರಾ

Date:

ಮೈಸೂರು, ಮೇ,7,2025 (www.justkannada.in): ವ್ಯಕ್ತಿ ಸತತ ಪ್ರಯತ್ನ ಮಾಡಿವುದೇ ಗುರಿ ಸಾಧನೆಗೆ ಸಹಕಾರಿ ಎಂದು ಅಂತರಾಷ್ಟ್ರೀಯ ಖೋಖೋ ಕ್ರೀಡಾಪಟು ಬಿ. ಚೈತ್ರಾ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಇಂದು ಜರುಗಿದ ಸಾಂಸ್ಕೃತಿಕ, ಕ್ರೀಡೆ, ಎನ್ ಎಸ್ ಎಸ್, ಎನ್ ಸಿಸಿ, ರೇಂಜರ್ಸ್ ಮತ್ತು ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಅವಿರತ ಪ್ರಯತ್ನ ಇಲ್ಲದೆ ಸಾಧನೆ ಅಸಾಧ್ಯ ಎಂದರು.

ಜೀವನದಲ್ಲಿ ಗುರಿ ಇರಬೇಕು. ಅದಿಲ್ಲದೆ ಬದುಕಿಲ್ಲ. ಆ ಗುರಿ ತಲುಪಲು ಗುರು ಇರಬೇಕು. ಗುರು ಇಲ್ಲದೆ ಅದು ಕಷ್ಟ ಸಾಧ್ಯ .ಆದ್ದರಿಂದ, ಪರಿಶ್ರಮ ಇರಬೇಕು. ಇಲ್ಲದೆ ಹೋದರೆ ಯಾವುದೂ ಸಾಧ್ಯವಿಲ್ಲ, ಎಂದರು.

ಗುರಿ ತಲುಪಲು ಗುರುವಿನ ಮಾರ್ಗದರ್ಶನ ಪಡೆಯಿರಿ. ಅದು ಯಶಸ್ಸಿನ ಕಡೆಗಿನ ಹಾದಿಗೆ ಸುಲಭ ಮಾರ್ಗ ಎಂದು ಸಲಹೆ ನೀಡಿದ ಅವರು, ಓದುವುದರ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಇಲ್ಲವೇ ಕಲೆ ಇಂತಹ ಸಹ ಪಠ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಬಿ.ಮಠಕೆರೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ, ಲೇಖಕ ಸಂತೋಷ್ ಚೊಕ್ಕಾಡಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಣುಮಕ್ಕಳು ಗಣನೀಯ ಸಾಧನೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಅವಕಾಶ ಸಿಗಬೇಕು. ಹೆಣ್ಣು ಪ್ರಗತಿ ಸಾಧಿಸಿದರೆ ಇಡೀ ಸಮಾಜವೇ ಅಭಿವೃದ್ಧಿ ಹೊಂದಿದಂತೆ  ಎಂದರು.

ಖ್ಯಾತ ಗಾಯಕ ಮತ್ತು ಆಕಾಶವಾಣಿ ಕಲಾವಿದ ನಿತಿನ್ ರಾಜಾರಾಂ ಶಾಸ್ತ್ರೀ ಅವರು ತಮ್ಮ ಗಾಯನದ ಮೂಲಕ ರಂಜಿಸಿದರು.

ಇಂಗ್ಲಿಷ್ ವಿಭಾಗದ ವತಿಯಿಂದ ವಿದ್ಯಾರ್ಥಿಗಳೇ ಸಿದ್ಧಪಡಿಸಿದ, ಖ್ಯಾತ ಕಾದಂಬರಿಕಾರ ಆರ್.ಕೆ. ನಾರಾಯಣ್ ಅವರ ಟಾಕೆಟಿಕ್ ಮ್ಯಾನ್ ಕಾದಂಬರಿಯ ಡಿಕ್ಷನರಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನೆನಪಿನ ಕಾಣಿಕೆ ಮತ್ತು ಬಹುಮಾನ ವಿತರಿಸಲಾಯಿತು. ರಾಜ್ಯ ಮಟ್ಟದಲ್ಲಿ ಪುರಸ್ಕೃತರಾದ ರೇಂಜರ್ಸ್ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ಸಾಹುಕಾರ ಹುಂಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಮೇಶ್, ನಿರ್ದೇಶಕ ದೊರೆಸ್ವಾಮಿ ನಾಯಕ, ಕಾಲೇಜು ಪ್ರಾಂಶುಪಾಲ ಪ್ರೊ.ಅಬ್ದುಲ್ ರಹಿಮಾನ್ ಎಂ., ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಕೆ.ಪಿ. ಕೋಮಲ್, ಖಜಾಂಚಿ ಡಾ. ಜಿ.ಎಲ್.ಬಸವರಾಜು, ಎನ್.ಎಸ್.ಎಸ್.ಅಧಿಕಾರಿಗಳಾದ ಭೀಮೇಶ್ ಎಚ್.ಜೆ., ಲತಾರಾಣಿ ಎಚ್.ಎಂ, ದೈಹಿಕ ಶಿಕ್ಷಣ ನಿರ್ದೇಶಕಿ ಪ್ರತಿಮಾ ಕೆ. ಆರ್, ಎನ್.ಎಸ್.ಎಸ್.ಅಧಿಕಾರಿ ಮಮತಾ ಎಂ, ರೇಂಜರ್ಸ್ ಅಧಿಕಾರಿ ಮಂಜುಳಾ ಶೇಷಗಿರಿ, ಯುವ ರೆಡ್ ಕ್ರಾಸ್ ಅಧಿಕಾರಿ ಕುಮಾರ್ ಎಂ.ಎಸ್, ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್, ವಿದ್ಯಾರ್ಥಿ ಸಂಸತ್ ನ ಕಾವ್ಯ ಎಂ ಕಟ್ಟಿ, ಜೀವಿತ ವಿ, ದೀಕ್ಷಿತ ಎಸ್. ರಕ್ಷಿತಾ ಎಚ್.  ಕೆ, ಜೇ, ಭೂಮಿಕಾ, ಬೃಂದಾ ಏ, ಶ್ರೀರಕ್ಷ ಬೀ.ಎಂ, ಲೇಖನ ಅರಸ್, ದಿವ್ಯಶ್ರೀ ಎಂ, ಅಮೃತಾ ಟಿ.ಎಚ್, ಲಕ್ಷ್ಮೀ ಕೆ.ಎಸ್, ಕಾವೇರಿ ಬೀ. ಎನ್, ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಇದ್ದರು.

Key words: Consistent effort, helps, achieving goals, Kho-Kho athlete, B. Chaitra

The post ಸತತ ಪ್ರಯತ್ನ ಗುರಿ ಸಾಧನೆಗೆ ಸಹಕಾರಿ -ಖೋಖೋ ಕ್ರೀಡಾಪಟು ಬಿ. ಚೈತ್ರಾ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಆ.15ರೊಳಗೆ ಒಳ ಮೀಸಲಾತಿ ಜಾರಿಯಾಗದಿದ್ರೆ ಕರ್ನಾಟಕ ಬಂದ್- ಎ. ನಾರಾಯಣಸ್ವಾಮಿ

ಬೆಂಗಳೂರು,ಜುಲೈ,16,2025 (www.justkannada.in):   ಒಳ ಮೀಸಲಾತಿ ಜಾರಿಗೆ ತೀವ್ರ ವಿಳಂಬ ಮಾಡುತ್ತಿರುವ ರಾಜ್ಯ...

ಜು.19ರಂದು ಮೈಸೂರಿನಲ್ಲಿ ಸಾಧನ ಸಮಾವೇಶ: ವೇದಿಕೆ ಸ್ಥಳ ಪರಿಶೀಲನೆ ನಡೆಸಿದ ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರು,ಜುಲೈ,16,2025 (www.justkannada.in):  ಜುಲೈ 19 ರಂದು ಮೈಸೂರಿನಲ್ಲಿ ಕಾಂಗ್ರೆಸ್ ಸಾಧನ ಸಮಾವೇಶ...

ಆ.5 ರಂದು KSRTC, BMTC ಸೇರಿ 4 ನಿಗಮಗಳಿಂದ ಸಾರಿಗೆ ಮುಷ್ಕರ

ಬೆಂಗಳೂರು, ಜುಲೈ, 16,2025 (www.justkannada.in): ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನಿಗಮಗಳ...

BJP ತನ್ನ ಹುಟ್ಟಿನಿಂದಲೇ ಸಾಮಾಜಿಕ ನ್ಯಾಯದ ಮತ್ತು ಮೀಸಲಾತಿ ಪರವಾಗಿ ಇಲ್ಲ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜುಲೈ,16,2025 (www.justkannada.in): ಬಿಜೆಪಿ ತನ್ನ ಹುಟ್ಟಿನಿಂದಲೇ ಸಾಮಾಜಿಕ ನ್ಯಾಯದ ಪರವಾಗಿ ಇಲ್ಲ,...